alex Certify
ಕನ್ನಡ ದುನಿಯಾ       Mobile App
       

Kannada Duniya

ಮಳೆಯಲಿ….ಜೊತೆಯಲಿ….ಸುಂದರ ಪ್ರವಾಸ

2017_6image_10_57_240731464rainssssss-ll

ಹೊಸ ಊರು, ದೇಶ ಸುತ್ತುವ ಬಯಕೆ ಎಲ್ಲರಿಗೂ ಇರುತ್ತೆ. ಮಳೆಗಾಲದಲ್ಲಿ ಮನೆಯಿಂದ ಹೊರಗೆ ಬೀಳಲು ಅನೇಕರು ಮನಸ್ಸು ಮಾಡಲ್ಲ. ಆದ್ರೆ ಮಳೆಗಾಲದಲ್ಲಿ ನೋಡಲೇಬೇಕಾದ ಕೆಲ ಸ್ಥಳಗಳು ಭಾರತದಲ್ಲಿವೆ. ಇನ್ನೇನು ಮಳೆಗಾಲ ಶುರುವಾಗ್ತಾ ಇದೆ. ನೀವೂ ಒಮ್ಮೆ ಈ ಸುಂದರ ಸ್ಥಳಗಳನ್ನು ಕಣ್ತುಂಬಿಕೊಂಡು ಬನ್ನಿ.

ನಂಗಲ್ ವೆಟ್ಲ್ಯಾಂಡ್, ಪಂಜಾಬ್: ಪಂಜಾಬ್ ನ ಸಟ್ಲೆಜ್ ನದಿಗೆ ಕಟ್ಟಲಾಗಿರುವ ಭಾಕ್ರಾ ಆಣೆಕಟ್ಟಿನ ಬಳಿ ನಂಗಲ್ ಲೇಕ್ ಇದೆ. ನದಿ ಮತ್ತು ಸುಂದರ ಗುಡ್ಡದ ನಡುವೆ ಇರುವ ನಂಗಲ್ ವೆಟ್ಯ್ಲಾಂಡ್ ನಲ್ಲಿ ಸುಮಾರು 40 ಸಾವಿರಕ್ಕೂ ಹೆಚ್ಚು ವಲಸೆ ಪಕ್ಷಿಗಳಿವೆ. ಮಳೆಗಾಲದಲ್ಲಿ ನದಿ ತುಂಬಿ ಹರಿಯುತ್ತದೆ. ಸುತ್ತಮುತ್ತಲ ಹಸಿರು ಪರಿಸರ ಪ್ರವಾಸಿಗರನ್ನು ಸೆಳೆಯುತ್ತದೆ.

ಭೀಮತಲ್, ಉತ್ತರಾಖಂಡ್ : ಉತ್ತರಾಖಂಡ್ ದ ನೈನಿತಾಲ್ ಹಾಗೂ ಮಸೂರಿಗೆ ಅನೇಕ ಬಾರಿ ಹೋಗಿರ್ತೀರಾ. ಆದ್ರೆ ಈ ಬಾರಿ ಭೀಮತಲ್ ಗೆ ಹೋಗಿ ಬನ್ನಿ. ಇದು ಶಾಂತ ಸ್ಥಳವಾಗಿದ್ದು, ದೆಹಲಿಯಿಂದ ಬಹಳ ಹತ್ತಿರದಲ್ಲಿದೆ. ಭೀಮತಲ್ ದ್ವೀಪ ಇಲ್ಲಿನ ಪ್ರಮುಖ ಆಕರ್ಷಣೆ. ಮಳೆಗಾಲದಲ್ಲಿ ಇಲ್ಲಿನ ಪರಿಸರ ಬಹಳಷ್ಟು ಆಹ್ಲಾದಕರವಾಗಿರುತ್ತದೆ.

ಅಲ್ಮೋರಾ : ಉತ್ತರಾಖಂಡದ ಕುಮಾವೂನ್ ಪ್ರದೇಶದಲ್ಲಿರುವ ಅಲ್ಮೋರಾ ಬಹಳ ಸುಂದರ ಸ್ಥಳ. ಮಳೆಗಾಲದಲ್ಲಿ ಇಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆ ಬೀಳೋದಿಲ್ಲ. ಆದ್ರೆ ಮಳೆಗಾಲದಲ್ಲಿ ಇಲ್ಲಿನ ಪರಿಸರ ಪ್ರವಾಸಿಗರನ್ನು ಸೆಳೆಯುತ್ತದೆ.

ಕಸೌಲಿ, ಹಿಮಾಚಲ ಪ್ರದೇಶ : ಹಿಮಾಚಲ ಪ್ರದೇಶದ ಕಸೌಲಿ ಎಲ್ಲ ಋತುವಿನಲ್ಲೂ ಪ್ರವಾಸಿಗರ ಅಚ್ಚುಮೆಚ್ಚಿನ ಸ್ಥಳ. ಮಳೆಗಾಲದಲ್ಲಿ ಸ್ವಲ್ಪ ಮಳೆ ಬೀಳುವುದರಿಂದ ವಾತಾವರಣ ಇನ್ನಷ್ಟು ಆಹ್ಲಾದಕರವಾಗಿರುತ್ತದೆ. ಚುಮುಚುಮು ಮಳೆಯಲ್ಲಿ ಹೊರಗೆ ಹೋಗುವ ಮಜವೇ ಬೇರೆ.

ಫಾಗು, ಹಿಮಾಚಲ ಪ್ರದೇಶ : ಶಿಮ್ಲಾದಿಂದ 22 ಕಿಲೋಮೀಟರ್ ದೂರದಲ್ಲಿರುವ ಇದು ಕಣಿವೆಗಳ ಊರು. ಮಳೆಗಾಲದಲ್ಲಿ ಈ ಸುಂದರ ಪ್ರದೇಶದ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ಎರಡು ಕಣ್ಣು ಸಾಲದು.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...