
ಮಹಾಶಿವರಾತ್ರಿ ಸಂದರ್ಭದಲ್ಲಿ ಸಾಲು ಸಾಲು ಅಪಘಾತ, ದುರಂತ ಪ್ರಕರಣಗಳು ನಡೆದಿದೆ. ತೀರ್ಥ ಸ್ನಾನಕ್ಕೆಂದು ನದಿಗೆ ಇಳಿದಿದ್ದ ಮೂವರು ಸಹೋದರಿಯರು ಸೇರಿ ಆರು ಜನರು ನೀರು ಪಾಲಾಗಿರುವ ಘಟನೆ ಮಹಾರಾಷ್ಟ್ರದ ಚಂದ್ರಾಪುರದಲ್ಲಿ ನಡೆದಿದೆ.
ರಾಜುರಾ ಹಾಗೂ ಸಾವ್ಲಿ ಎಂಬ ಎರಡು ಪ್ರತ್ಯೇಕ ಘಟನೆಯಲ್ಲಿ ಈ ದುರಂತ ಸಂಭವಿಸಿದೆ. ಚಂದ್ರಾಪುರ ಬಳಿಯ ಮಾರ್ಕಾಂಡ ದೇವಸ್ಥಾನಕ್ಕೆ ಸಾವ್ಲಿಯ ಮಂಡಲ್ ಕುಟುಂಬ ದರ್ಶನಕ್ಕೆ ತೆರಳಿತ್ತು. ಈ ವೇಳೆ ಗಡ್ಚಿರೋಲಿ ಮಾರ್ಗವಾಗಿ ಹೋಗುತ್ತಿದ್ದ ವೇಳೆ ವೈನ್ ಗಂಗಾ ನದಿ ನೋಡಿದ ಕುಟುಂಬದವರು ನದಿಯಲ್ಲಿ ಸ್ನಾನಕ್ಕೆ ಇಳಿದಿದ್ದಾರೆ. ನೀರಿನಲ್ಲಿ ಸ್ನಾನ ಮಡುತ್ತಿದ್ದ ವೇಳೆ ಓರ್ವ ಸಹೋದರಿ ನೀರಿನ ಸೆಳೆತಕ್ಕೆ ಕೊಚ್ಚಿಕೊಂಡು ಹೋಗಿದ್ದಾಳೆ. ಆಕೆಯನ್ನು ರಕ್ಷಿಸಲು ಹೋದ ಇನ್ನಿಬ್ಬರು ಸಹೋದರಿಯರು ಕೂಡ ನೀರುಪಾಲಾಗಿದ್ದಾರೆ.
ಕುಟುಂಬದವರ ಕಣ್ಮುಂದೆಯೇ ಮೂವರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಪ್ರತಿಮಾ, ಲಿಪಿಕಾ ಹಾಗೂ ಕವಿತಾ ಮೃತ ಸಹೋದರಿಯರು.
ಇದೇ ಸಂದರ್ಭದಲ್ಲಿ ರಾಜುರಾ ತಾಲೂಕಿನ ವಾರ್ಧಾ ನದಿಯಲ್ಲಿ ಮತ್ತೊಂದು ದುರಂತ ಸಂಭವಿಸಿದೆ. ನದಿ ಸ್ನಾನಕ್ಕೆಂದು ಇಳಿದಿದ್ದ ಮೂವರು ಯುವಕರು ನೀರಿನಲ್ಲಿ ಮುಳುಗಿ ಸಾವನ್ನಪಿದ್ದಾರೆ.
ತುಷಾರ್ ಶಾಲಿಕ್ (17), ಮಂಗೇಶ್ ಬಂಡು (20) ಅನಿಕೇತ್ ಶಂಕರ್ ಕೊಡಪೆ (18) ಮೃತ ಯುವಕರು.