alex Certify
ಕನ್ನಡ ದುನಿಯಾ       Mobile App
       

Kannada Duniya

ನಿಮ್ಮ ಮೊದಲ ವಿದೇಶ ಪ್ರಯಾಣ ಹೀಗಿರಲಿ….

trip

ಇಡೀ ದೇಶವನ್ನೇ ಸುತ್ತಾಡಿದ ಅನುಭವ ನಿಮಗಿದ್ರೂ, ವಿದೇಶ ಪ್ರವಾಸ ಅಂದಕೂಡ್ಲೆ ದುಪ್ಪಟ್ಟು ಉತ್ಸಾಹ ಸಹಜ. ಮೊದಲ ವಿದೇಶ ಪ್ರವಾಸ ಸ್ವಲ್ಪ ಕಷ್ಟಕರವೂ ಹೌದು. ಮೊದಲ ವಿದೇಶ ಪ್ರಯಾಣದಲ್ಲಿ ರಿಲ್ಯಾಕ್ಸೇಶನ್ ಗಿಂತ ಆತಂಕವೇ ಹೆಚ್ಚು. ಆರಾಮಾಗಿ ಮೊದಲ ಫಾರಿನ್ ಟ್ರಿಪ್ ಹೋಗಲು ಏನೆಲ್ಲಾ ಮಾಡಬೇಕು ಅನ್ನೋದನ್ನು ನೋಡೋಣ.

ಎಲ್ಲಕ್ಕಿಂತ ಮುಖ್ಯವಾಗಿ ಪ್ರವಾಸದ ಸ್ಥಳದ ಆಯ್ಕೆ ಸೂಕ್ತವಾಗಿರಲಿ. ನೀವು ಸಾಹಸ ಪ್ರವೃತ್ತಿಯವರಲ್ಲದೇ ಇದ್ರೆ ತುಂಬಾ ದೂರದ ಪ್ರಯಾಣ ಬೇಡ. ಶ್ರೀಲಂಕಾದಂತಹ ಪಕ್ಕದ ರಾಷ್ಟ್ರಕ್ಕೆ ಭೇಟಿ ನೀಡುವುದರೊಂದಿಗೆ ನಿಮ್ಮ ಮೊದಲ ವಿದೇಶ ಪ್ರಯಾಣ ಶುರು ಮಾಡಿ. ದುಬೈ, ಸಿಂಗಾಪುರ, ಬಾಲಿ, ಥೈಲ್ಯಾಂಡ್, ಮಲೇಷಿಯಾ, ಇಂಡೋನೇಷ್ಯಾ, ಹಾಂಗ್ ಕಾಂಗ್ ಕೂಡ ಉತ್ತಮ ಆಯ್ಕೆಗಳು.

ಪಾಶ್ಚಿಮಾತ್ಯ ದೇಶಗಳನ್ನು ನೋಡೋ ಆಸೆಯಿದ್ರೆ ಲಂಡನ್ ಗೆ ಹೋಗೋದು ಉತ್ತಮ. ಅಲ್ಲಿ ಸುಲಭವಾದ ಇಂಗ್ಲಿಷ್ ಮಾತನಾಡುತ್ತಾರೆ. ಫ್ರಾನ್ಸ್ ಗೆ ಹೋದ್ರೆ ನಿಮಗೆ ಭಾಷೆಯ ಸಮಸ್ಯೆ ಎದುರಾಗಬಹುದು. ಮೊದಲೇ ಅಲ್ಲಿ ತಂಗಲು ವ್ಯವಸ್ಥೆ ಮಾಡಿಕೊಳ್ಳಿ, ಹೋಟೆಲ್ ಬುಕ್ಕಿಂಗ್ ಮಾಡಿ. ನಿಮ್ಮ ಬಜೆಟ್ ಮೀರದಂತೆ ಟ್ರಿಪ್ ಪ್ಲಾನ್ ಮಾಡಿ.

ವಿದೇಶ ಪ್ರಯಾಣಕ್ಕೆ ಬೇಕಾದ ದಾಖಲೆಗಳನ್ನೆಲ್ಲ ಸಿದ್ಧಪಡಿಸಿಕೊಳ್ಳಿ. ಪಾಸ್ಪೋರ್ಟ್, ವೀಸಾ, ಇನ್ಷೂರೆನ್ಸ್ ಸೇರಿದಂತೆ ಅಗತ್ಯ ದಾಖಲೆಗಳೆಲ್ಲ ರೆಡಿ ಇರಲಿ. ಕೊನೆ ಕ್ಷಣದಲ್ಲಿ ಗೊಂದಲ ಬೇಡ. ನೀವು ಪ್ರಯಾಣ ಹೊರಟಾಗಿನಿಂದ ಕನಿಷ್ಠ 6 ತಿಂಗಳ ವ್ಯಾಲಿಡಿಟಿಯನ್ನು ನಿಮ್ಮ ಪಾಸ್ಪೋರ್ಟ್ ಹೊಂದಿರಲಿ. ಎಲ್ಲಾ ದಾಖಲೆಗಳ ಫೋಟೋಕಾಪಿ ಇಟ್ಟುಕೊಂಡಿರಿ. ಮಹತ್ವದ ದಾಖಲೆಗಳ ಸಾಫ್ಟ್ ಕಾಪಿಯನ್ನು ಇಮೇಲ್ ನಲ್ಲಿ ಸೇವ್ ಮಾಡಿಟ್ಟುಕೊಂಡಿರುವುದು ಉತ್ತಮ.

