alex Certify
ಕನ್ನಡ ದುನಿಯಾ       Mobile App
       

Kannada Duniya

ಬುರ್ಜ್ ಖಲೀಫಾವನ್ನೇ ಮೀರಿಸಲಿದೆ ಚಂದ್ರೋದಯ ಮಂದಿರ

vrundavanಬೃಂದಾವನದಲ್ಲಿ ನಿರ್ಮಾಣವಾಗುತ್ತಿರುವ ಚಂದ್ರೋದಯ ಮಂದಿರ ವಿಶ್ವದ ಅತಿ ದೊಡ್ಡ ದೇವಾಲಯವೆಂದು ಬಣ್ಣಿಸಲಾಗುತ್ತಿದೆ. ವಿಶೇಷ ಅಂದ್ರೆ ಚಂದ್ರೋದಯ ಮಂದಿರದ ಫೌಂಡೇಶನ್ ದುಬೈನ ಬುರ್ಜ್ ಖಲೀಫಾಗಿಂತಲೂ 5 ಮೀಟರ್ ಅಧಿಕ ಆಳವಿದೆ.

ಬುರ್ಜ್ ಖಲೀಫಾದ ಫೌಂಡೇಶನ್ 50 ಮೀಟರ್ ಆಳವಿದೆ, ಚಂದ್ರೋದಯ ಮಂದಿರದ ಅಡಿಪಾಯ 55 ಮೀಟರ್ ಆಳಕ್ಕಿದೆ. ಅಡಿಪಾಯ 511 ಅಂಕಣಗಳನ್ನು ಹೊಂದಿದ್ದು, ಮಾರ್ಚ್ ವೇಳೆಗೆ ಅವುಗಳ ನಿರ್ಮಾಣ ಕಾರ್ಯ ಪೂರ್ಣಗೊಳ್ಳಲಿದೆ ಅಂತಾ ಯೋಜನೆಯ ನಿರ್ದೇಶಕ ನರಸಿಂಹ ದಾಸ್ ತಿಳಿಸಿದ್ದಾರೆ.

ಎತ್ತರ, ಸುತ್ತಲೂ ಕಾಡು ಮತ್ತು ಥೀಮ್ ಪಾರ್ಕ್ ನಂತಹ ಹಲವು ವೈಶಿಷ್ಟ್ಯಗಳನ್ನು ದೇವಾಲಯ ಒಳಗೊಂಡಿದೆ. ಥೀಮ್ ಪಾರ್ಕ್ ನ ವಿಶೇಷ ಆಕರ್ಷಣೆ ಅಂದ್ರೆ ಕೃಷ್ಣನ ವಿಭಿನ್ನ ಅವತಾರ. ಬೆಳಕು, ಧ್ವನಿ ಮತ್ತು ವಿಶೇಷ ಪರಿಕ್ರಮಗಳುಳ್ಳ ಮಂಡಲ್ ಪರಿಕ್ರಮ ಪ್ರದರ್ಶನಗಳು ಮತ್ತು ಲೇಸರ್ ಶೋಗಳನ್ನು ಆಯೋಜಿಸಲಾಗುತ್ತದೆ. ಪಾರ್ಕ್ ಪಕ್ಕದಲ್ಲಿ ಯಮುನಾ ಕ್ರೀಕ್ ಹೆಸರಿನ ಸಂಗೀತ burge ಯಿದೆ.

4 ದೇವಾಲಯ ಹಾಗೂ ಮಧುವನ, ತಲವನ, ಕುಮುದವನ, ಬಹುಳವನ, ಕಾಮ್ಯವನ, ಖದಿರವನ, ಬೃಂದಾವನ, ಭದ್ರಾವನ, ಬಿಲ್ವವನ, ಲೋಹವನ, ಭಂಡಿರವನ ಮತ್ತು ಮಹಾವನ ಹೆಸರಿನ 12 ಕಾಡುಗಳನ್ನು ಮಾಡಲಾಗ್ತಿದೆ. ಬೆಂಗಳೂರಿನ ಇಸ್ಕಾನ್ ನಿರ್ಮಾಣ ಮಾಡ್ತಾ ಇರೋ ಈ ದೇವಾಲಯಕ್ಕೆ ತಗುಲುವ ವೆಚ್ಚ 700 ಕೋಟಿ ರೂಪಾಯಿ. 2022 ರ ವೇಳೆಗೆ ನಿರ್ಮಾಣ ಕಾರ್ಯ ಮುಕ್ತಾಯವಾಗಲಿದೆ. ವಿಶ್ವದ ಅತ್ಯಂತ ಎತ್ತರದ ದೇವಾಲಯ ಎನಿಸಿಕೊಳ್ಳಲಿರುವ ಚಂದ್ರೋದಯ ಮಂದಿರದ ಎತ್ತರ 700 ಅಡಿಗಳಷ್ಟಿರಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...