alex Certify
ಕನ್ನಡ ದುನಿಯಾ       Mobile App
       

Kannada Duniya

ವಿಶ್ವ ಟಾಪ್ 25 ಪಟ್ಟಿಯಲ್ಲಿವೆ ಭಾರತದ ಎರಡು ಹೋಟೆಲ್ ಗಳು

jodhpurಟ್ರಿಪ್ ಅಡ್ವೈಸರ್, ಪ್ರವಾಸಿಗರ ಆಯ್ಕೆಗನುಗುಣವಾಗಿ ವಿಶ್ವದ ಟಾಪ್ 25 ಹೋಟೆಲ್ ಗಳ ಪಟ್ಟಿ ಮಾಡಿದ್ದು, ಇದರಲ್ಲಿ ಭಾರತದ ಎರಡು ಹೋಟೆಲ್ ಗಳು ಸ್ಥಾನ ಗಿಟ್ಟಿಸಿಕೊಂಡಿವೆ. ಉದಯ್ಪುರದ ಲೀಲಾ ಪ್ಯಾಲೇಸ್ ಹಾಗೂ ಜೋದ್ಪುರದ ಉಮೈದ್ ಭವನ್ ಪ್ಯಾಲೇಸ್ ಈ ಪಟ್ಟಿಯಲ್ಲಿರುವ ಹೋಟೆಲ್ ಗಳಾಗಿವೆ.

ಹಂಗೇರಿಯ ಬುಡಾಪೆಸ್ಟ್ ನಲ್ಲಿರುವ ಅರಿಯಾ ಹೋಟೆಲ್ ಈ ಪಟ್ಟಿಯಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದ್ದರೆ, ಇಂಡೋನೇಷ್ಯಾದ ಮಂಡಪಾ ಹಾಗೂ ರಿಟ್ಜ್ ಕಾರ್ಲ್ಟನ್ ದ್ವಿತೀಯ ಸ್ಥಾನದಲ್ಲಿವೆ. ಇಟಲಿಯ ಟುರಿನ್ ಪ್ಯಾಲೇಸ್ ಹೋಟೆಲ್, ಸ್ಪೇನ್ ನ ಹೋಟೆಲ್ ದಿ ಸೆರ್ರಾಸ್, ಜೆಕ್ ರಿಪಬ್ಲಿಕ್ ನ ಬೊಹೊ ಪ್ರೇಗ್ ಹೋಟೆಲ್ ನಂತರದ ಸ್ಥಾನದಲ್ಲಿವೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...