alex Certify
ಕನ್ನಡ ದುನಿಯಾ       Mobile App
       

Kannada Duniya

ನಾಯಿಯ ಜೊತೆ ಪ್ರವಾಸಕ್ಕೆ ಹೊರಟ ಈ ವ್ಯಕ್ತಿ

journey_b_180716

ನ್ಯೂಜೆರ್ಸಿಯ ಟಾಮ್ Turcich ಒಬ್ಬ ಸಾಮಾನ್ಯ ವ್ಯಕ್ತಿ. ಈತ ವಿಶೇಷ ಎನಿಸಿದ್ದು ಈತನ ಪ್ರಯಾಣದಿಂದ. ಟಾಮ್ ವರ್ಲ್ಡ್ ವಾಕ್ ಮುಂದುವರೆದಿದೆ. 5 ವರ್ಷಗಳಲ್ಲಿ 7 ಮಹಾದ್ವೀಪಗಳನ್ನು ಕಾಲ್ನಡಿಗೆಯಲ್ಲಿ ಸಂಚರಿಸುವುದು ಟಾಮ್ ಗುರಿಯಾಗಿದೆ.

ಏಪ್ರಿಲ್ 2,2015 ರಂದು ಟಾಮ್ ಪ್ರಯಾಣ ಶುರು ಮಾಡಿದ್ದಾರೆ. ಪ್ರತಿದಿನ 15 ಮೈಲಿ ಸಂಚರಿಸುವ ಟಾಮ್, ಈಗಾಗಲೇ 6300 ಮೈಲು ನಡೆದಿದ್ದಾರೆ. ಟೆಕ್ಸಿಕಾದಲ್ಲಿ ಟಾಮ್ ಒಂದು ನಾಯಿಯನ್ನು ದತ್ತು ಪಡೆದಿದ್ದರು. ಅದ್ರ ಹೆಸರು ಸವನ್ನಾ. ಈಗ ಟಾಮ್ ಜೊತೆ ಸವನ್ನಾಗೆ ಕೂಡ ಊರೂರು ಸಂಚರಿಸುವ ಭಾಗ್ಯ ಸಿಕ್ಕಿದೆ. ಟಾಮ್ ತನ್ನ ಜೊತೆ ಸವನ್ನಾನನ್ನು ಕರೆದೊಯ್ಯುತ್ತಿದ್ದಾರೆ.

ಟಾಮ್ ಈ ನಡಿಗೆ ಹಿಂದೊಂದು ಮಹತ್ವದ ಉದ್ದೇಶವಿದೆ. ಟಾಮ್ ಆಪ್ತ ಗೆಳತಿ 17 ವರ್ಷದಲ್ಲಿಯೇ ಸಾವನ್ನಪ್ಪಿದಳಂತೆ. ಇದರಿಂದ ನೊಂದಿದ್ದ ಟಾಮ್ ಗೆ ಜ್ಞಾನೋದಯವಾಯ್ತಂತೆ. ಇದು ಚಿಕ್ಕ ಬದುಕು. ಜೀವ ಇರುವವರೆಗೆ ಊರು ಸುತ್ತಿ ಜೀವನ ಎಂಜಾಯ್ ಮಾಡಬೇಕೆಂಬುದನ್ನು ಅರಿತರಂತ ಟಾಮ್. ಹಾಗಾಗಿಯೇ ಟಾಮ್ ಪ್ರವಾಸ ಕೈಗೊಂಡಿದ್ದಾರೆ.

philadelphia sign ಎಂಬ ಕಂಪನಿ ಟಾಮ್ ಪ್ರಯಾಣಕ್ಕೆ ಹಣದ ಸಹಾಯ ಮಾಡುತ್ತಿದೆ. ಪ್ರತಿ ಪ್ರವಾಸದ ಫೋಟೋಗಳನ್ನು ಟಾಮ್ ಸಾಮಾಜಿಕ ಜಾಲತಾಣಗಳಲ್ಲಿ ಅಪ್ ಲೋಡ್ ಮಾಡುತ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...