alex Certify
ಕನ್ನಡ ದುನಿಯಾ       Mobile App
       

Kannada Duniya

ಅಮೆರಿಕಾದಲ್ಲಿ ನೀವು ನೋಡಲೇಬೇಕಾದ ಅದ್ಭುತ ತಾಣ

523018.TIFನಿಜಕ್ಕೂ ಇದು ಪ್ರವಾಸಿಗರ ಸ್ವರ್ಗ. ಗ್ರೇಟ್ ಸ್ಮೋಕಿ ಮೌಂಟೇನ್ಸ್ ನ್ಯಾಶನಲ್ ಪಾರ್ಕ್…ಹೆಸರೇ ಹೇಳುವಂತೆ ಇದು 500,000 ಎಕರೆ ವಿಸ್ತಾರವಾದ ದಟ್ಟಾರಣ್ಯ. ಎಲ್ಲಿ ನೋಡಿದ್ರೂ ಮನಸ್ಸಿಗೆ ಮುದ ನೀಡುವ ಹಚ್ಚ ಹಸಿರು ವನಸಿರಿ.

ನಾರ್ತ್ ಕೆರೊಲಿನಾ ಮತ್ತು ಟೆನ್ನೆಸ್ಸೀ ಗಡಿಯಲ್ಲಿ ಚಾಚಿಕೊಂಡಿದೆ. ಕಣಿವೆಯುದ್ದಕ್ಕೂ ಇರುವ ಸರೋವರ, ನದಿಗಳ ಜುಳು ಜುಳು ನಾದ ನಿಮ್ಮ ಕಿವಿಗೆ ಇಂಪು ನೀಡುತ್ತೆ. ಯಾವಾಗ್ಲೂ ದಟ್ಟ ಹೊಗೆಯಂತೆ ಕಾಣುವ ಮಂಜು ಆವರಿಸಿಕೊಂಡಿರುತ್ತೆ. ಆಗಸವೇ ಭುವಿಗಿಳಿದಿದೆಯೇನೋ ಎಂದೆನಿಸುವಷ್ಟು ಸುಂದರ ದೃಶ್ಯ ಅದು.

ಕಪ್ಪು ಕರಡಿ, ಜಿಂಕೆ ಸೇರಿದಂತೆ ಹಲವು ಪ್ರಾಣಿಗಳ ಆವಾಸ ಸ್ಥಾನ ಇದು. ನಂತಹಾಲಾ ನದಿಯಲ್ಲಿ ಪ್ರವಾಸಿಗರು ರಿವರ್ ರಾಫ್ಟಿಂಗ್ ಕೂಡ ಮಾಡ್ಬಹುದು. ಪ್ರತಿ ವರ್ಷ ಸಾವಿರಾರು ಪ್ರವಾಸಿಗರು ಗ್ರೇಟ್ ಸ್ಮೋಕಿ ಮೌಂಟೇನ್ ನ್ಯಾಶನಲ್ ಪಾರ್ಕ್ ಗೆ ಬರ್ತಾರೆ. ದಿನನಿತ್ಯದ ಒತ್ತಡದ ಬದುಕಿನಿಂದ ರಿಲ್ಯಾಕ್ಸ್ ಆಗಲು ಇದು ಹೇಳಿ ಮಾಡಿಸಿದಂತ ತಾಣ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...