alex Certify
ಕನ್ನಡ ದುನಿಯಾ       Mobile App
       

Kannada Duniya

ಯಲ್ಲೊ ಸ್ಟೋನ್ ; ಇದು ಪ್ರಕೃತಿಯೇ ನಿರ್ಮಿಸಿದ ಜ್ವಾಲಾಮುಖಿ ಪಾರ್ಕ್

Yellowstone-National-Park

ವಸುಮತಿ ತನ್ನ ಮಡಿಲೊಳಗೆ ಅನೇಕ ರಹಸ್ಯಗಳನ್ನು ಅಡಗಿಸಿಕೊಂಡಿದ್ದಾಳೆ. ಅವುಗಳಲ್ಲಿ ಕೆಲವನ್ನು ಬೇಧಿಸಬಹುದು ಇನ್ನು ಕೆಲವು ಅಭೇದ್ಯ. ಕೆಲವು ವಿಚಿತ್ರ, ಕೆಲವು ನಂಬಲಾರದ ಸತ್ಯ.

ಇಂತಹುದೇ ಒಂದು ವರ್ಣರಂಜಿತ ತಾಣ ಯಲ್ಲೊಸ್ಟೋನ್. ಉತ್ತರ ಅಮೇರಿಕಾದ ವ್ಯೊಮಿಂಗ್ ರಾಜ್ಯದಲ್ಲಿರುವ ಇದರ ವ್ಯಾಪ್ತಿ ಮೊಂಟಾನಾ ಮತ್ತು ಇದಾಹೋ ರಾಜ್ಯಗಳಿಗೂ ಹಬ್ಬಿದೆ. ಸುಮಾರು 640 ಸಾವಿರ ವರ್ಷಗಳ ಹಿಂದೆ ಪೃಥ್ವಿಯ ಗರ್ಭದಿಂದ ಜ್ವಾಲಾಮುಖಿಯ ಮೂಲಕ ಹೊರಬಂದ ಲಾವಾ, ಯಲ್ಲೊ ಸ್ಟೋನ್ ನಿರ್ಮಾಣಗೊಳ್ಳಲು ಕಾರಣವಾಯ್ತು. ಸುಣ್ಣದ ಕಲ್ಲುಗಳಿಂದ ಅಲ್ಲಲ್ಲಿ ಹಳದಿ ಬಣ್ಣ ಬಂದಿರುವುದರಿಂದ ಇದಕ್ಕೆ ಯಲ್ಲೊ ಸ್ಟೋನ್ ಎಂಬ ಹೆಸರು ಬಂತು.

ಯಲ್ಲೊ ಸ್ಟೋನ್ ತನ್ನ ತೆಕ್ಕೆಯಲ್ಲಿ 400 ಕ್ಕೂ ಹೆಚ್ಚು ಬಿಸಿ ನೀರಿನ ಚಿಲುಮೆ, ಮಣ್ಣಿನ ಜ್ವಾಲಾಮುಖಿ, ಡ್ರಾಗನ್ ವಾಲ್ಕನೊಗಳನ್ನು ಹೊಂದಿದೆ. ಯಲ್ಲೊ ಸ್ಟೋನ್ ನ್ಯಾಷನಲ್ ಪಾರ್ಕ್ ವನ್ಯ ಮೃಗಗಳಿಗೂ ಖ್ಯಾತಿ ಪಡೆದಿದೆ. ಜಿಂಕೆ, ಕಾಡುಕೋಣ, ಕರಡಿ, ಮಂಗ, ಸಾರಂಗ, ನರಿ ಮುಂತಾದ ಪ್ರಾಣಿಗಳನ್ನು ನಾವು ಇಲ್ಲಿ ಕಾಣಬಹುದು. ಈ ಪ್ರಾಣಿಗಳು ತಮ್ಮನ್ನು ತಾವು ಚಳಿಯಿಂದ ರಕ್ಷಿಸಿಕೊಳ್ಳಲು ಬಿಸಿ ನೀರಿನ ಕುಂಡಗಳ ಹತ್ತಿರ ಬಂದು ನಿಲ್ಲುತ್ತವೆಯಂತೆ.

ಇಲ್ಲಿನ ಇನ್ನೊಂದು ಆಕರ್ಷಣೆ ‘ದ ಓಲ್ಡ್ ಫೇತ್ ಫುಲ್’ ಕಾರಂಜಿ. ಇದು ಪ್ರತಿ 90 ನಿಮಿಷಕ್ಕೊಮ್ಮೆ 20 ರಿಂದ 30 ಸಾವಿರ ಲೀಟರ್ ಬಿಸಿ ನೀರನ್ನು 15 ಅಡಿ ಎತ್ತರಕ್ಕೆ ಚಿಮುಕಿಸುತ್ತದೆ. ಇದನ್ನು ನೋಡಲು ಜನ ಕಾದು ಕುಳಿತಿರುತ್ತಾರೆ. ಕ್ಯಾಮರಾ ಕಣ್ಗಳಿಗಂತೂ ಇದು ಹಬ್ಬವೇ ಸರಿ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...