ಬಿಸಿ ಬಿಸಿ ಸೂಪ್ ಕುಡಿಯುತ್ತಿದ್ದರೆ ಅದರ ಮಜಾವೇ ಬೇರೆ. ಅದರಲ್ಲೂ ಸಿಹಿಗೆಣಸಿನಲ್ಲಿ ನಾರಿನಾಂಶ ಹೇರಳವಾಗಿದೆ. ಇದು ಆರೋಗ್ಯಕ್ಕೂ ತುಂಬಾ ಒಳ್ಳೆಯದು.
ಬೇಕಾಗುವ ಸಾಮಾಗ್ರಿಗಳು:
ಸಿಹಿ ಗೆಣಸು-1, ಬೆಣ್ಣೆ-1 ಟೀ ಸ್ಪೂನ್, ಶುಂಠಿ ತುರಿ-1/2 ಟೀ ಸ್ಪೂನ್, ಉಪ್ಪು-ರುಚಿಗೆ ತಕ್ಕಷ್ಟು, ಕಾಳುಮೆಣಸಿನ ಪುಡಿ-1/4 ಟೀ ಸ್ಪೂನ್, ತೆಂಗಿನಕಾಯಿ ಹಾಲು-2 ಟೇಬಲ್ ಸ್ಪೂನ್, ನೀರು- ಅಗತ್ಯವಿರುವಷ್ಟು, ಲಿಂಬೆಹಣ್ಣಿನ ರಸ-1 ಟೀ ಸ್ಪೂನ್, ಪುದೀನಾ ಎಲೆ-4 ಕತ್ತರಿಸಿದ್ದು.
ಮಾಡುವ ವಿಧಾನ:
ಮೊದಲಿಗೆ ಸಿಹಿ ಗೆಣಸಿನ ಸಿಪ್ಪೆ ತೆಗೆದು ಹೋಳುಗಳನ್ನಾಗಿ ಮಾಡಿಕೊಳ್ಳಿ. ಒಂದು ಪಾತ್ರೆಗೆ ಹಾಕಿ ಇದರ ಜೊತೆಗೆ ನೀರು ಹಾಕಿ ಬೇಯಿಸಿಕೊಳ್ಳಿ. ಇದು ಮೆತ್ತಗಾದ ನಂತರ ಗ್ಯಾಸ್ ಆಫ್ ಮಾಡಿ. ನಂತರ ಒಂದು ಮಿಕ್ಸಿ ಜಾರಿಗೆ ಹಾಕಿ ರುಬ್ಬಿಕೊಳ್ಳಿ. ನಂತರ ಒಂದು ಪ್ಯಾನ್ ನಲ್ಲಿ ಬೆಣ್ಣೆ ಬಿಸಿ ಮಾಡಿಕೊಂಡು ಶುಂಠಿ ತುರಿ ಹಾಕಿಕೊಂಡು ತುಸು ಫ್ರೈ ಮಾಡಿಕೊಳ್ಳಿ.
ಹಬ್ಬದಲ್ಲಿ ಶಾಪಿಂಗ್ ಮಾಡಲು ಹಣವಿಲ್ವಾ…? ಚಿಂತೆ ಬೇಡ, ಇಲ್ಲಿ ಸಿಗುತ್ತೆ ಸಾಲ
ನಂತರ ಸಿಹಿಗೆಣಸಿನ ಮಿಶ್ರಣವನ್ನು ಹಾಕಿಕೊಳ್ಳಿ, ಇದಕ್ಕೆ ಉಪ್ಪು, ಕಾಳುಮೆಣಸಿನ ಪುಡಿ ಸೇರಿಸಿ 2 ಕಪ್ ನೀರು ಹಾಕಿ 36 ನಿಮಿಷಗಳ ಕಾಲ ಚೆನ್ನಾಗಿ ಬೇಯಿಸಿಕೊಳ್ಳಿ. ಕೈಬಿಡದೆ ಮಿಕ್ಸ್ ಮಾಡಿಕೊಳ್ಳಿ. ನಂತರ ತೆಂಗಿನಕಾಯಿ ಹಾಲು ಹಾಕಿ 3 ನಿಮಿಷಗಳ ಕಾಲ ಬೇಯಿಸಿಕೊಳ್ಳಿ. ನಂತರ ಗ್ಯಾಸ್ ಆಫ್ ಮಾಡಿ. ಲಿಂಬೆಹಣ್ಣಿನ ರಸ, ಪುದೀನಾ ಎಲೆಗಳನ್ನು ಸೇರಿಸಿ ಸವಿಯಿರಿ.