alex Certify
ಕನ್ನಡ ದುನಿಯಾ       Mobile App
       

Kannada Duniya

ಈ ಗಿರಿಧಾಮಕ್ಕೆ ಒಮ್ಮೆ ಭೇಟಿ ನೀಡಲೇಬೇಕು…..

ಬೆಂಗಳೂರಿಗೆ ಅತ್ಯಂತ ಸಮೀಪವಿರುವ ಈ ಗಿರಿಧಾಮವು ಕೇವಲ ತನ್ನ ಪ್ರಾಕೃತಿಕ ಸೌಂದರ್ಯಕ್ಕೆ ಮಾತ್ರವಲ್ಲದೇ ಧಾರ್ಮಿಕವಾಗಿಯೂ ಕೂಡ ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಏಕೆಂದರೆ ಇಲ್ಲಿರುವ ದೇವಾಲಯಗಳು ಜನರನ್ನು ತನ್ನತ್ತ ಸೆಳೆಯುವಲ್ಲಿ ಹೆಸರು ಮಾಡಿದೆ.

ತುಮಕೂರಿನಿಂದ ಕೇವಲ 16 ಕಿ.ಮೀ. ದೂರದಲ್ಲಿರುವ ಗಿರಿಧಾಮವೇ ದೇವರಾಯನದುರ್ಗ. ಇದರ ಪ್ರಮುಖ ಆಕರ್ಷಣೆಯೆಂದರೆ ಇಲ್ಲಿರುವ 2 ಪ್ರಮುಖವಾದ ದೇವಾಲಯಗಳಾದ ಯೋಗನರಸಿಂಹ ದೇವಾಲಯ ಮತ್ತು ಭೋಗನರಸಿಂಹ ದೇವಾಲಯ. ಇಲ್ಲಿರುವ ಲಕ್ಷ್ಮೀ ನರಸಿಂಹ ದೇವಾಲಯವು ಮೈಸೂರಿನ ಒಂದನೆಯ ಕಂಠೀರವ ಸರಸಿಂಹ ರಾಜರಿಂದ ನಿರ್ಮಿಸಲ್ಪಟ್ಟಿದ್ದು, ನೋಡಲು ಬಹಳ ಆಕರ್ಷಕವಾಗಿದೆ ಹಾಗೂ ದ್ರಾವಿಡ ಶೈಲಿಯ ವಾಸ್ತುಶಿಲ್ಪವನ್ನು ಹೊಂದಿದೆ.

ಗುಡ್ಡದ ಮೇಲೆ ಯೋಗನರಸಿಂಹ ದೇವಾಲಯ ಹಾಗೂ ಕೆಳಗೆ ಭೋಗನರಸಿಂಹ ದೇವಾಲಯವಿದೆ. ಇವೆರಡರ ಮಧ್ಯೆ ನರಸಿಂಹನ ದೇವಾಲಯವಿದೆ. ಹಾಗೆಯೇ ಈ ದೇವಾಲಯಗಳ ಜೊತೆಗೆ ಪವಿತ್ರವಾದ ನರಸಿಂಹ ತೀರ್ಥ, ಪ್ರಸನ್ನ ತೀರ್ಥ ಮತ್ತು ಪಾದ ತೀರ್ಥ ಎಂಬ 3 ಕಲ್ಯಾಣಿಗಳಿವೆ. ಇದಕ್ಕೆ ಹೊಂದಿಕೊಂಡಂತೆ ನಾಮ ಚಿಲುಮೆಯಿದೆ.

ಈ ದೇವಾಲಯಗಳ ಸುತ್ತ ಪ್ರದಕ್ಷಿಣೆ ಬಂದು ತಮ್ಮ ಕೋರಿಕೆಗಳನ್ನು ಬೇಡಿಕೊಂಡಲ್ಲಿ ಮನಸ್ಸಿನ ಇಷ್ಟಾರ್ಥಗಳು ನೆರವೇರಲಿವೆ ಎಂಬ ಪ್ರತೀತಿ ಇಲ್ಲಿದೆ. ಈ ಪದ್ಧತಿ ಬಹಳ ಹಿಂದಿನ ಕಾಲದಿಂದಲೂ ನಡೆದುಕೊಂಡು ಬರುತ್ತಿದ್ದು ಹೆಚ್ಚು ಮಾನ್ಯತೆಯನ್ನು ಪಡೆದಿದೆ.

ದೇವರಾಯನದುರ್ಗಕ್ಕೆ ಹೋಗಬೇಕಾದರೆ ಬೆಂಗಳೂರಿನಿಂದ ತುಮಕೂರಿನ ಮಾರ್ಗವಾಗಿ ಸುಮಾರು 72 ಕಿ.ಮೀ ಸಂಚರಿಸಿ ನಂತರ ಅಲ್ಲಿಂದ 12 ಕಿ.ಮೀ. ತೆರಳಬಾಕಾಗುತ್ತದೆ. ಇಲ್ಲಿಗೆ ರಾಜ್ಯ ಸಾರಿಗೆ ಬಸ್ಸುಗಳು ಹಾಗೂ ಖಾಸಗಿ ವಾಹನಗಳಲ್ಲಿ ಕೂಡ ತೆರಳಬಹುದು. ಹಾಗಿದ್ದರೆ ಒಂದು ದಿನದ ಪ್ರವಾಸಕ್ಕೆ ನಿಮ್ಮ ಕುಟುಂಬದವರೊಟ್ಟಿಗೆ ಮತ್ತು ಸ್ನೇಹಿತರ ಜೊತೆಗೆ ತೆರಳಲು ಪ್ಲಾನ್ ಮಾಡಿ ಹೋಗಿ ಬನ್ನಿ.

Subscribe Newsletter

Get latest updates on your inbox...

Opinion Poll

  • ಗುಜರಾತ್ ಫಲಿತಾಂಶ ಕರ್ನಾಟಕ ವಿಧಾನಸಭಾ ಚುನಾವಣೆ ಮೇಲೆ ಪರಿಣಾಮ ಬೀರಲಿದೆಯೇ...?

    View Results

    Loading ... Loading ...