alex Certify
ಕನ್ನಡ ದುನಿಯಾ       Mobile App
       

Kannada Duniya

ವಿಮಾನ ಪ್ರಯಾಣ ಮಾಡುವವರಿಗೆ ಇಲ್ಲಿದೆ ಟಿಪ್ಸ್

2168-1

ಕಡಿಮೆ ಖರ್ಚಿನಲ್ಲಿ ಜಾಸ್ತಿ ಸಮಯ ರಜೆಯ ಮಜಾ ಸವಿಯಲು ಅನೇಕರು ಬಯಸ್ತಾರೆ. ಪ್ಲಾನ್ ಮಾಡಿಕೊಳ್ಳದೆ ಪ್ರವಾಸಕ್ಕೆ ಹೊರಟಾಗ ಖರ್ಚು ಹೆಚ್ಚಾಗುತ್ತದೆ. ಮಜಕ್ಕಿಂತ ಜೇಬಿಗೆ ಕತ್ತರಿ ಬಿದ್ದ ನೋವು ಕಾಡುತ್ತದೆ. ಹಾಗಾಗಿ ಪ್ರವಾಸಕ್ಕೆ ಹೋಗುವ ಮೊದಲು ಸಾಕಷ್ಟು ಪ್ಲಾನ್ ಮಾಡಬೇಕು. ವಿಮಾನದಲ್ಲಿ ವಿದೇಶಿ ಪ್ರವಾಸ ಕೈಗೊಂಡಾಗ ಕೆಲವೊಂದು ವಿಚಾರಗಳ ಬಗ್ಗೆ ಗಮನವಿರಬೇಕು.

ವಿಮಾನ ಪ್ರಯಾಣ ಅಂದ್ರೆ ದುಬಾರಿ ಪ್ರಯಾಣ. ಬಸ್, ರೈಲಿಗೆ ಹೋಲಿಸಿದ್ರೆ ವಿಮಾನ ದುಬಾರಿ ನಿಜ. ಆದ್ರೆ ವಾರ, ತಿಂಗಳು, ದಿನದ ಟಿಕೆಟ್ ಬುಕ್ಕಿಂಗ್ ಮೇಲೆ ಟಿಕೆಟ್ ದರ ನಿಗದಿಯಾಗುತ್ತದೆ. ಹಾಗಾಗಿ ಪ್ರವಾಸಕೈಗೊಳ್ಳುವ ಮೊದಲು ಟಿಕೆಟ್ ಬುಕ್ಕಿಂಗ್ ಮಾಡಿಕೊಳ್ಳಿ.

ವೀಕೆಂಡ್ ನಲ್ಲಿ ವಿಮಾನ ಪ್ರಯಾಣ ಮಾಡಬೇಡಿ. ಆ ಸಮಯದಲ್ಲಿ ವಿಮಾನ ದರ ದುಬಾರಿಯಾಗಿರುತ್ತದೆ. ವಿದೇಶ ಪ್ರವಾಸ ಕೈಗೊಳ್ಳುವ ವೇಳೆ ಒಂದೇ ಬಾರಿ ಡೈರೆಕ್ಟ್ ವಿಮಾನದಲ್ಲಿ ಪ್ರಯಾಣ ಬೆಳೆಸಬೇಡಿ. ಮಧ್ಯ ಒಂದು ಬ್ರೇಕ್ ಇರಲಿ. ಆಗ ಬಜೆಟ್ ನಲ್ಲಿ ಸ್ವಲ್ಪ ಉಳಿತಾಯ ಮಾಡಬಹುದು.

ಪ್ರತಿ ವಿಮಾನ ದರದ ಬೆಲೆ ಬೇರೆ ಬೇರೆಯಾಗಿರುತ್ತದೆ. ಹಾಗಾಗಿ ನಿಮ್ಮ ಆರ್ಥಿಕ ಸ್ಥಿತಿ ನೋಡಿ ಯಾವುದು ಬೆಸ್ಟ್ ಎಂಬುದನ್ನು ಆಯ್ಕೆ ಮಾಡಿಕೊಳ್ಳಿ. ಕೆಲವೊಂದು ಏರ್ಲೈನ್ಸ್ ನಲ್ಲಿ ಆಹಾರ ದುಬಾರಿಯಾಗಿರುತ್ತದೆ. ಹಾಗಾಗಿ ಮನೆಯಿಂದ ತೆಗೆದುಕೊಂಡು ಹೋಗುವುದು ಒಳ್ಳೆಯದು.

ಮನೆಯಿಂದ ಹೊರಡುವ ಮುನ್ನ ನಿಮ್ಮ ಬ್ಯಾಗ್ ತೂಕವನ್ನು ಪರೀಕ್ಷಿಸಿಕೊಳ್ಳಿ. ಹೆಚ್ಚು ಭಾರದಿಂದಾಗಿ ಹಣ ತೆರುವ ಪರಿಸ್ಥಿತಿ ನಿರ್ಮಾಣ ಮಾಡಿಕೊಳ್ಳಬೇಡಿ.

ವಿದೇಶದಲ್ಲಿ ಹಣ ಡ್ರಾ ಮಾಡುವುದು ದುಬಾರಿಯಾಗುತ್ತದೆ. ಹಾಗಾಗಿ ಡೆಬಿಟ್ ಕಾರ್ಡ್ ಬಳಕೆ ಒಳ್ಳೆಯದು. ಆದ್ರೆ ಕೆಲವೊಂದು ಬ್ಯಾಂಕ್ ಗಳು ಡೆಬಿಟ್ ಕಾರ್ಡ್ ಗೆ ಹೆಚ್ಚಿನ ಕಮಿಷನ್ ಪಡೆಯುತ್ತವೆ. ಈ ಬಗ್ಗೆ ಗಮನವಿರಲಿ. ವಿಮಾನ ನಿಲ್ದಾಣ ತಲುಪುವ ಮುನ್ನವೇ ರೂಪಾಯಿಯನ್ನು ಬದಲಾಯಿಸಿಕೊಳ್ಳಿ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...