alex Certify
ಕನ್ನಡ ದುನಿಯಾ       Mobile App
       

Kannada Duniya

ಮನಸ್ಸು ಮಾಡಿದ್ರೆ ನಿಮ್ಮದಾಗುತ್ತೆ ಸ್ಕಾಟ್ಲಾಂಡ್ ನ ಈ ಸುಂದರ ಗ್ರಾಮ

village

ಸ್ಕಾಟ್ಲಾಂಡ್, ಪ್ರವಾಸಿಗರ ಸ್ವರ್ಗ. ಸಮುದ್ರ ಕಿನಾರೆಯ ಕಾಟೇಜ್ ನಲ್ಲಿ ಉಳಿಯೋದು ಅಂದ್ರೆ ಪ್ರವಾಸಿಗರಿಗೆ ಅಚ್ಚುಮೆಚ್ಚು. ಇನ್ಮೇಲೆ ಅಲ್ಲಿನ ಇಡೀ ಗ್ರಾಮವೊಂದನ್ನು ನಿಮ್ಮದಾಗಿಸಿಕೊಳ್ಳಬಹುದು. ಐಲ್ ಆಫ್ ಸ್ಕೈನಲ್ಲಿ ನಾಲ್ಕು ಕಾಟೇಜ್ ಹೌಸ್ ಗಳು ಮಾರಾಟಕ್ಕಿವೆ.

cottage

ಇವು ಕಲ್ಲಿನಿಂದ್ಲೇ ಮಾಡಿರುವ ಹಾಲಿಡೇ ಹೌಸ್ ಗಳು. ಈ ಮನೆಯಲ್ಲಿ ಎಣ್ಣೆ ಸ್ಟವ್ ಗಳಿವೆ. ಕಮಾನಿನ ಆಕಾರದ ಸೀಲಿಂಗ್, ಬಿಸಿಯಾದ ಸ್ಲೇಟ್ ಫ್ಲೋರಿಂಗ್, ಒಂದು ಕಿಂಗ್ ಬೆಡ್ ಹಾಗೂ ಮೇಲ್ಛಾವಣಿಯಲ್ಲಿ ಎರಡು ಅವಳಿ ಹಾಸಿಗೆಗಳನ್ನು ಹಾಕಲಾಗಿದೆ.

ಎರಡು ಕಾಟೇಜ್ ಗಳು ಅತ್ಯಂತ ಹಳೆಯವು, ಇನ್ನೆರಡನ್ನು ಇತ್ತೀಚೆಗೆ ನಿರ್ಮಾಣ ಮಾಡಲಾಗಿದೆ. ಸ್ಕಾಟ್ಲಾಂಡ್ ನ ವಿಶಿಷ್ಟ ಶೈಲಿಯಲ್ಲಿ ಇವುಗಳನ್ನು ಕಟ್ಟಲಾಗಿದೆ. ನಾಲ್ಕು ಕಾಟೇಜ್, ಒಂದು ಇಡೀ ಹಳ್ಳಿ ಹಾಗೂ ಸದ್ಯ ಇರುವ ಮಾಲೀಕನ 5 ಬೆಡ್ ರೂಂ ಹೌಸ್ ಮಾರಾಟಕ್ಕಿದೆ.

ಎಲ್ಗೊಲ್ ಹಾರ್ಬರ್ ನಿಂದ ಈ ಕಾಟೇಜ್ ಗಳು ಅತ್ಯಂತ ಸಮೀಪದಲ್ಲಿವೆ. ಮೀನುಗಾರರು, ಸಮುದ್ರದ ಬದುಕು, ಕ್ಯುಲಿನ್ ಪರ್ವತದ ವಿಹಂಗಮ ನೋಟವನ್ನು ಇಲ್ಲಿಂದ ಕಣ್ತುಂಬಿಕೊಳ್ಳಬಹುದು. ಈ ಗ್ರಾಮದ ಬೆಲೆ 1.6 ಮಿಲಿಯನ್ ಡಾಲರ್.

ಈ ಕಾಟೇಜ್ ಗಳನ್ನು ಬಾಡಿಗೆಗೆ ಕೊಡಲು ನಿಮಗೆ ಮನಸ್ಸಿಲ್ಲದೇ ಇದ್ರೆ ಬೇಸಿಗೆಯಲ್ಲಿ ರಜೆಯನ್ನು ಕಳೆಯಲು ಇಲ್ಲಿಗೆ ಬರಬಹುದು. ಸ್ನೇಹಿತರು, ಸಂಬಂಧಿಕರ ಜೊತೆಗೆ ಎಂಜಾಯ್ ಮಾಡಬಹುದು.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...