alex Certify
ಕನ್ನಡ ದುನಿಯಾ       Mobile App
       

Kannada Duniya

ಈಗಲೂ ಪ್ರಸಿದ್ಧಿ ಪಡೆದಿದೆ ಪ್ರಾಚೀನ ಕಾಲದ ಹೊಟೇಲ್

2017_2image_15_49_169776507oldesthotel4-ll

ವಿಶ್ವದ ಪ್ರಾಚೀನ ಕೋಟೆಗಳು ಹಾಗೂ ಸುಂದರ ತಾಣಗಳು ಈಗಲೂ ಪ್ರಸಿದ್ಧಿ ಪಡೆದಿವೆ. ಅದ್ರಲ್ಲಿ ಅನೇಕ ಹೊಟೇಲ್ ಗಳೂ ಸೇರಿವೆ. ಆಧುನಿಕ  ಕಾಲದ ಹೊಟೇಲ್ ಗಳ ಮಧ್ಯೆ ಪ್ರಾಚೀನ ಕಾಲದ ಹೊಟೇಲ್ಲೊಂದು  ಈಗಲೂ ತನ್ನ ಸ್ಥಾನ ಉಳಿಸಿಕೊಂಡಿದೆ. ವಿಶ್ವದ ಪ್ರಸಿದ್ಧ ಹೊಟೇಲ್ ಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದೆ.

ನಾವು ಹೇಳ ಹೊರಟಿರುವ ಹೊಟೇಲ್ ಜಪಾನಿನ ಯಮನಾಶಿ ಪ್ರಿಫೆಕ್ಚರ್ ನಲ್ಲಿರುವ Nishiyama Onsen Keiunkan ಹೊಟೇಲ್. ಗಿನ್ನಿಸ್ ಬುಕ್ ನಲ್ಲಿ ಈ ಹೊಟೇಲ್ ಪ್ರಾಚೀನ ಕಾಲದ ಹೊಟೇಲ್ ಎಂಬ ಸ್ಥಾನ ಪಡೆದಿದೆ. Fujiwara Mahito ಎಂಬಾತ ಇದನ್ನು ನಿರ್ಮಿಸಿದ್ದಾನೆ. ಅಲ್ಲಿಂದ ಇಲ್ಲಿಯವರೆಗೆ Fujiwara Mahito ಕುಟುಂಬಸ್ಥರೇ ಇದರ ಜವಾಬ್ದಾರಿ ಹೊತ್ತಿದ್ದಾರೆ. ಈಗ 52ನೇ ಪೀಳಿಗೆಯವರು ನೋಡಿಕೊಂಡು ಬರ್ತಿದ್ದಾರೆನ್ನಲಾಗಿದೆ.

ಈ ಹೊಟೇಲ್ ನಲ್ಲಿ 32 ಕೋಣೆಗಳಿವೆ. 6 hot springs, Mount Fuji ಮತ್ತು Jigokudani Monkey Park ಬಹಳ ಹತ್ತಿರದಲ್ಲಿದೆ. ಯುದ್ಧದ ವಿಚಾರಕ್ಕೂ ಈ ಹೊಟೇಲ್ ಹೆಸರು ಪಡೆದಿದೆ. ಯುದ್ಧದಲ್ಲಿ ಗೆದ್ದು ಬಂದ ಯೋಧರು ಇಲ್ಲಿ ಬಿಸಿನೀರಿನಲ್ಲಿ ಸ್ನಾನ ಮಾಡುತ್ತಿದ್ದರಂತೆ. ತೆರೆದ ಸ್ನಾನ ಗೃಹ ಈಗಲೂ ಇದ್ದು, ಹೊಟೇಲ್ ಗೆ ಬರುವ ಗ್ರಾಹಕರು ಇದ್ರ ಮಜಾ ಪಡೆಯಬಹುದಾಗಿದೆ.

ಬಂದ ಅತಿಥಿಗಳಿಗೆ ಸಾಂಪ್ರದಾಯಿಕ ಬಟ್ಟೆಗಳನ್ನು ನೀಡಲಾಗುತ್ತದೆ. ಹೊಟೇಲ್ ನಲ್ಲಿ ಚಪ್ಪಲಿ ಹಾಕಿಕೊಳ್ಳುವಂತಿಲ್ಲ. ಒಂದು ರಾತ್ರಿ ಕಳೆಯಲು ಭಾರೀ ಪ್ರಮಾಣದ ಹಣ ನೀಡಬೇಕು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...