alex Certify
ಕನ್ನಡ ದುನಿಯಾ       Mobile App
       

Kannada Duniya

ಮುಂದಿನ ವರ್ಷದ ಹಾಲಿಡೇಗಾಗಿ ಈಗಲೇ ಪ್ಲಾನ್ ಮಾಡಿ

ಈ ವರ್ಷ ಸಾಲು ಸಾಲು ರಜಾಗಳಿದ್ರೂ ಎಂಜಾಯ್ ಮಾಡಲು ಆಗದೇ ಇದ್ರೆ ಬೇಸರಪಡಬೇಕಿಲ್ಲ. ಮುಂದಿನ ವರ್ಷ ಅಂದ್ರೆ 2018ರಲ್ಲಿ 16 ಸುದೀರ್ಘ ವೀಕೆಂಡ್ ಗಳಿವೆ. ಈಗಿನಿಂದ್ಲೇ ನೀವು ಕ್ಯಾಲೆಂಡರ್ ನೋಡಿ ಹಾಲಿಡೇ ಪ್ಲಾನ್ ಮಾಡಬಹುದು.

ಜನವರಿ: ಜನವರಿ 22ರ ಸೋಮವಾರ ಬಸಂತ್ ಪಂಚಮಿ ಇದೆ. ಹಾಗಾಗಿ ಶನಿವಾರ, ಭಾನುವಾರ, ಸೋಮವಾರ ಮೂರು ದಿನ ರಜಾ ಇದೆ. 2018ರಲ್ಲಿ ಜನವರಿ 26ರ ಗಣರಾಜ್ಯೋತ್ಸವ ಇರೋದು ಶುಕ್ರವಾರ. ಹಾಗಾಗಿ ಶುಕ್ರವಾರ, ಶನಿವಾರ ಮತ್ತು ಭಾನುವಾರ ರಜಾ ಸಿಗಲಿದೆ.

ಫೆಬ್ರವರಿ: ಫೆಬ್ರವರಿ 13 ಮಹಾಶಿವರಾತ್ರಿ, ಅದು ಕೂಡ ಮಂಗಳವಾರ. ಸೋಮವಾರ ಒಂದು ದಿನ ಕಚೇರಿಗೆ ರಜಾ ಹಾಕಿದ್ರೆ ನಾಲ್ಕು ದಿನ ಪ್ರವಾಸ ಹೋಗಬಹುದು. ಲಕ್ಷದ್ವೀಪ ಮತ್ತು ಅಂಡಮಾನ್ ಗೆ ಭೇಟಿ ನೀಡಿದ್ರೆ ಅದ್ಭುತವಾಗಿರುತ್ತದೆ.

ಮಾರ್ಚ್: ಮಾರ್ಚ್ 2ಕ್ಕೆ ಶುಕ್ರವಾರದಂದು ಹೋಳಿ ಹಬ್ಬವಿದೆ. ವೀಕೆಂಡ್ ನಲ್ಲೇ ಹಬ್ಬವಿರೋದ್ರಿಂದ ಮೂರು ದಿನ ರಜಾ ಸಿಗುತ್ತದೆ. ಫ್ಯಾಮಿಲಿ ಟ್ರಿಪ್ ಹೋಗಬಹುದು.  ಮಾರ್ಚ್ 30ಕ್ಕೆ ಗುಡ್ ಫ್ರೈಡೇ. ಹಾಗಾಗಿ ಆಗ ಕೂಡ ಶುಕ್ರವಾರ, ಶನಿವಾರ, ಭಾನುವಾರ ಹೀಗೆ ಮೂರು ದಿನ ರಜಾ ಸಿಗುತ್ತದೆ. ಬೇಕಾದ್ರೆ ಧರ್ಮಶಾಲಾಗೆ ಪ್ರವಾಸ ಮಾಡಬಹುದು.

ಎಪ್ರಿಲ್ : ಎಪ್ರಿಲ್ 30ರಂದು ಸೋಮವಾರ ಬುದ್ಧ ಪೂರ್ಣಿಮೆ. ಒಟ್ಟಾರೆ ಮೂರು ದಿನ ರಜಾ ಇದ್ದು, ಗೋವಾಕ್ಕೆ ಹಾರಿಬಿಡಿ. ಆರಾಮಾಗಿ ಹಾಲಿಡೇ ಎಂಜಾಯ್ ಮಾಡಬಹುದು.

ಮೇ: ಮೇ 1ಕ್ಕೆ ಕಾರ್ಮಿಕ ದಿನಾಚರಣೆ. ಅಂದು ಮಂಗಳವಾರವಾಗಿದ್ದು, ರಜಾ ಇದೆ. ಸೋಮವಾರವೂ ನೀವು ಕಚೇರಿಗೆ ರಜೆ ಹಾಕಿದ್ರೆ ನಾಲ್ಕು ದಿನ ಹಾಲಿಡೇ ಸಿಗುತ್ತದೆ.

