alex Certify
ಕನ್ನಡ ದುನಿಯಾ       Mobile App
       

Kannada Duniya

ವೈರಲ್ ಆಗಿದೆ ಪ್ರವಾಸಿಗರ ಸ್ವರ್ಗದ ಅದ್ಭುತ ವಿಡಿಯೋ

ಪ್ರವಾಸಿಗರ ಸ್ವರ್ಗ ಜಮ್ಮು ಮತ್ತು ಕಾಶ್ಮೀರ. ಚಳಿಗಾಲದಲ್ಲಂತೂ ಕಾಶ್ಮೀರದ ಸೌಂದರ್ಯ ಇಮ್ಮಡಿಯಾಗುತ್ತದೆ. ಇಲ್ಲಿನ ಹಿಮಚ್ಛಾದಿತ ಗಿರಿ ಶಿಖರಗಳನ್ನು ಕಣ್ತುಂಬಿಕೊಳ್ಳಲು ಎರಡು ಕಣ್ಣು ಸಾಲದು. ಈಗ ಕಣಿವೆಯುದ್ದಕ್ಕೂ ಹಿಮಪಾತವಾಗುತ್ತಿದ್ದು, ಹಾಲು ಚೆಲ್ಲಿದಂತೆ ಅದ್ಭುತವಾಗಿ ಗೋಚರಿಸುತ್ತಿದೆ.

ಸ್ವಿಡ್ಜರ್ಲೆಂಡ್ ಅನ್ನು ನೆನಪಿಸುವಂತಹ ಕಾಶ್ಮೀರದ ಸುಂದರ ವಿಡಿಯೋ ಒಂದು ಜಾಲತಾಣಗಳಲ್ಲಿ ವೈರಲ್ ಆಗಿದೆ. ಬನಿಹಾಲ್ ಎಂಬಲ್ಲಿ ಸಂಪೂರ್ಣ ಹಿಮದಿಂದ ಆವೃತವಾದ ಹಳಿಗಳ ಮೇಲೆ ರೈಲು ಹಾದು ಹೋಗುತ್ತಿರುವ ದೃಶ್ಯ ಇದು.

ಇಡೀ ನಿಲ್ದಾಣ ಸಂಪೂರ್ಣ ಹಿಮದಿಂದ ಮುಚ್ಚಿಹೋಗಿರೋದನ್ನು ನೀವು ಗಮನಿಸಬಹುದು. ಒಂದು ರೀತಿಯ ಚಮತ್ಕಾರದಂತೆ ಈ ದೃಶ್ಯ ಕಾಣುತ್ತಿದೆ. ಈ ವೈರಲ್ ವಿಡಿಯೋವನ್ನು ರೈಲ್ವೆ ಸಚಿವ ಪಿಯೂಶ್ ಗೋಯಲ್ ಕೂಡ ಶೇರ್ ಮಾಡಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...