alex Certify
ಕನ್ನಡ ದುನಿಯಾ       Mobile App
       

Kannada Duniya

ಬೇಸರದ ಸಂಗತಿ..! ವೈಷ್ಣೋದೇವಿ ದರ್ಶನ ಈಗ ಅಸಾಧ್ಯ

vashno

ವೈಷ್ಣೋದೇವಿ ದರ್ಶನ ಪಡೆಯುವ ಮನಸ್ಸಾಗಿದ್ದವರಿಗೊಂದು ಬೇಸರದ ಸಂಗತಿ. ಸದ್ಯ ದೇವಿ ದರ್ಶನ ಪಡೆಯಲು ಸಾಧ್ಯವಿಲ್ಲ. ಹರಿಯಾಣಾದಲ್ಲಿ ನಡೆಯುತ್ತಿರುವ ಜಾಟ್ ಮೀಸಲಾತಿ ಪ್ರತಿಭಟನೆ ಇದಕ್ಕೆ ಕಾರಣ. ಪ್ರತಿಭಟನೆಯಿಂದಾಗಿ 716 ರೈಲುಗಳ ಮೇಲೆ ಪರಿಣಾಮ ಬೀರಿದೆ. 450 ರೈಲುಗಳನ್ನು ರದ್ದುಗೊಳಿಸಲಾಗಿದೆ. ಕೆಲ ರೈಲುಗಳ ಮಾರ್ಗವನ್ನು ಬದಲಾಯಿಸಲಾಗಿದೆ.

ಈ ಕಾರಣದಿಂದಾಗಿ ಮಾತಾ ವೈಷ್ಣೋದೇವಿ ದರ್ಶನ ಪಡೆಯಲು ಮುಂದಾಗಿರುವ ಭಕ್ತರು ಕಷ್ಟ ಎದುರಿಸುವಂತಾಗಿದೆ. ರೈಲು ಪ್ರಯಾಣ ರದ್ದಾಗಿರುವುದರಿಂದ ಭಕ್ತರು ದೇವಿಯ ದರ್ಶನ ಪಡೆಯಲಾಗ್ತಾ ಇಲ್ಲ. ಕಟ್ರಾ ರೈಲು ನಿಲ್ದಾಣಕ್ಕೆ ಹೋಗುವ ಜಮ್ಮು ರಾಜಧಾನಿ ಎಕ್ಸ್ಪ್ರೆಸ್, ಕಲ್ಕಾ ಶತಾಬ್ದಿ, ಲುಧಿಯಾನ ಶತಾಬ್ದಿ, ಅಮೃತಸರ ಶತಾಬ್ದಿ, ಬಥಿಂಡಾ ಶತಾಬ್ದಿ ರೈಲುಗಳನ್ನು ಭದ್ರತೆಯ ದೃಷ್ಟಿಯಿಂದ ರದ್ದು ಮಾಡಲಾಗಿದೆ. ಪರಿಸ್ಥಿತಿ ನಿಯಂತ್ರಣಕ್ಕೆ ಬರುವವರೆಗೆ ಭಕ್ತರು ತಾಳ್ಮೆಯಿಂದಿರಬೇಕಾದ ಅನಿವಾರ್ಯತೆ ಇದೆ.

ಪ್ರತಿಭಟನೆ ಹಿನ್ನೆಲೆಯಲ್ಲಿ ಮೊದಲ ದಿನದಿಂದ 200 ಕೋಟಿ ನಷ್ಟವಾಗಿದೆ ಎಂದು ಉತ್ತರ ರೈಲ್ವೆಯ CPRO ನೀರಜ್ ಶರ್ಮಾ ಹೇಳಿದ್ದಾರೆ. ಭಕ್ತರಿಗೆ ರಕ್ಷಣೆ ನೀಡಲಾಗಿದ್ದು, ಪರಿಸ್ಥಿತಿ ನಿಯಂತ್ರಣಕ್ಕೆ ಬಂದ ತಕ್ಷಣ ರೈಲು ಸಂಚಾರ ಆರಂಭಿಸುವುದಾಗಿ ಭರವಸೆ ನೀಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...