ಕೊಪ್ಪಳ: ಶಿಕ್ಷಕರಿಗೆ ನಾಲೆಡ್ಜ್ ಇರಲ್ಲ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಕ್ಷರಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಕೊಪ್ಪಳದ ಸಾಹಿತ್ಯ ಭವನದಲ್ಲಿ ನಡೆದ ಅಭಿನಂದನಾ ಸಭೆ ಮತ್ತು ಸಂವಾದ ಕಾರ್ಯಕ್ರಮದಲ್ಲಿ ಶಿಕ್ಷಕರೊಬ್ಬರ ಪ್ರಶ್ನೆಗೆ ಉತ್ತರಿಸುತ್ತಿದ್ದ ಷಡಕ್ಷರಿ ಅವರು ಈ ಕುರಿತಾಗಿ ಹೇಳಿಕೆ ನೀಡಿದ್ದಾರೆ.
ಶಿಕ್ಷಕ ಬಾಳಪ್ಪ ಕಾಳೆ ಕೇಳಿದ ಪ್ರಶ್ನೆಗೆ ಉತ್ತರಿಸುವ ವೇಳೆ ಶಿಕ್ಷಕರಿಗೆ ನಾಲೆಡ್ಜ್ ಇರಲ್ಲ ಎಂದು ಷಡಕ್ಷರಿ ಹೇಳಿದ್ದು, ಇದಕ್ಕೆ ಬಾಳಪ್ಪ ಕಾಳೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ನಾನು ಹೇಳುವುದನ್ನು ಕೇಳಿಸಿಕೊಳ್ಳಿ, ಅಕಾಡೆಮಿಕ್ ನಾಲೆಡ್ಜ್ ಬೇರೆ, ಅಡ್ಮಿನಿಸ್ಟ್ರೇಷನ್ ನಾಲೆಡ್ಜ್ ಬೇರೆ. ನಾನು ಅಡ್ಮಿನಿಸ್ಟ್ರೇಷನ್ ಬಗ್ಗೆ ಮಾತನಾಡುತ್ತಿದ್ದೇನೆ. ಕೆಲವರಿಗೆ ಕಂಪ್ಯೂಟರ್ ನಾಲೆಡ್ಜ್ ಇರುವುದಿಲ್ಲ. ಇದರಿಂದ ಸೆನ್ಸಸ್ ವೇಳೆ ಎಷ್ಟು ಸಮಸ್ಯೆಯಾಗಿದೆ ಎಂದು ಷಡಕ್ಷರಿ ತಿಳಿಸಿದ್ದಾರೆ.
ಅವರ ಹೇಳಿಕೆಗೆ ಶಿಕ್ಷಕರ ವಲಯದಿಂದ ಆಕ್ಷೇಪ ವ್ಯಕ್ತವಾಗಿದೆ. ಷಡಕ್ಷರಿ ಅವರು ಶಿಕ್ಷಕರಿಗೆ ನಾಲೆಡ್ಜ್ ಇರಲ್ಲ ಎಂದು ಅಪ್ರಬುದ್ಧ ಹೇಳಿಕೆ ನೀಡಿದ್ದಾರೆ ಎಂದು ವಿರೋಧ ವ್ಯಕ್ತಪಡಿಸಿದ್ದಾರೆ.
