alex Certify
ಕನ್ನಡ ದುನಿಯಾ       Mobile App
       

Kannada Duniya

ನದಿ ಮೇಲೆ ನಿರ್ಮಾಣವಾಗಿದೆ ನದಿ

ಪ್ರಪಂಚದಲ್ಲಿ ಅನೇಕ ಸೇತುವೆಗಳು ತಮ್ಮದೆ ವಿಶಿಷ್ಠತೆಗಳಿಂದಾಗಿ ಪ್ರಸಿದ್ಧಿ ಪಡೆದಿವೆ. ಕೆಲವು ಸೇತುವೆಗಳ ಉದ್ದ ಮತ್ತೆ ಕೆಲವು ಸೇತುವೆಗಳ ಅಗಲ, ವಿಭಿನ್ನವಾಗಿ ಕಟ್ಟಿದ ರೀತಿಗಳು ಗಮನ ಸೆಳೆಯುತ್ತವೆ. ಆದ್ರೆ ನಾವು ಈಗ ಹೇಳ ಹೊರಟಿರುವ ಸೇತುವೆ ಆಶ್ಚರ್ಯಹುಟ್ಟಿಸುವಂತಿದೆ.

ನದಿಗೆ ಅಡ್ಡಲಾಗಿ ಕಟ್ಟಿರುವ ಈ ಸೇತುವೆ ಮೇಲೆ ಹಡಗು ಚಲಿಸುತ್ತದೆ. ಆಶ್ಚರ್ಯವಾದ್ರೂ ಇದು ಸತ್ಯ. ಜರ್ಮನಿಯ Magden ನಗರದಲ್ಲಿದೆ. ಇದನ್ನು ಮೆಗ್ಡೆನ್ ವಾಟರ್ ಬ್ರಿಡ್ಜ್ ಎಂದೇ ಕರೆಯಲಾಗುತ್ತದೆ. ಸುಂದರವಾಗಿರುವ ಈ ಬ್ರಿಡ್ಜ್ ನೋಡಲು ದೂರದೂರುಗಳಿಂದ ಪ್ರವಾಸಿಗರು ಬರ್ತಾರೆ. 1930ರಲ್ಲಿಯೇ ಈ ಬ್ರಿಡ್ಜ್ ನಿರ್ಮಾಣ ಶುರುವಾಗಿತ್ತು. ಕೆಲ ಕಾರಣಗಳಿಂದಾಗಿ ಅರ್ಧಕ್ಕೆ ಸೇತುವೆ ಕಾರ್ಯ ನಿಂತಿತ್ತು.

ಮತ್ತೆ 1997 ರಲ್ಲಿ ಸೇತುವೆ ನಿರ್ಮಾಣ ಕೆಲಸ ಶುರುವಾಗಿ 2003 ರಲ್ಲಿ ಪೂರ್ಣಗೊಂಡಿತು. ಈ ಬ್ರಿಡ್ಜ್ ವಿಶ್ವದ ಅತ್ಯಂತ ದೊಡ್ಡ ಜಲಮಾರ್ಗವಾಗಿದೆ. ಇಲ್ಲಿ ಎರಡು ನದಿಗಳು ಬೇರೆ ಬೇರೆ ದಿಕ್ಕಿಗೆ ಚಲಿಸುತ್ತವೆ. ಈ ನದಿಗಳು ಸೇರುವ ಜಾಗದಲ್ಲಿ ಈ ಬ್ರಿಡ್ಜ್ ನಿರ್ಮಾಣ ಮಾಡಲಾಗಿದೆ. ನದಿಗೆ ಸೇತುವೆ ಕಟ್ಟಲಾಗಿದ್ದು,ಸೇತುವೆ ಮೇಲೆಯೂ ನೀರಿದೆ. ಅದ್ರ ಮೇಲೆ ಹಡಗು ಸಂಚರಿಸುವ ವ್ಯವಸ್ಥೆ ಮಾಡಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...