ಜೂನ್: ಜೂನ್ 15ರಂದು ಶುಕ್ರವಾರ ಈದ್ ಉಲ್ ಫಿತರ್. ಸಿಕ್ಕಾಪಟ್ಟೆ ಸೆಕೆ, ಬಿಸಿಲ ಧಗೆಯಿಂದ ಪಾರಾಗಲು ಮನಾಲಿಗೆ ಟ್ರಿಪ್ ಹೋಗಬಹುದು.

ಆಗಸ್ಟ್: ಜುಲೈನಲ್ಲಿ ಯಾವುದೇ ಸರ್ಕಾರಿ ರಜೆಗಳಿಲ್ಲ. ಆಗಸ್ಟ್ 15 ಬುಧವಾರ ಬಂದಿದೆ. ರಜಾ ಬಾಕಿ ಇದ್ರೆ ಅದನ್ನು ಬಳಸಿಕೊಂಡು ಲಡಾಕ್ ಗೆ ಪ್ರಯಾಣ ಬೆಳೆಸಬಹುದು.

ಸಪ್ಟೆಂಬರ್: ಸಪ್ಟೆಂಬರ್ 3ರಂದು ಶ್ರೀಕೃಷ್ಣ ಜನ್ಮಾಷ್ಠಮಿ. ಅಂದು ಸೋಮವಾರವಾಗಿರೋದ್ರಿಂದ ಸಾಲು ಸಾಲು ಮೂರು ದಿನ ರಜಾ ದೊರೆಯುತ್ತದೆ. ಬೃಂದಾವನ ಅಥವಾ ಮಥುರಾಗೆ ನೀವು ತೆರಳಬಹುದು.

ಸಪ್ಟೆಂಬರ್ 13ರಂದು ಗಣೇಶ ಚತುರ್ಥಿ, ಅದು ಕೂಡ ಗುರುವಾರ ಬಂದಿದೆ. ಶುಕ್ರವಾರ ಕೂಡ ರಜಾ ಹಾಕಿದ್ರೆ ಶಿಲ್ಲಾಂಗ್ ನ ಸೌಂದರ್ಯ ಸವಿಯಲು ಸಮಯ ಸಿಗುತ್ತದೆ.

ಅಕ್ಟೋಬರ್ : ಗಾಂಧಿ ಜಯಂತಿ ಮಂಗಳವಾರ ಬಂದಿದೆ. ಸೋಮವಾರ ರಜಾ ತೆಗೆದುಕೊಂಡ್ರೆ ನಾಲ್ಕು ದಿನ ಹಾಲಿಡೇ, ಆರಾಮಾಗಿ ಊಟಿಯಲ್ಲಿ ಸುತ್ತಾಡಿಕೊಂಡು ಬರಬಹುದು. ಅಕ್ಟೋಬರ್ 19ಕ್ಕೆ ದಸರಾ ಹಬ್ಬ. ಅಂದು ಶುಕ್ರವಾರ. ಅಕ್ಟೋಬರ್ 18ಕ್ಕೆ ರಾಮ ನವಮಿಯಿದೆ. ಹಾಗಾಗಿ ಸಾಲಾಗಿ 4 ದಿನಗಳ ರಜಾ ಇದ್ದು, ಭೂತಾನ್ ಗೆ ಪ್ರವಾಸ ಪ್ಲಾನ್ ಮಾಡಬಹುದು.

ನವೆಂಬರ್: ನವೆಂಬರ್ 7ಕ್ಕೆ ಬುಧವಾರ ದೀಪಾವಳಿ. ಸೋಮವಾರದಿಂದ್ಲೇ ಹಬ್ಬ ಶುರುವಾಗುತ್ತದೆ. ಎರಡು ವೀಕೆಂಡ್ ಗಳು ಸಿಗುವುದರಿಂದ ರಜಾ ಅಡ್ಜಸ್ಟ್ ಮಾಡಿಕೊಂಡು ನೀವು ದುಬೈ ಪ್ರವಾಸ ಮಾಡಬಹುದು.

ಡಿಸೆಂಬರ್ : ಡಿಸೆಂಬರ್ 25ರ ಕ್ರಿಸ್ಮಸ್ ಮಂಗಳವಾರ ಬಂದಿದೆ. ಹೊಸ ವರ್ಷ ಕೂಡ ಸಮೀಪಿಸುವ ಸಮಯವಾಗಿರೋದ್ರಿಂದ ಬಿಡುವು ಮಾಡಿಕೊಂಡು ಗೋವಾಕ್ಕೆ ತೆರಳಬಹುದು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...