alex Certify
ಕನ್ನಡ ದುನಿಯಾ       Mobile App
       

Kannada Duniya

ಹಳೆಯ ವ್ಯಾನ್ ನಲ್ಲಿ 50 ದೇಶ ಸುತ್ತಿದ್ದಾರೆ ಈ ದಂಪತಿ..!

one_1454059116

ಪಾಶ್ಚಾತ್ಯ ದೇಶದವರು ಪ್ರವಾಸ ಪ್ರಿಯರು. ತಾವು ದುಡಿದ ಹಣವನ್ನು ಬಹುತೇಕ ಪ್ರವಾಸಕ್ಕಾಗಿಯೇ ವಿನಿಯೋಗಿಸುತ್ತಾರೆ. ವರ್ಷದ ಮೂರು ತಿಂಗಳನ್ನು ಇದಕ್ಕಾಗಿಯೇ ಮೀಸಲಿಟ್ಟಿರುತ್ತಾರೆ. ಆದರೆ ಈ ದಂಪತಿಗಳು ಮಾತ್ರ ವಿಭಿನ್ನ.

ಕಳೆದ ಆರು ವರ್ಷಗಳಿಂದಲೂ ಪ್ರವಾಸದಲ್ಲಿರುವ ಈ ದಂಪತಿಗಳು ಇದಕ್ಕಾಗಿ ಬಳಸಿಕೊಳ್ಳುತ್ತಿರುವುದು ಒಂದು ಹಳೆಯ ವ್ಯಾನ್ ಅನ್ನು. ಪೋಲ್ಯಾಂಡ್ ನ ಕರೋಲ್ ಲೆವಾನಡೋಸ್ಕಿ ಮತ್ತಾತನ ಪತ್ನಿ ಅಲೆಕ್ಸಾಂಡ್ರಾ 600 ಡಾಲರ್ ನೀಡಿ ಖರೀದಿಸಿದ್ದ ಹಳೆಯ ವ್ಯಾನ್ ನಲ್ಲಿ ಇದುವರೆಗೂ 50 ದೇಶಗಳನ್ನು ಸುತ್ತಿದ್ದಾರೆ.

ಈ ವ್ಯಾನ್ ಅನ್ನು ತಮ್ಮ ಅವಶ್ಯಕತೆಗೆ ತಕ್ಕಂತೆ ಮಾರ್ಪಾಡಿಸಿಕೊಂಡಿದ್ದು, ರಾತ್ರಿ ತಂಗಲು ತಮ್ಮ ವ್ಯಾನ್ ಅನ್ನೇ ಆಶ್ರಯಿಸಿಕೊಂಡಿದ್ದಾರೆ. ಕೆಲವೊಂದು ಪ್ರದೇಶಗಳಿಗೆ ಭೇಟಿ ನೀಡಿದ ವೇಳೆ ಇವರುಗಳ ಪ್ರಪಂಚ ಪರ್ಯಟನೆ ಅರಿತವರು ಇಂಧನ ಹಾಕಿಸುವ ಮೂಲಕ ಸಾಥ್ ನೀಡಿದ್ದಾರೆ. ದಿನಕ್ಕೆ ಕೇವಲ 8 ಡಾಲರ್ ಖರ್ಚು ಮಾಡುತ್ತಿರುವ ಈ ದಂಪತಿಗಳು ಸ್ವತಃ ತಾವೇ ಆಹಾರ ಸಿದ್ದ ಮಾಡಿಕೊಳ್ಳುತ್ತಾರೆ. ಮಾರ್ಗ ಮಧ್ಯದಲ್ಲಿ ವ್ಯಾನ್ ಕೆಟ್ಟು ಹೋದರೆ ಸ್ವತಃ ತಾವೇ ರಿಪೇರಿ ಮಾಡುವುದನ್ನೂ ಇವರು ಬಲ್ಲರು. ಅವರ ಈ ಪ್ರವಾಸದ ಫೋಟೋಗಳು ಇಲ್ಲಿವೆ ನೋಡಿ.

3_1454059262
dwd_1454059726
ds_1454059548
sx_1454059486
dfdegtt_1454060175

Images credit: Wojciech Lewandowski

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...