alex Certify
ಕನ್ನಡ ದುನಿಯಾ       Mobile App
       

Kannada Duniya

ಇಲ್ಲಿ ಪಿಸುಮಾತುಗಳು ಕೇಳುತ್ತವೆ..!

st-pauls-cathedral-london

ಪಿಸುಮಾತು ಎಂದರೇನೇ ಕಿವಿಯಲ್ಲಿ ಗುಟ್ಟಾಗಿ ಯಾರಿಗೂ ಕೇಳದಂತೆ ಹೇಳುವುದು. ಅಂತಹ ಪಿಸುಮಾತುಗಳೂ ಪ್ರತಿಧ್ವನಿಸುವ ಕಟ್ಟಡಗಳು ಈ ಜಗತ್ತಿನಲ್ಲಿ ಇದೆಯೆಂದರೆ ಆಶ್ಚರ್ಯವಲ್ಲವೇ…?

‘ವಿಸ್ಪರಿಂಗ್ ಗ್ಯಾಲರಿ’. ಲಂಡನ್ನಿನ ಸೇಂಟ್ ಪಾಲ್ಸ್ ಕ್ಯಾಥೆಡ್ರಾಲ್ ಪಿಸುಮಾತಿನ ಗ್ಯಾಲರಿ ಎಂದೇ ಪ್ರಖ್ಯಾತವಾಗಿದೆ. ಈ ಗ್ಯಾಲರಿಯೊಳಗೆ ನೀವು ಮಾತನಾಡಿದರೆ ನಿಮ್ಮ ಧ್ವನಿ ಗ್ಯಾಲರಿಯ ಎದುರು ಭಾಗದವರೆಗೂ ಹೋಗುತ್ತದೆ.

ವಿಸ್ಪರಿಂಗ್ ಗ್ಯಾಲರಿ ಸಾಮಾನ್ಯವಾಗಿ ವೃತ್ತಾಕಾರದ ಕಟ್ಟಡದಲ್ಲಿರುತ್ತದೆ. ನೋಡುಗರ ಕಣ್ಣಿಗೆ ಇದರಲ್ಲಿ ಒಂದೇ ಗುಮ್ಮಟವಿರುವಂತೆ ಕಂಡರೂ ಇದರೊಳಗೆ ಎರಡು ಗುಮ್ಮಟಗಳಿರುತ್ತವೆ. ಹೊರ ಗುಮ್ಮಟದ ವ್ಯಾಸ 148 ಅಡಿಗಳು. ಒಳ ಗುಮ್ಮಟದ ವ್ಯಾಸ 103 ಅಡಿಗಳು. ಈ ಎರಡು ಗುಮ್ಮಟಗಳ ನಡುವಿನ ಖಾಲಿ ಜಾಗ ಪಿಸುಮಾತು ಕೇಳುವಂತೆ ಮಾಡುತ್ತದೆ.

ಗ್ಯಾಲರಿಯ ಗೋಡೆಗಳು ಧ್ವನಿಯ ಅಲೆಗಳನ್ನು ಕ್ರಮವಾಗಿ ಪ್ರತಿಧ್ವನಿಸುವಂತೆ ಮಾಡುತ್ತವೆ. ವೃತ್ತಾಕಾರದಲ್ಲಿ ಸುತ್ತಲೂ ಇರುವ ಕಲ್ಲುಗಳು ಧ್ವನಿ ಹೊರಹೋಗದಂತೆ ಮಾಡುತ್ತವೆ. ಧ್ವನಿ ಹೊರಹೋಗದಿರುವುದರಿಂದ ಶಕ್ತಿಯು ನಷ್ಟವಾಗದೇ ಗ್ಯಾಲರಿಯೊಳಗೆ ಎಷ್ಟೇ ದೂರದವರೆಗೆ ಬೇಕಾದರೂ ಕೇಳಬಹುದು. ಪಿಸುಮಾತು ಸ್ಪಷ್ಟವಾಗಿ ಕೇಳಿಸಬೇಕಾದರೆ ಕಿವಿಗಳನ್ನು ಗೋಡೆಯ ಹತ್ತಿರದಲ್ಲಿಟ್ಟುಕೊಳ್ಳಬೇಕು. ಆಗ ಗೋಡೆಯೇ ಪಿಸುಮಾತಾಡುವಂತೆ ಭಾಸವಾಗುತ್ತದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...