alex Certify
ಕನ್ನಡ ದುನಿಯಾ       Mobile App
       

Kannada Duniya

ಇದು ವಿಶ್ವದ ಸಣ್ಣ ಹೊಟೇಲ್ : ಸದಾ ಬುಕ್ ಆಗಿರುತ್ತೆ ರೂಂ

ಪ್ರವಾಸಕ್ಕೆ ಹೋದವರು ಹೊಟೇಲ್ ಗೆ ಹೋಗಲೇಬೇಕು. ಕೆಲವೊಂದು ಪ್ರದೇಶಗಳ ಸೌಂದರ್ಯವನ್ನು ಅರ್ಧ ಗಂಟೆಯಲ್ಲಿ ಅರಿಯಲು ಸಾಧ್ಯವಿಲ್ಲ. ಸಾಮಾನ್ಯವಾಗಿ ಎಲ್ಲ ಪ್ರವಾಸಿಗರೂ ಹೊಟೇಲ್ ನಲ್ಲಿ ತಂಗಿ ಆ ಪ್ರದೇಶದ ವಿಶೇಷತೆ ಅರಿಯಲು ಪ್ರಯತ್ನಿಸ್ತಾರೆ. ಪ್ರವಾಸಕ್ಕೆ ಹೋಗುವ ಮುನ್ನ ಹೊಟೇಲ್ ಬಗ್ಗೆ ತಿಳಿದುಕೊಳ್ತಾರೆ. ವಿಶ್ವದಲ್ಲಿ ಭಿನ್ನ-ವಿಭಿನ್ನ ಹೊಟೇಲ್ ಗಳಿವೆ.

ಜೋರ್ಡಾನ್ ನಲ್ಲಿ ಅತಿ ಚಿಕ್ಕ ಹೊಟೇಲ್ ನಿರ್ಮಾಣವಾಗಿದೆ. ಈ ಹೊಟೇಲ್ ನಲ್ಲಿ ಉಳಿದುಕೊಳ್ಳಲು ಮೊದಲೇ ಬುಕ್ಕಿಂಗ್ ಮಾಡಬೇಕಾಗುತ್ತದೆ. ಈ ಹೊಟೇಲನ್ನು ಮರ ಅಥವಾ ಇಟ್ಟಿಗೆಯಿಂದ ನಿರ್ಮಾಣ ಮಾಡಿಲ್ಲ. ಬದಲಾಗಿ ಸಣ್ಣ ಗಾಡಿಯಲ್ಲಿ ಹೊಟೇಲ್ ನಿರ್ಮಾಣ ಮಾಡಲಾಗಿದೆ.

ಫೈವ್ ಸ್ಟಾರ್ ಹೊಟೇಲ್ ನಲ್ಲಿ ಸಿಗುವ ಎಲ್ಲ ಸೌಲಭ್ಯ ಈ ಹೊಟೇಲ್ ನಲ್ಲಿ ಸಿಗುತ್ತದೆ. ಈ ಹೊಟೇಲ್ ನಲ್ಲಿ ಒಮ್ಮೆ ಒಂದು ಜೋಡಿ ಮಾತ್ರ ತಂಗಬಹುದಾಗಿದೆ. ಈ ಹೊಟೇಲ್ ವಿಶೇಷತೆ ಗಮನಿಸಿರುವ ಜನರು ಬೇರೆ ಬೇರೆ ಊರುಗಳಿಂದ ಈ ಹೊಟೇಲ್ ಗೆ ಬರ್ತಾರೆ. ಹಾಗಾಗಿ ಯಾವಾಗ್ಲೂ ಈ ಹೊಟೇಲ್ ಬುಕ್ ಆಗಿರುತ್ತದೆ.

64 ವರ್ಷದ ಈ ಹೊಟೇಲ್ ಮಾಲೀಕ ಸೀ ಡಸರ್ಟ್ ಒಸಿ ಹೋಟೆಲ್ ಎಂದು ಹೊಟೇಲ್ ಗೆ ಹೆಸರಿಟ್ಟಿದ್ದಾನೆ. ಮಿನಿ ಹೊಟೇಲ್ ನಲ್ಲಿ ಒಂದು ರಾತ್ರಿ ಕಳೆಯಲು 56 ಡಾಲರ್ ನೀಡಬೇಕು. ಜೋರ್ಡಾನ್ ಗೆ ಹೋಗುವ ಪ್ಲಾನ್ ಮಾಡಿದ್ದರೆ ಈ ಹೊಟೇಲ್ ನಲ್ಲಿ ರಾತ್ರಿ ಕಳೆದು ಬನ್ನಿ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...