ಬೆಂಗಳೂರು : ಕೆಂಪೇಗೌಡ ಏರ್ ಪೋರ್ಟ್ ನಲ್ಲಿ 121 ಇಂಡಿಗೋ ವಿಮಾನಗಳ ಹಾರಾಟ ರದ್ದಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಬೆಳಗ್ಗೆಯಿಂದ ಮಧ್ಯರಾತ್ರಿವರೆಗೆ 121 ವಿಮಾನಗಳ ಹಾರಾಟ ರದ್ದಾಗಿದೆ ಎಂದು ಮೊದಲೇ ಸಿಬ್ಬಂದಿಗಳು ಪ್ರಯಾಣಿಕರಿಗೆ ಸಂದೇಶ ರವಾನಿಸಿದ್ದಾರೆ. ಏರ್ ಪೋರ್ಟ್ ಗೆ ನಿರ್ಗಮಿಸಬೇಕಿದ್ದ 63 ವಿಮಾನ ಹಾಗೂ ಆಗಮಿಸಬೇಕಿದ್ದ 58 ವಿಮಾನಗಳು ರದ್ದಾಗಿದೆ.
ಈಗಾಗಲೇ ಹಲವು ಪ್ರಯಾಣಿಕರು ಬೆಳ್ಳಂ ಬೆಳಗ್ಗೆ ಏರ್ಪೋರ್ಟ್ ಗೆ ಆಗಮಿಸಿದ್ದು, ಟರ್ಮಿನಲ್ 1 ರಲ್ಲಿ ಕಾದು ಕುಳಿತಿದಿದ್ದಾರೆ.
