ಬಳ್ಳಾರಿ: ಬಳ್ಳಾರಿಯ ಬಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದ ನಾಲ್ವರು ಬಾಣಂತಿಯರು ಹೆರಿಗೆ ಬಳಿಕ ಸಾವನ್ನಪ್ಪಿದ್ದು, ಐವಿ ಗ್ಲುಕೋಸ್ ದೋಷವೇ ಕಾರಣ ಎಂದು ತನಿಖಾ ವರದಿಯಲ್ಲಿ ಹೇಳಲಾಗಿದೆ. ಇದರ ಬೆನ್ನಲ್ಲೇ ಐವಿ ದ್ರಾವಣ ಬಳಕೆ ನಿಷೇಧಿಸಲಾಗಿದೆ. ಆದರೆ ಆಸ್ಪತ್ರೆಯಲ್ಲಿ ದಾಖಲಾಗಿರುವ ಮೂವರು ಗರ್ಭಿಣಯರಲ್ಲಿ ಇಲಿಜ್ವರ ಪತೆಯಾಗಿರುವುದು ಹೊಸ ಆತಂಕಕ್ಕೆ ಕಾರಣವಾಗಿದೆ.
ನವೆಂಬರ್ 9ರಂದು ಬಿಮ್ಸ್ ಆಸ್ಪತ್ರೆಗೆ 7 ಗರ್ಭಿಣಿಯರು ದಾಖಲಾಗಿದ್ದು, ಅವರಲ್ಲಿ ನಾಲ್ವರು ಹೆರಿಗೆ ಬಳಿಕ ಸಾವನ್ನಪ್ಪಿದ್ದಾರೆ. ಉಳಿದ ಊವರು ಗರ್ಭಿನಿಯರಲ್ಲಿ ಇಲಿಜ್ವರ ಪತ್ತೆಯಾಗಿದೆ. ಅವರಲ್ಲಿ ಇಬ್ಬರು ಡಿಸ್ಚಾರ್ಜ್ ಆಗಿದ್ದು, ಓರ್ವ ಬಾಣಂತಿಗೆ ಆಸ್ಪತ್ರೆಯಲ್ಲಿಇ ಚಿಕಿತ್ಸೆ ಮುಂದುವರೆದಿದೆ.
ಆಸ್ಪತ್ರೆಗೆ ದಾಖಲಾಗಿದ್ದ ಗರ್ಭಿಣಿಯರಿಗೆ ಸಿಸೇರಿಇಯನ್ ಬಳಿಕ ಅವರ ಆರೋಗ್ಯದಲ್ಲಿ ಏರುಪೇರಾಗಿಇತ್ತು. ನಾಲ್ವರು ಬಾಣಂತಿಯರು ಸಾವನ್ನಪ್ಪಿದ್ದಾರೆ. ಇನ್ನುಳಿದ ಮೂವರಲ್ಲಿ ಇಲಿ ಜ್ವರ ದೃಢಪಟ್ಟಿದೆ. ಇಬ್ಬರು ಇಲಿಜ್ವರದಿಂದ ಗುಣಮುಖರಾಗಿಇ ಡುಸ್ಚಾರ್ಜ್ ಆಗಿದ್ದಾರೆ. ಓರ್ವ ಬಾಣಂತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಬಿಮ್ಸ್ ನಿರ್ದೇಶಕ ಡಾ.ಗಂಗಾಧರ ಮಾಹಿತಿ ನೀಡಿದ್ದಾರೆ.