alex Certify
ಕನ್ನಡ ದುನಿಯಾ       Mobile App
       

Kannada Duniya

ಮನ ತಣಿಸೋ ಮಾರಿ ಕಣಿವೆಗೆ ನೀವೂ ಭೇಟಿ ಕೊಡಿ….

ಕರ್ನಾಟಕದ ಹಳೆಯ ಅಣೆಕಟ್ಟುಗಳಲ್ಲಿ ಒಂದಾದ ಈ ವಾಣಿ ವಿಲಾಸ್ ಸಾಗರ ಅಣೆಕಟ್ಟು ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನಿಂದ ಸುಮಾರು 20 ಕಿ.ಮೀ. ದೂರದಲ್ಲಿದೆ. ಸುತ್ತಲೂ ಅಚ್ಚ ಹಸಿರಿನ ಉದ್ಯಾನವನದಿಂದ ಕೂಡಿರುವ ಈ ಅಣೆಕಟ್ಟಿನ ಕೆಳಭಾಗದಲ್ಲಿ ಕಣೆವೆ ಮಾರಮ್ಮನ ದೇವಾಲಯವಿದೆ. ಆದ್ದರಿಂದಲೇ ಈ ಡ್ಯಾಮನ್ನು ಮಾರಿ ಕಣಿವೆ ಎಂದು ಕೂಡ ಕರೆಯುತ್ತಾರೆ.

ಮೈಸೂರು ಕೃಷ್ಣರಾಜ ಒಡೆಯರ್ ರವರ ಆದೇಶದ ಮೇರೆಗೆ ವೇದಾವತಿ ನದಿಗೆ ಅಡ್ಡಲಾಗಿ ಕಟ್ಟಲಾಗಿರುವ ಈ ಅಣೆಕಟ್ಟನ್ನು ಸಿಮೆಂಟ್ ಉಪಯೋಗಿಸದೇ ಕೇವಲ ಗಾರೆಯಿಂದಲೇ ಕಟ್ಟಲಾಗಿದೆ. ಹೀಗಾಗಿ ಇದನ್ನು ಆರ್ಕಿಟೆಕ್ಚರಲ್ ಮಾಸ್ಟರ್ ಪೀಸ್ ಎಂದು ಗುರುತಿಸಲಾಗಿದೆ. ವಾಣಿ ವಿಲಾಸ್ ಸಾಗರ ಡ್ಯಾಮ್ ನಿಜಕ್ಕೂ ವಾಸ್ತುಶಿಲ್ಪಕ್ಕೆ ಸುಂದರವಾದ ಉದಾಹರಣೆಯಾಗಿದ್ದು, ಆ ಕಾಲದ ತಾಂತ್ರಿಕತೆ ಅದ್ಭುತವಾದದ್ದು. ಈ ಅಣೆಕಟ್ಟನ ಒಂದು ಬದಿಯಿಂದ ನೋಡಿದರೆ “ಭಾರತದ ಭೂಪಟ’ವನ್ನು ನೋಡಿದಂತೆ ಭಾಸವಾಗುತ್ತದೆ. ಈ ಡ್ಯಾಮಿನಿಂದ ಸುತ್ತಮುತ್ತಲಿನ ನಗರಗಳು, ಪಟ್ಟಣಗಳು ಮತ್ತು ಹಳ್ಳಿಗಳಿಗೆ ಇಂದಿಗೂ ನೀರು ಸರಬರಾಜಾಗುತ್ತದೆ.

ಹಲವಾರು ವರ್ಷಗಳಿಂದ ಈ ಡ್ಯಾಮ್ ಪ್ರವಾಸಿಗರ ಆಕರ್ಷಣೆಯ ತಾಣವಾಗಿದೆ. ಇತ್ತೀಚಿನ ದಿನಗಳಲ್ಲಿ ಅರಣ್ಯ ಇಲಾಖೆಯ ವತಿಯಿಂದ ಪ್ರಾಚೀನ ಭಾರತೀಯ ಸಾಂಸ್ಕೃತಿಕ ಥೀಮ್ ಬಳಸಿ ವಿವಿಧ ಔಷಧೀಯ ಸಸ್ಯಗಳ ಉದ್ಯಾನವನವಾದ ‘ಪಂಚವಟಿ’ ತೋಟವನ್ನು ನಿರ್ಮಿಸಲಾಗಿದೆ. ಇದರಲ್ಲಿ ‘ರಾಶಿಗಳು’, ‘ಸಪ್ತ ಸ್ವರಾಸ್’, ‘ನವ ಗ್ರಹಾಸ್’ ಹೀಗೆ ಇನ್ನೂ ಕಲವು ರೀತಿಯ ಔಷಧೀಯ ಗುಣಗಳುಳ್ಳ ಸಸ್ಯಗಳನ್ನು ಹೊಂದಿದೆ.

ಇನ್ನು ಮಾರಿ ಕಣಿವೆಗೆ ಭೇಟಿ ಕೊಡಲು ಅಕ್ಟೋಬರ್ ನಿಂದ ಜನವರಿವರೆಗೂ ಉತ್ತಮವಾದ ಸಮಯ. ಏಕೆಂದರೆ ಪ್ರತೀ ವರ್ಷ ನವೆಂಬರ್ ನಲ್ಲಿ ಕಣಿವೆ ಮಾರಮ್ಮ ದೇವಿಗೆ ವಾರ್ಷಿಕ ಉತ್ಸವವನ್ನು ಭಕ್ತಿಯಿಂದ ಆಚರಿಸಲಾಗುತ್ತದೆ. ಈ ಜಾತ್ರಾ ಮಹೋತ್ಸವಕ್ಕೆ ಸಾಕ್ಷಿಯಾಗಿ ಭಕ್ತರು ಭಾರಿ ಸಂಖ್ಯೆಯಲ್ಲಿ ಇಲ್ಲಿ ಬಂದು ಸೇರುತ್ತಾರೆ. ಇಲ್ಲಿನ ಸ್ಥಳೀಯರಲ್ಲದೇ, ಬೇರೆ ಊರುಗಳಿಂದ ಬರುವ ಭಕ್ತಾದಿಗಳೆಲ್ಲಾ ಸೇರಿ ಬಹಳ ವಿಜೃಂಭಣೆಯಿಂದ ಆಚರಿಸುತ್ತಾರೆ.

ಇಲ್ಲಿಗೆ ತಲುಪುವ ದಾರಿ : ವಾಣಿ ವಿಲಾಸ್ ಸಾಗರಕ್ಕೆ ಉತ್ತಮವಾದ ಸಾರಿಗೆ ಸಂಪರ್ಕವಿದೆ. ಬೆಂಗಳೂರಿನಿಂದ ಚಿತ್ರದುರ್ಗಕ್ಕೆ ಹೋಗುವ NH-4 ಹೆದ್ದಾರಿಯ ಮಾರ್ಗವಾಗಿ ಸಾಗಿ ಅಲ್ಲಿಂದ ಹಿರಿಯೂರನ್ನು ತಲುಪಬೇಕು. ಇಲ್ಲಿಂದ 20 ಕಿ.ಮೀ. ಸಾಗಿದರೆ ನಿಮಗೆ ಅದ್ಭುತವಾದ ಸಸ್ಯಕಾಶಿಗಳುಳ್ಳ ಮಾರಿ ಕಣಿವೆ ಕಾಣಸಿಗುತ್ತದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...