alex Certify
ಕನ್ನಡ ದುನಿಯಾ       Mobile App
       

Kannada Duniya

500 ರೂ. ನೀಡಿ ಜೈಲು ಸೇರಿ…!

mk-25

ನೀವು ಜೈಲಿಗೆ ಹೋಗಲು ಬಯಸ್ತೀರಾ? ಜೈಲಿನ ಅನುಭವ ಪಡೆಯಲು ಇಷ್ಟಪಡ್ತೀರಾ? ಅಂತಾ ಯಾರನ್ನೇ ಕೇಳಿದ್ರೂ ಬರುವ ಉತ್ತರ ಇಲ್ಲ ಅಂತಾ. ಆದ್ರೆ ಅನೇಕರಿಗೆ ಜೈಲಿನೊಳಗೆ ಏನೆಲ್ಲ ಇರುತ್ತೆ. ಅಲ್ಲಿನವರು ಹೇಗಿರ್ತಾರೆ ಎಂಬುದನ್ನು ತಿಳಿದುಕೊಳ್ಳುವ ಕುತೂಹಲವಿರುತ್ತೆ. ಅಂತವರು ಕೊಲೆ, ಸುಲಿಗೆ ಮಾಡಬೇಕಾಗಿಲ್ಲ. 500 ರೂಪಾಯಿ ನೀಡಿ, ಜೈಲಿನ ಅನುಭವ ಪಡೆಯಬಹುದು.

ಹೌದು, ಕೇವಲ 500 ನೀಡಿ ನೀವು ಒಂದು ದಿನ ಈ ಜೈಲಿನಲ್ಲಿ ಇದ್ದು ಬರಬಹುದು. ತೆಲಂಗಾಣದ ಮೇಡಕ್ ಜಿಲ್ಲೆಯ ವಸಾಹತು ಕಾಲದ ಜೈಲಿನಲ್ಲಿ ಪ್ರವಾಸಿಗರಿಗೆ ಈ ಅವಕಾಶ ಕಲ್ಪಿಸಿಕೊಡಲಾಗಿದೆ. 500 ರೂಪಾಯಿ ನೀಡಿ ಒಂದು ದಿನ ನೀವು ಜೈಲಿನಲ್ಲಿ ವಾಸ ಮಾಡಬಹುದು. ಹಾಗೆ ಜೈಲಿನ ಅನುಭವವನ್ನು ಪಡೆಯಬಹುದಾಗಿದೆ. ಹಳೆಯ ಕಾಲದ ಸೆಂಟ್ರಲ್ ಜೈಲನ್ನು ಈಗ ಮ್ಯೂಸಿಯಂ ಮಾಡಲಾಗಿದೆ. ಇಲ್ಲಿ ಪ್ರವಾಸಿಗರಿಗಾಗಿ ಈ ಹೊಸ ಯೋಚನೆ ಶುರು ಮಾಡಲಾಗಿದೆ.

ಪ್ರವಾಸಿಗರಿಗೆ ಖಾದಿ ಬಟ್ಟೆಯನ್ನು ನೀಡಲಾಗುತ್ತದೆ. ಜೊತೆಗೆ ಜೈಲಧಿಕಾರಿಗಳು ನೀಡಿದ ಪಾತ್ರೆಯಲ್ಲಿಯೇ ಆಹಾರ ಸೇವಿಸಬೇಕಾಗುತ್ತದೆ. ಆದ್ರೆ ಈವರೆಗೂ ಯಾವ ಪ್ರವಾಸಿಗರೂ ಇಲ್ಲಿ ವಾಸವಾಗಿಲ್ಲ ಎನ್ನುತ್ತಾರೆ ಅಧಿಕಾರಿಗಳು.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...