alex Certify
ಕನ್ನಡ ದುನಿಯಾ       Mobile App
       

Kannada Duniya

ಸಮೀಕ್ಷೆಗೆ ವಿಡಿಯೋ ಮೂಲಕ ಉತ್ತರ ನೀಡಿದೆ ಸಿಂಗಾಪುರ

ಟೈಮ್ ಔಟ್ ಅನ್ನೋ ನಿಯತಕಾಲಿಕೆಯೊಂದು ಜಗತ್ತಿನ ಅತ್ಯಂತ ಬೋರಿಂಗ್ ನಗರಗಳ ಪಟ್ಟಿಯಲ್ಲಿ ಸಿಂಗಾಪುರದ ಹೆಸರನ್ನೂ ಉಲ್ಲೇಖಿಸಿತ್ತು. ಅಲ್ಲಿ ಆಸಕ್ತಿದಾಯಕವಾದ ತಾಣಗಳು, ವಿಶೇಷಗಳು ಇಲ್ಲ ಅಂತಾ ಬರೆದಿತ್ತು.

ಸುಮಾರು 15,000 ಜನರ ಸಮೀಕ್ಷೆ ಮಾಡಿ ಬೇರೆ ಬೇರೆ ನಗರಗಳ ಸಂಸ್ಕೃತಿ, ಸ್ನೇಹಪರತೆ, ಆಹಾರ, ಪಾನೀಯ, ಸಂತೋಷ, ಜೀವನ ಶೈಲಿ ಇವನ್ನೆಲ್ಲ ಪರಿಗಣನೆಗೆ ತೆಗೆದುಕೊಂಡು 32 ದೇಶಗಳನ್ನು ಪಟ್ಟಿ ಮಾಡಲಾಗಿತ್ತು.

ಬೋರಿಂಗ್ ನಗರಗಳ ಪಟ್ಟಿಯಲ್ಲಿ ಮ್ಯಾಗಝೀನ್ ಸಿಂಗಾಪುರಕ್ಕೆ 31ನೇ ಸ್ಥಾನ ನೀಡಿದೆ. ಇಸ್ತಾಂಬುಲ್ ಕೊನೆಯ ಸ್ಥಾನದಲ್ಲಿದ್ರೆ ಚಿಕಾಗೋ ಮೊದಲ ಸ್ಥಾನ ಪಡೆದಿದೆ. ಸಿಂಗಾಪುರದಲ್ಲಿ ಸುರಕ್ಷತೆ ಮತ್ತು ಸಾರ್ವಜನಿಕ ಸಾರಿಗೆಯ ಸಮಸ್ಯೆ ಇದೆ ಅಂತಾ ಉಲ್ಲೇಖಿಸಲಾಗಿದೆ.

ಇದಕ್ಕೆ ಉತ್ತರವಾಗಿ ಸಿಂಗಾಪುರದ ಪ್ರವಾಸೋದ್ಯಮ ಇಲಾಖೆ 56 ಸೆಕೆಂಡ್ ಗಳ ವಿಡಿಯೋ ಒಂದನ್ನು ಫೇಸ್ಬುಕ್ ನಲ್ಲಿ ಪೋಸ್ಟ್ ಮಾಡಿದೆ. ಪ್ರವಾಸಿಗರು ಸಿಂಗಾಪುರಕ್ಕೆ ಯಾಕೆ ಬರಬೇಕು ಅನ್ನೋದು ಈ ವಿಡಿಯೋದಲ್ಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...