alex Certify
ಕನ್ನಡ ದುನಿಯಾ       Mobile App
       

Kannada Duniya

ಮನಮೋಹಕ ಕೆಮ್ಮಣ್ಣುಗುಂಡಿ ಗಿರಿಧಾಮ

kemmannu gundi

ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲ್ಲೂಕಿನಲ್ಲಿರುವ ಕೆಮ್ಮಣ್ಣುಗುಂಡಿ ಪ್ರಸಿದ್ಧ ಗಿರಿಧಾಮ. ಹಸಿರುಬೆಟ್ಟಗಳು, ದಟ್ಟಕಾನನ, ಗುಡ್ಡಗಳು ಉದ್ಯಾನವನ, ನೀರಿನ ಹರಿವು ಇಲ್ಲಿನ ಸೌಂದರ್ಯವನ್ನು ಹೆಚ್ಚು ಮಾಡಿವೆ.

ಕೆಮ್ಮಣ್ಣುಗುಂಡಿಯಲ್ಲಿ ಮೈಸೂರು ಅರಸರು ಬೇಸಿಗೆ ಸಂದರ್ಭದಲ್ಲಿ ಕಾಲ ಕಳೆಯುತ್ತಿದ್ದರು. ಹಾಗಾಗಿ ಇದನ್ನು ಶ್ರೀ ಕೃಷ್ಣ ರಾಜೇಂದ್ರ ಗಿರಿಧಾಮ ಎಂದೂ ಕರೆಯಲಾಗುತ್ತದೆ.

ಸಮುದ್ರಮಟ್ಟದಿಂದ ಸುಮಾರು 1434 ಮೀಟರ್ ಎತ್ತರದಲ್ಲಿರುವ ಕೆಮ್ಮಣ್ಣುಗುಂಡಿ ಬೆಂಗಳೂರಿನಿಂದ 250 ಕಿಲೋಮೀಟರ್ ದೂರದಲ್ಲಿದೆ.

ಜಿಲ್ಲಾ ಕೇಂದ್ರ ಚಿಕ್ಕಮಗಳೂರಿನಿಂದ 55 ಕಿಲೋ ಮೀಟರ್ ಆಗುತ್ತದೆ. ಪಶ್ಚಿಮಘಟ್ಟಗಳ ಪ್ರಸಿದ್ಧ ಗಿರಿಧಾಮಗಳಲ್ಲಿ ಒಂದಾದ ಕೆಮ್ಮಣ್ಣುಗುಂಡಿಯಲ್ಲಿ ಬಹಳಷ್ಟು ಕನ್ನಡ ಸಿನಿಮಾಗಳ ಚಿತ್ರೀಕರಣ ಮಾಡಲಾಗಿದೆ. ಇಲ್ಲಿಂದ ಕಬ್ಬಿಣದ ಅದಿರನ್ನು ತೆಗೆದು ಭದ್ರಾವತಿ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಗೆ ಸರಬರಾಜು ಮಾಡಲಾಗುತ್ತಿತ್ತು.

ಇಲ್ಲಿನ ರಾಜಭವನ ಕಟ್ಟಡ ಅತಿಥಿಗೃಹವಾಗಿದ್ದು, ಈ ಪ್ರದೇಶದಿಂದ ಸುತ್ತಲಿನ ಪ್ರಕೃತಿ ಸೌಂದರ್ಯದ ಜೊತೆಗೆ ಸೂರ್ಯಾಸ್ತದ ಸೌಂದರ್ಯವನ್ನು ಕಣ್ತುಂಬಿಕೊಳ್ಳಬಹುದು.

ಕೆಮ್ಮಣ್ಣುಗುಂಡಿಯಿಂದ 8 ಕಿಲೋ ಮೀಟರ್ ದೂರದಲ್ಲಿ ಹೆಬ್ಬೆ ಫಾಲ್ಸ್ ಜಲಪಾತ ಇದ್ದು, ಕಾಫಿ ಕಣಿವೆಯಲ್ಲಿ ದಟ್ಟ ಹಸಿರು ಕಾನನದಲ್ಲಿ ಎತ್ತರದಿಂದ ಧುಮ್ಮಿಕ್ಕುವ ನೀರಿನಲ್ಲಿ ಮೈ ಮರೆಯಬಹುದು. ಚಾರಣಪ್ರಿಯರಿಗೆ ಈ ಜಾಗ ಪ್ರಶಸ್ತ ಸ್ಥಳ. ಸಮೀಪದಲ್ಲಿ ಇನ್ನೂ ಹಲವು ಸ್ಥಳಗಳನ್ನು ನೋಡಬಹುದಾಗಿದ್ದು, ಮಾಹಿತಿ ಪಡೆದುಕೊಂಡು ಹೋಗಿಬನ್ನಿ. ತರೀಕೆರೆಯಲ್ಲಿ, ಚಿಕ್ಕಮಗಳೂರಿನಲ್ಲಿ ಉಳಿದುಕೊಳ್ಳಲು ವಸತಿಗೃಹಗಳಿವೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...