alex Certify BREAKING : ಹಾವೇರಿಯಲ್ಲಿ 15,000 ಲಂಚ ಪಡೆಯುತ್ತಿದ್ದ ಭೂಮಾಪಕ ಲೋಕಾಯುಕ್ತ ಬಲೆಗೆ |Lokayukta Raid | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING : ಹಾವೇರಿಯಲ್ಲಿ 15,000 ಲಂಚ ಪಡೆಯುತ್ತಿದ್ದ ಭೂಮಾಪಕ ಲೋಕಾಯುಕ್ತ ಬಲೆಗೆ |Lokayukta Raid

ಹಾವೇರಿ : 25 ಸಾವಿರ ಲಂಚಕ್ಕೆ ಬೇಡಿಕೆಯಿಟ್ಟು 15,000 ಪಡೆಯುತ್ತಿದ್ದ ಭೂಮಾಪಕ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ಹಾವೇರಿಯಲ್ಲಿ ನಡೆದಿದೆ.

ಹಾವೇರಿ ತಾಲೂಕಿನ ಕಳ್ಳಿಹಾಳ ಗ್ರಾಮದ ರೈತ ಮಂಜುನಾಥ್ ಕಡ್ಲಿ ಅವರು ಜಮೀನಿನ ವಾಟ್ನಿ ಮಾಡಿಸಲು ಅರ್ಜಿ ಸಲ್ಲಿಸಿದ್ದರು. ಅದಕ್ಕೆ ಬೇಕಾದ ಜಮೀನಿನ ನಕಾಶೆ ನೀಡಲು ಅವರು ಕೋರಿದ್ದರು. ಆದರೆ ಭೂಮಾಪಕ ಅಶೋಕ್ 30 ಸಾವಿರ ಲಂಚ ಕೇಳಿದ್ದರು. ಕೊನೆಗೂ 25 ಸಾವಿರಕ್ಕೆ ಓಕೆ ಆಗಿತ್ತು.

ಈ ಸಂಬಂಧ ಮಂಜುನಾಥ್ ಲೋಕಾಯುಕ್ತ ಕಚೇರಿಗೆ ದೂರು ಸಲ್ಲಿಸಿದ್ದರು. ಅಶೋಕ್ ಮುಂಗಡವಾಗಿ 15 ಸಾವಿರ ಲಂಚ ಪಡೆಯುವ ವೇಳೆ ಲೋಕಾಯುಕ್ತ ಅಧಿಕಾರಿಗಳ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಹಾಕಿಕೊಂಡಿದ್ದಾರೆ.

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...