ಎಂಬಸಿಯಲ್ಲಿ ಪ್ರಿ ರಜಿಸ್ಟ್ರೇಶನ್ ಮಾಡಿಸಿಕೊಂಡರೆ ಅನಗತ್ಯ ಸಮಸ್ಯೆಗಳು ಎದುರಾಗುವುದಿಲ್ಲ. ಯಾವ ದೇಶಕ್ಕೆ ತೆರಳುತ್ತಿದ್ದೀರೋ ಅಲ್ಲಿನ ಸುಂದರ ಸ್ಥಳಗಳ ಬಗ್ಗೆ ಮಾಹಿತಿ ಪಡೆದುಕೊಂಡಿರಿ. ಅಲ್ಲಿನ ಸಂಸ್ಕೃತಿ, ನೀತಿ ನಿಯಮವನ್ನು ತಿಳಿದುಕೊಳ್ಳಿ. ತುರ್ತು ಸಂದರ್ಭಗಳಲ್ಲಿ ಸಂಪರ್ಕಿಸಲು ಅಗತ್ಯ ನಂಬರ್ ಗಳನ್ನು ಸಂಗ್ರಹಿಸಿಟ್ಟುಕೊಳ್ಳಿ. ವಿದೇಶ ಪ್ರಯಾಣಕ್ಕೂ ಮುನ್ನ ತಪ್ಪದೇ ಇನ್ಷೂರೆನ್ಸ್ ಮಾಡಿಸಿ.

ಅಂತರಾಷ್ಟ್ರೀಯ ಕರೆನ್ಸಿ ಮತ್ತು ಕಾರ್ಡ್ ಗಳನ್ನು ತಪ್ಪದೇ ಕೊಂಡೊಯ್ಯಿರಿ. ಹೊರಡುವ ಮುನ್ನವೇ ಕರೆನ್ಸಿ ಎಕ್ಸ್ ಚೇಂಜ್ ಮಾಡಿಸಿಕೊಳ್ಳಿ. ಅಲ್ಲಿನ ಕರೆನ್ಸಿಯ ಸಣ್ಣ ಮೊತ್ತದ ನೋಟು, ಮತ್ತು ನಾಣ್ಯಗಳನ್ನು ಕೂಡ ಜೊತೆಗಿಟ್ಟುಕೊಂಡಿರಿ. ಮಾಲ್ ಮತ್ತು ಪ್ಲಾಜಾಗಳಲ್ಲಿ ಶಾಪಿಂಗ್ ಮಾಡಲು ಅಂತರಾಷ್ಟ್ರೀಯ ಕ್ರೆಡಿಟ್ ಕಾರ್ಡ್ ಗಳನ್ನು ಬಳಸುವುದು ಬೆಸ್ಟ್.

ಮೊದಲ ವಿದೇಶ ಪ್ರಯಾಣದ ಪ್ಲಾನಿಂಗ್ ಸರಿಯಾಗಿರಲಿ. ಸುದೀರ್ಘ ಪ್ರಯಾಣವಾಗಿದ್ದಲ್ಲಿ ಅಲ್ಲಿ ತಲುಪಿದ ಬಳಿಕ ವಿಶ್ರಾಂತಿಗೆ ಸಮಯ ಹೊಂದಿಸಿಕೊಳ್ಳಿ. ನಂತರ ಹೊಸ ಹೊಸ ಸ್ಥಳಗಳ ವೀಕ್ಷಣೆ, ಫೋಟೋಗ್ರಫಿ, ಶಾಪಿಂಗ್ ಎಲ್ಲವನ್ನೂ ಮಾಡಬಹುದು. ತುಂಬಾ ದೂರದ ದೇಶಕ್ಕೆ ಹೊರಟಿದ್ದರೆ ಅಲ್ಲಿಂದ ಕರೆಮಾಡಲು ಸ್ಥಳೀಯ ಸಿಮ್ ಕಾರ್ಡ್ ಪಡೆಯಿರಿ. ಅದರಲ್ಲಿ ಇಂಟರ್ನೆಟ್ ಸೌಲಭ್ಯ ಕೂಡ ದೊರೆಯುತ್ತದೆ.

ವಿಡಿಯೋ ಕಾಲ್ ಮಾಡಬಹುದು, ಇಲ್ಲವೇ ವಾಟ್ಸಾಪ್ ಮತ್ತು ಫೇಸ್ಬುಕ್ ಮೂಲಕ ಮನೆಯವರೊಂದಿಗೆ ಸಂಪರ್ಕದಲ್ಲಿರಬಹುದು. ಹತ್ತಿರದ ದೇಶಕ್ಕೆ ಹೊರಟಿದ್ದರೆ ನಿಮ್ಮ ಮೊಬೈಲ್ ನಲ್ಲಿ ಅಂತರಾಷ್ಟ್ರೀಯ ರೋಮಿಂಗ್ ಕರೆಗಳನ್ನು ಆ್ಯಕ್ಟಿವೇಟ್ ಮಾಡಿಕೊಳ್ಳಿ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...