alex Certify
ಕನ್ನಡ ದುನಿಯಾ       Mobile App
       

Kannada Duniya

ವಿಶೇಷತೆಯಿಂದ ಕೂಡಿದೆ ದೇಶದ ಗಡಿಯಲ್ಲಿರುವ ಈ ಹೊಟೇಲ್

ವಿಭಿನ್ನ ಹಾಗೂ ಚಿತ್ರ ವಿಚಿತ್ರ ಹೊಟೇಲ್ ಗಳು ವಿಶ್ವದಾದ್ಯಂತ ಇವೆ. ಆದ್ರೆ ಈ ಹೊಟೇಲ್ ಎಲ್ಲಕ್ಕಿಂತ ಸ್ವಲ್ಪ ಭಿನ್ನವಾಗಿದೆ. ತುಂಬಾ ಹಳೆಯ ಈ ಹೊಟೇಲ್ ಸ್ವಿಜರ್ಲ್ಯಾಂಡ್ ಹಾಗೂ ಫ್ರಾನ್ಸ್ ಗಡಿಯಲ್ಲಿದೆ.

ಲಾ ಕ್ಯೂರೋ ಹೆಸರಿನ ಸಣ್ಣ ಹಳ್ಳಿಯಲ್ಲಿ ಈ ಹೊಟೇಲ್ ಇದೆ. 2 ಸ್ಟಾರ್ ಹೊಟೇಲ್ ಹೆಸರು ಅರಬೇಜ್ ಫ್ರಾಂಕೊ ಸುಯಿಸ್. ಈ ಹೊಟೇಲ್ ನ ಮೂರನೇ ಒಂದು ಭಾಗ ಸ್ವಿಜರ್ಲ್ಯಾಂಡ್ ನಲ್ಲಿದ್ದರೆ ಮೂರನೇ ಎರಡು ಭಾಗ ಫ್ರಾನ್ಸ್ ಜಮೀನಿನಲ್ಲಿದೆ. ಎರಡೂ ದೇಶದ ಗಡಿ ಈ ಹೊಟೇಲ್ ಮೂಲಕ ಹಾದು ಹೋಗುತ್ತದೆ.

ಈ ಹೊಟೇಲ್ ನ ಪ್ರತಿ ರೂಮ್ ಕೂಡ ಸ್ವಿಜರ್ಲ್ಯಾಂಡ್ ಹಾಗೂ ಫ್ರಾನ್ಸ್ ಗೆ ಹಂಚಿಕೆಯಾಗಿದೆ. ಕೆಲ ರೂಮಿನ ಬೆಡ್ ಸ್ವಿಜರ್ಲ್ಯಾಂಡ್ ನಲ್ಲಿದ್ದರೆ ಬಾತ್ ರೂಂ ಫ್ರಾನ್ಸ್ ನಲ್ಲಿದೆ. ಇನ್ನು ಕೆಲ ರೂಮಿನ ಬೆಡ್ ಕೂಡ ಎರಡೂ ದೇಶಕ್ಕೆ ಹಂಚಿಕೆಯಾಗುತ್ತದೆ.

ಆಲ್ಜೀರಿಯಾ ಸ್ವಾತಂತ್ರ ಸಂಗ್ರಾಮಕ್ಕೂ ಈ ಹೊಟೇಲ್ ಗೂ ಸಂಬಂಧವಿದೆ. ಇಲ್ಲಿಯೇ ಯುದ್ಧದ ಒಪ್ಪಂದ ನಡೆದಿದ್ದು ಎಂದು ಹೇಳಲಾಗುತ್ತದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...