alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರವಾಸಿಗರ ಕಾರನ್ನೇ ಉರುಳಿಸಲೆತ್ನಿಸಿದ ಘೇಂಡಾಮೃಗ

rhino_3581685b

ಕಾಡು ಪ್ರಾಣಿಗಳು ಕೆರಳಿದಾಗ ಎಂತಹ ಅನಾಹುತಗಳು ಸಂಭವಿಸುತ್ತವೆ ಎಂಬುದು ಈಗಾಗಲೇ ಹಲವು ಪ್ರಕರಣಗಳಲ್ಲಿ ಸಾಬೀತಾಗಿದೆ. ಹೀಗೆ ಕೆರಳಿದ ಘೇಂಡಾಮೃಗವೊಂದು ಪ್ರವಾಸಿಗಳ ಕಾರನ್ನೇ ಉರುಳಿಸಲು ಯತ್ನಿಸಿದ ವಿಡಿಯೋವೊಂದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ನಮೀಬಿಯಾದ ಯತೋಶಾ ನ್ಯಾಷನಲ್ ಪಾರ್ಕ್ ನಲ್ಲಿ ಈ ಘಟನೆ ನಡೆದಿದ್ದು, ಘೇಂಡಾಮೃಗವೊಂದು ನಿಧಾನವಾಗಿ ನಡೆದು ಬರುತ್ತಿದ್ದುದ್ದನ್ನು ಒಂದು ಕಾರಿನಲ್ಲಿದ್ದವರು ಚಿತ್ರೀಕರಿಸುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಪ್ರವಾಸಿಗರಿದ್ದ ಮತ್ತೊಂದು ಕಾರು ಅಲ್ಲಿಗೆ ಬಂದಿದೆ.

ಆ ಕಾರನ್ನು ನೋಡುತ್ತಲೇ ರೊಚ್ಚಿಗೆದ್ದ ಘೇಂಡಾಮೃಗ ವೇಗವಾಗಿ ಓಡಿ ಆ ಕಾರನ್ನು ಉರುಳಿಸಲು ಯತ್ನಿಸಿದೆ. ಮತ್ತೆ ಮತ್ತೆ ಅದು ಆ ಪ್ರಯತ್ನ ಮಾಡಿದರೂ ಕಾರಿನಲ್ಲಿದ್ದವರು ತಕ್ಷಣವೇ ತಮ್ಮ ಕಾರನ್ನು ಮುಂದೆ ಓಡಿಸಿದ್ದಾರೆ. ಈ ದೃಶ್ಯಗಳು ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...