
ಬೆಂಗಳೂರು: ಗ್ರಾಹಕರಿಗೆ ತಾಜಾ, ಹಣ್ಣು ತರಕಾರಿಗಳನ್ನು ಮನೆ ಬಾಗಿಲಿಗೆ ತಲುಪಿಸಲು ಹಾಪ್ ಕಾಮ್ಸ್ ನಿಂದ ವಾಟ್ಸಾಪ್ ಸೇಲ್ಸ್ ಚಾನಲ್ ಆರಂಭಿಸಲು ಸಿದ್ಧತೆ ಕೈಗೊಳ್ಳಲಾಗಿದೆ.
ಮಾರ್ಚ್ ಮೊದಲ ವಾರ ವಾಟ್ಸಾಪ್ ಸೇಲ್ಸ್ ಚಾನಲ್ ಆರಂಭಿಸಲಿದ್ದು, ಮೊದಲ ಹಂತದಲ್ಲಿ ಬೆಂಗಳೂರಿನ ನಾಲ್ಕೈದು ಅಪಾರ್ಟ್ಮೆಂಟ್ ಗಳಿಗೆ ಪ್ರಾಯೋಗಿಕವಾಗಿ ಹಣ್ಣು, ತರಕಾರಿ ಸರಬರಾಜು ಮಾಡಲಿದ್ದು, ಇದು ಯಶಸ್ವಿಯಾದಲ್ಲಿ ಎಲ್ಲಾ ಅಪಾರ್ಟ್ಮೆಂಟ್ ಗಳಿಗೆ ವಿಸ್ತರಿಸುವ ಗುರಿ ಗೊಂದಲಾಗಿದೆ.
ಈ ಮೂಲಕ ಪ್ರತಿದಿನ ವ್ಯರ್ಥವಾಗಿ ಹಾಳಾಗುತ್ತಿರುವ ಹಣ್ಣು ತರಕಾರಿಗಳನ್ನು ಉಳಿಸುವ ಯೋಜನೆ ರೂಪಿಸಲಾಗಿದೆ. ಈ ಆ್ಯಪ್ ನಿರ್ವಹಣೆಗೆ 24 ಗಂಟೆಯೂ ಕಾರ್ಯನಿರ್ವಹಿಸುವ ತಂಡ ರಚಿಸಲಾಗುತ್ತಿದೆ. ಈ ಚಾನಲ್ ಮೂಲಕ ಅಪಾರ್ಟ್ಮೆಂಟ್ ನಿವಾಸಿಗಳಿಗೆ ಹಾಪ್ ಕಾಮ್ಸ್ ನಲ್ಲಿ ಲಭ್ಯವಿರುವ ಹಣ್ಣು, ತರಕಾರಿಗಳ ಮಾಹಿತಿ ಒದಗಿಸಲಿದ್ದು, ಆಸಕ್ತರು ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ನೋಂದಣಿಯಾಗಬೇಕು. ಈ ವಾಟ್ಸಪ್ ಸೇಲ್ಸ್ ಚಾನೆಲ್ ನಲ್ಲಿ 150ಕ್ಕೂ ಹೆಚ್ಚು ಬಗೆಯ ತರಕಾರಿ ಹಣ್ಣುಗಳ ಪಟ್ಟಿ, ದರ ಸಿಗುವ ರೀತಿ ಮಾಹಿತಿ ದಾಖಲಾಗಿರುತ್ತದೆ.
ಗ್ರಾಹಕರು ತಮಗೆ ಬೇಕಾದ ಕಣ್ಣು ತರಕಾರಿ ಆಯ್ಕೆ ಮಾಡಿಕೊಳ್ಳಬಹುದ. ಆಯಾ ಅಪಾರ್ಟ್ಮೆಂಟ್ ಗಳಲ್ಲಿರುವ ಫ್ಲ್ಯಾಟ್ ಗಳಿಗೆ ಆನ್ಲೈನ್ ಪೇಮೆಂಟ್ ಇಲ್ಲವೇ ಕ್ಯಾಶ್ ಆನ್ ಡೆಲಿವರಿ ವ್ಯವಸ್ಥೆ ಮೂಲಕ ತಲುಪಿಸಲಾಗುವುದು. ಸ್ವಿಗ್ಗಿ, ಜೊಮ್ಯಾಟೋ ಮಾದರಿಯಲ್ಲಿ ಗ್ರಾಹಕರ ಮನೆ ಬಾಗಿಲಿಗೆ ಹಣ್ಣು, ತರಕಾರಿ ಡೆಲಿವರಿ ಮಾಡಲಾಗುವುದು ಎನ್ನಲಾಗಿದೆ.