alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರವಾಸಕ್ಕೆ ಹೋಗುವ ಮುನ್ನ ಇದು ನಿಮಗೆ ತಿಳಿದಿರಲಿ

1_1462869343

ಬೇರೆ ಬೇರೆ ದೇಶಗಳನ್ನು ಸುತ್ತಿದಾಗ ಮಾತ್ರ ಆಯಾ ದೇಶಗಳ ಸಂಸ್ಕೃತಿ, ಸಂಪ್ರದಾಯ, ನಿಯಮಗಳನ್ನು ತಿಳಿದುಕೊಳ್ಳಲು ಸಾಧ್ಯ. ಪ್ರವಾಸಕ್ಕೆ ಹೋಗುವಾಗ ನಮಗಿಷ್ಟವಾದ ವಸ್ತುಗಳು, ಬಟ್ಟೆಗಳನ್ನು ಬ್ಯಾಗ್ ನಲ್ಲಿ ತುಂಬುತ್ತೇವೆ. ಆದ್ರೆ ಕೆಲವೊಂದು ದೇಶಗಳಿಗೆ ಹೋಗುವ ಮುನ್ನ ಅಲ್ಲಿನ ನಿಯಮಗಳನ್ನು ತಿಳಿದು ನೀವು ಪ್ಯಾಕಿಂಗ್ ಶುರುಮಾಡಬೇಕಾಗುತ್ತದೆ.

ಯಸ್, ಉತ್ತರ ಕೊರಿಯಾಕ್ಕೆ ಹೋಗುವಾಗ ನೀಲಿ ಬಣ್ಣದ ಜೀನ್ಸನ್ನು ಪ್ಯಾಕ್ ಮಾಡಬೇಡಿ. ಯಾಕೆಂದ್ರೆ ಉತ್ತರ ಕೊರಿಯಾದಲ್ಲಿ ಪುರುಷ ಹಾಗೂ ಮಹಿಳೆ ನೀಲಿ ಬಣ್ಣದ ಜೀನ್ಸ್ ತೊಡುವಂತಿಲ್ಲ. ಅಲ್ಲಿ ಇದನ್ನು ನಿಷೇಧಿಸಲಾಗಿದೆ.

ಫ್ರಾನ್ಸ್ ನಲ್ಲಿ ರೆಡ್ ಬುಲ್ ಡ್ರಿಂಕನ್ನು ಬ್ಯಾನ್ ಮಾಡಲಾಗಿದೆ. ಇದಕ್ಕೆ ರಾಸಾಯನಿಕವನ್ನು ಬಳಸುವುದರಿಂದ ನಿಷೇಧ ಹೇರಲಾಗಿದೆ.

ಸಿಂಗಾಪುರದಲ್ಲಿ ಚೂಯಿಂಗ್ ಗಮ್ ಯಾವ ಅಂಗಡಿಯಲ್ಲಿಯೂ ಸಿಗುವುದಿಲ್ಲ. ಇದನ್ನು ತಿಂದು ಕಂಡ ಕಂಡಲ್ಲಿ ಎಸೆಯುತ್ತಾರೆಂಬ ಕಾರಣಕ್ಕೆ ಚೂಯಿಂಗ್ ಗಮ್ಮನ್ನು ನಿಷೇಧಿಸಲಾಗಿದೆ.

ಇರಾನ್ ನಲ್ಲಿ ಪುರುಷರು ಉದ್ದನೆಯ ಕೂದಲು ಬಿಡುವಂತಿಲ್ಲ. ಹೇರ್ ಸ್ಟೈಲ್ ಗೆ ಸಂಬಂಧಿಸಿದಂತೆ ಕೆಲವೊಂದು ನಿಯಮಗಳನ್ನು ಮಾಡಿದ್ದು, ಅದರಂತೆ ನಡೆದುಕೊಳ್ಳಬೇಕು.

ದಕ್ಷಿಣ ಕೊರಿಯಾದಲ್ಲಿ ಮಧ್ಯರಾತ್ರಿ 16 ವರ್ಷದ ಮಕ್ಕಳು ವಿಡಿಯೋ ಗೇಮ್ ಆಡುವಂತಿಲ್ಲ.

ಮಲೇಷ್ಯಾದಲ್ಲಿ 2011ರಿಂದ ಹಳದಿ ಬಣ್ಣದ ಬಟ್ಟೆಯನ್ನು ಬ್ಯಾನ್ ಮಾಡಲಾಗಿದೆ.

ಫ್ರಾನ್ಸ್ ನ ಶಾಲೆ ಹಾಗೂ ಕಾಲೇಜುಗಳಲ್ಲಿ ಕೆಚಪ್ ಮೇಲೆ ನಿಷೇಧ ಹೇರಲಾಗಿದೆ. ಅದರಲ್ಲಿರುವ ಅತಿ ಸಕ್ಕರೆ ಪ್ರಮಾಣವೇ ಬ್ಯಾನ್ ಗೆ ಕಾರಣ.

ವಿದೇಶಿ ಪ್ರಯಾಣ ಮಾಡುವ ಮುನ್ನ ಆಯಾ ದೇಶಗಳ ನಿಯಮ, ಕಾನೂನುಗಳನ್ನು ತಿಳಿದುಕೊಳ್ಳುವುದು ಒಳ್ಳೆಯದು. ಇಲ್ಲವಾದ್ರೆ ಪರ ದೇಶದಲ್ಲಿ ಸಮಸ್ಯೆ ಎದುರಿಸಬೇಕಾಗುತ್ತದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...