alex Certify
ಕನ್ನಡ ದುನಿಯಾ       Mobile App
       

Kannada Duniya

ಶಿಮ್ಲಾ-ಮನಾಲಿಗೆ ಹೋಗುವ ಮೊದಲು ಈ ಸುದ್ದಿ ಓದಿ

snowfall-in-himachal_1483977606

ಈಗ ಶಿಮ್ಲಾ-ಮನಾಲಿ ಸೌಂದರ್ಯ ಕಣ್ತುಂಬಿಕೊಳ್ಳಲು ಎರಡು ಕಣ್ಣ ಸಾಲದು. ಮೈಕೊರೆಯುವ ಚಳಿ, ಹಿಮದ ರಾಶಿ ಪ್ರವಾಸಿಗರನ್ನು ಸೆಳೆಯುತ್ತದೆ.

ಹಾಗಾಗಿ ಪ್ರವಾಸಿಗರ ಸಂಖ್ಯೆ ಈ ದಿನಗಳಲ್ಲಿ ಹೆಚ್ಚಿರುತ್ತದೆ. ನೀವೂ ಶಿಮ್ಲಾ-ಮನಾಲಿಗೆ ಪ್ರಯಾಣ ಬೆಳೆಸುವ ಪ್ಲಾನ್ ಮಾಡ್ತಾ ಇದ್ದರೆ ಅಲ್ಲಿನ ಪರಿಸ್ಥಿತಿಯನ್ನು ಸಂಪೂರ್ಣವಾಗಿ ತಿಳಿದುಕೊಳ್ಳಿ.

ಶಿಮ್ಲಾ-ಮನಾಲಿಯಲ್ಲಿ ಹಿಮ ಪ್ರವಾಸಿಗರ ಖುಷಿಯನ್ನು ಕಸಿದುಕೊಳ್ತಾ ಇದೆ. ಅಲ್ಲಿ ನಡೆದಾಡುವುದೇ ಕಷ್ಟ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ. ರಸ್ತೆಯಲ್ಲಿ ಹಿಮ ಹೆಪ್ಪುಗಟ್ಟಿ ಗ್ಲಾಸ್ ನಂತೆ ಕಾಣ್ತಾ ಇದ್ದು, ಅಲ್ಲಿ ನಡೆದಾಡುವುದು ಕಷ್ಟವಾಗಿದೆ.

ಅನೇಕ ಪ್ರವಾಸಿಗರು ಜಾರಿ ಬಿದ್ದು ಗಾಯಮಾಡಿಕೊಂಡಿದ್ದಾರೆ. ಸೋಮವಾರ ಹಿಮದ ಮೇಲೆ ಜಾರಿ ಬಿದ್ದು, ಮೂರು ಮಂದಿ ಪ್ರವಾಸಿಗರು ಆಸ್ಪತ್ರೆ ಸೇರಿದ್ದಾರೆ. ಕೈ ಹಾಗೂ ಭುಜಕ್ಕೆ ಗಾಯಗಳಾಗಿದ್ದು, ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

Subscribe Newsletter

Email *

Get latest updates on your inbox...

Opinion Poll

  • 500 ಮತ್ತು 1000 ರೂ. ನೋಟುಗಳ ನಿಷೇಧದಿಂದ ಕಪ್ಪು ಹಣಕ್ಕೆ ಕಡಿವಾಣ ಬೀಳಲಿದೆಯಾ..?

    View Results

    Loading ... Loading ...