ಬೆಂಗಳೂರು: ಕೆಲಸದ ಆಮಿಷವೊಡ್ಡಿ ಆಪ್ ವೊಂದರ ಮೂಲಕ ಯುವತಿಯರ ಪರಿಚಯಮಾಡಿಕೊಂಡು ಅವರ ಫೋಟೋ ಸಂಗ್ರಹಿಸಿ ಬಳಿಕ ಬ್ಯಾಕ್ ಮೇಲ್ ಮಾಡುತ್ತಿದ್ದ ಆರೋಪಿಯನ್ನು ಬೆಂಗಳೂರಿನ ಕಗ್ಗಲಿಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರುನ ಮಲ್ಲೇಶ್ವರಂ ನಿವಾಸಿ ಶವಶಂಕರ್ ಬಂಧಿತ ಆರೋಪಿ. ಯುವತಿಯರಿಗೆ ವರ್ಕ್ ಫ್ರಂ ಹೋಂ ಕೆಲಸ ಕೊಡುವುದಾಗಿ ನಂಬಿಸಿದ್ದ ಶಿವಶಂಕರ್ ಅವರಿಂದ ಬಯೋಡೇಟಾ, ಫೋಟೋ ಪಡೆದು ಬಳಿಕ ಫೋಟೀಗಳನ್ನು ಅಶ್ಲೀಲವಾಗಿ ಎಡಿಟ್ ಮಾಡಿ ಬೆದರಿಕೆ ಹಾಕುತ್ತಿದ್ದ. ಕೆಲ ದಿನಗಳ ಹಿಂದೆ ಕಗ್ಗಲಿಪುರ ವ್ಯಾಪ್ತಿಯ ಯುವತಿ ಶಿವಶಂಕರ್ ಗೆ ಪರಿಚಯವಾಗಿ ಕೆಲಸದ ಆಸೆಗಾಗಿ ಅರ್ಜಿ ಹೆಸರಲ್ಲಿ ೫೦೦ ರೂಪಾಯಿ ಕೊಟ್ಟಿದ್ದಳು.
ಆಕೆಯಿಂದ ಹಣ ಹಾಗೂ ಫೋಟೋ ಪಡೆದ ಶಿವಶಂಕರ್, ಫೋಟೋ ಅಶ್ಲೀಲವಾಗಿ ಎಡಿಟ್ ಮಾಡಿ ಬೇರೆಯವರಿಗೆ ಕಳುಹಿಸಿ ಕಿರುಕುಳ ನೀಡುತ್ತಿದ್ದ. ಬ್ಲ್ಯಾಕ್ ಮೇಲ್ ಮಾಡಲಾರಂಭಿಸಿದ್ದ. ಇದರಿಂದ ಒಂದ ಯುವತಿ ಕಗ್ಗಲಿಪುರ ಠಾಣೆಗೆ ದೂರು ನೀಡಿದ್ದಳು. ತನಿಖೆ ನಡೆಸಿದ ಪೊಲೀಸರು ಶಿವಶಂಕರ್ ನನ್ನು ಬಂಧಿಸಿದ್ದಾರೆ.
ಈತ ಮೂಲತಃ ಬಳ್ಳಾರಿಯವನಾಗಿದ್ದು, ಬೆಂಗಳೂರಿನಲ್ಲಿ ಕೊರಿಯರ್ ಹಾಗೂ ಓಲಾ ಬೈಕ್ ಚಾಲಕನಾಗಿ ಕೆಲಸ ಮಾಡುತ್ತಿದ್ದ ಎಂದು ತಿಳಿದುಬಂದಿದೆ.
