alex Certify
ಕನ್ನಡ ದುನಿಯಾ       Mobile App
       

Kannada Duniya

ಮನಸೂರೆಗೊಳ್ಳುವ ಮಿನಿ ನಯಾಗರ ಫಾಲ್ಸ್

ದಕ್ಷಿಣದ ಕಾಶ್ಮೀರ ಕೊಡಗು ಬೇಸಿಗೆಯಲ್ಲಿ ಪ್ರವಾಸಿಗರನ್ನು ಸೆಳೆದಂತೆಯೇ, ಮಳೆಗಾಲದಲ್ಲಿಯೂ ಹೆಚ್ಚಿನ ಪ್ರವಾಸಿಗರನ್ನು ಆಕರ್ಷಿಸುತ್ತದೆ.

ಬೇಸಿಗೆಯಲ್ಲಿ ಕೊಡಗು ಜಿಲ್ಲೆಯ ಆಹ್ಲಾದಕರ ವಾತಾವರಣಕ್ಕೆ ಮನಸೋಲುವ ಜನ, ಮಳೆಗಾಲದಲ್ಲಿ ಮಂಜು, ಮಳೆಯ ಆಟಕ್ಕೆ ಮಂತ್ರಮುಗ್ಧರಾಗುತ್ತಾರೆ.

ಮಳೆಗಾಲದಲ್ಲಿ ಜಲಪಾತಗಳು ಜೀವಕಳೆ ಪಡೆಯುತ್ತವೆ. ಅದರಲ್ಲಿಯೂ ಮಳೆಗಾಲದ ಅವಧಿಯಲ್ಲಿ ಕಾಣಸಿಗುವ ಚಿಕ್ಲಿ ಹೊಳೆ ಡ್ಯಾಮ್ ಮಿನಿ ನಯಾಗರ ಎಂದೇ ಹೆಸರುವಾಸಿಯಾಗಿದೆ.

ಸೋಮವಾರಪೇಟೆ ತಾಲ್ಲೂಕಿನ ಕಂಬಿವಾಳೆ ಸಮೀಪದಲ್ಲಿ ದುಬಾರೆಯಿಂದ ಸುಮಾರು 8 ಕಿಲೋ ಮೀಟರ್ ದೂರದಲ್ಲಿ ಸಣ್ಣ ಡ್ಯಾಮ್ ಇದ್ದು, ಇದು ಮಳೆಗಾಲದಲ್ಲಿ ತುಂಬಿ ಹರಿಯುವಾಗ, ಮಿನಿ ನಯಾಗರದಂತೆ ಕಾಣುತ್ತದೆ.

ಸುತ್ತಲೂ ನಿಸರ್ಗದ ಹಸಿರ ಸಿರಿಯ ನಡುವೆ ಹಾಲ್ನೊರೆಯಂತೆ ಧುಮ್ಮಿಕ್ಕುವ ನೀರನ್ನು ಕಂಡರೆ ಉಲ್ಲಾಸವಾಗುತ್ತದೆ. ವಾರವಿಡಿ ಒತ್ತಡದಲ್ಲಿ ಕಾಲ ಕಳೆಯುವವರು ಮಳೆಗಾಲದಲ್ಲಿ ಕಂಗೊಳಿಸುವ ಚಿಕ್ಲಿ ಹೊಳೆ ಫಾಲ್ಸ್ ಅಂದವನ್ನು ಕಣ್ತುಂಬಿಕೊಳ್ಳಬಹುದಾಗಿದೆ.

ಈ ಪ್ರದೇಶದಲ್ಲಿ ಪ್ರವಾಸಿಗರಿಗೆ ಮೂಲ ಸೌಕರ್ಯ ಕೊರತೆ ಇದೆ. ಸುತ್ತಮುತ್ತ ಇನ್ನೂ ಅನೇಕ ಪ್ರವಾಸಿ ತಾಣಗಳಿದ್ದು, ಮೊದಲೇ ಮಾಹಿತಿ ಪಡೆದು, ಪ್ಲಾನ್ ಮಾಡಿಕೊಂಡು ಹೋದಲ್ಲಿ ಅನುಕೂಲವಾಗುತ್ತದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...