alex Certify
ಕನ್ನಡ ದುನಿಯಾ       Mobile App
       

Kannada Duniya

ಗೋವಾ-ಕಾಶ್ಮೀರಕ್ಕಿಂತ ಅಗ್ಗ ಈ ದೇಶದ ಪ್ರವಾಸಿ ಸ್ಥಳ

ವಿದೇಶ ಸುತ್ತುವುದು ಪ್ರತಿಯೊಬ್ಬನ ಕನಸು. ಬಜೆಟ್ ಅನೇಕರ ಕನಸಿಗೆ ಕಲ್ಲು ಹಾಕುತ್ತೆ. ಆದ್ರೆ ಕಡಿಮೆ ಬಜೆಟ್ ನಲ್ಲಿ ಕೆಲವೊಂದು ದೇಶಗಳನ್ನು ನೀವು ಸುತ್ತಿ ಬರಬಹುದು. ಕಾಶ್ಮೀರ ಹಾಗೂ ಗೋವಾದಲ್ಲಿ ಖರ್ಚಾಗುವ ಹಣಕ್ಕಿಂತ ಕಡಿಮೆ ಬಜೆಟ್ ನಲ್ಲಿ ನೀವು ಆ ದೇಶಗಳನ್ನು ಸುತ್ತಬಹುದಾಗಿದೆ.

ಥೈಲ್ಯಾಂಡ್ : ಈ ಹೆಸರು ಕೇಳ್ತಿದ್ದಂತೆ ಬೀಚ್ ಹಾಗೂ ಪಾರ್ಟಿ ನೆನಪು ಬರುತ್ತದೆ. ಈ ದೇಶ ಸುಂದರವಾಗಿರುವ ಜೊತೆಗೆ ಅಗ್ಗ ಕೂಡ. ಇಲ್ಲಿ 250 ರೂಪಾಯಿಗೆಲ್ಲ ನಿಮಗೆ ರೂಂ ಸಿಗುತ್ತೆ. ಹಾಗೆ 200 ರೂಪಾಯಿಗೆ ಹೊಟ್ಟೆ ತುಂಬಾ ಊಟ ಮಾಡಿ ಬರಬಹುದು.

ವಿಯೆಟ್ನಾಂ : ಅಗ್ಗದ ಆಹಾರ ಹಾಗೂ ಶಾಪಿಂಗ್ ಗೆ ಈ ದೇಶ ಬೆಸ್ಟ್. ವಿಯೆಟ್ನಾಮೀಸ್ ಭಕ್ಷ್ಯಗಳ ರುಚಿಯನ್ನು ನೀವು ಕೇವಲ 66 ರೂಪಾಯಿಗೆ ಸವಿಯಬಹುದಾಗಿದೆ. 200 ರೂಪಾಯಿಗೆ ಹೊಟೇಲ್ ರೂಂ ಸಿಗುತ್ತೆ.

ನೇಪಾಳ : ಪ್ರಕೃತಿ ಸೌಂದರ್ಯದಿಂದ ಹೆಸರು ಪಡೆದ ದೇಶ ನೇಪಾಳ. ನೀವಿಲ್ಲಿ 600 ರೂಪಾಯಿಗೆ ಮೂರು ಹೊತ್ತು ಹೊಟ್ಟೆ ತುಂಬಾ ಆಹಾರ ಸೇವನೆ ಮಾಡಬಹುದು. ಇಲ್ಲಿ ಕೂಡ 270 ರೂಪಾಯಿಗೆ ಹೊಟೇಲ್ ರೂಂ ಗಳು ಸಿಗುತ್ವೆ.

ಪೆರು : ಈ ದೇಶದ ತಂಪಾದ ಜಾಗವನ್ನು ಕಡಿಮೆ ಬೆಲೆಗೆ ನೋಡಬಹುದಾಗಿದೆ. ಇಲ್ಲಿ 500 ರೂಪಾಯಿಗೆ ರೂಂ ಹಾಗೂ 350 ರೂಪಾಯಿಗೆ ಒಂದು ಹೊತ್ತಿನ ಊಟ ಸಿಗುತ್ತೆ.

ಲಾವೋಸ್ : ಸುಂದರ ಪರ್ವತಗಳಿಗೆ ಈ ದೇಶ ಹೆಸರುವಾಸಿಯಾಗಿದೆ. ಬೌದ್ಧ ಮಠಗಳ ಜೊತೆಗೆ ಅನೇಕ ಪ್ರವಾಸಿ ಸ್ಥಳಗಳಿವೆ. 700-2000 ರೂಪಾಯಿಯೊಳಗೆ ಒಂದು ರಾತ್ರಿಗೆ ರೂಂ ಹಾಗೂ 70 ರೂಪಾಯಿಗೆ ಬೀದಿ ಬದಿಯ ಆಹಾರ ಸಿಗಲಿದೆ.

ಇಂಡೋನೇಷ್ಯಾ : ನೈಸರ್ಗಿಕ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ನೀವು ಇಂಡೋನೇಷ್ಯಾಕ್ಕೆ ಹೋಗಿ ಬನ್ನಿ. ಕಡಿಮೆ ಬಜೆಟ್ ಗೆ ಇಲ್ಲಿ ಊಟ, ವಸತಿ ಲಭ್ಯ. 67 ರೂಪಾಯಿಗೆ ಊಟ ಮಾಡಬಹುದು. 250 ರೂಪಾಯಿಗೆ ಹೊಟೇಲ್ ಬುಕ್ ಮಾಡಿ ಪ್ರವಾಸಿ ಸ್ಥಳಗಳನ್ನು ನೋಡಬಹುದಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...