alex Certify
ಕನ್ನಡ ದುನಿಯಾ       Mobile App
       

Kannada Duniya

ಪತ್ನಿಯನ್ನು ಖುಷಿಗೊಳಿಸಲು ಪತಿ ಮಾಡಿದ ಹೂ ತೋಟವೀಗ ಪ್ರವಾಸಿ ಕೇಂದ್ರ

wifesmile

ಪತಿ-ಪತ್ನಿ ಸಂಬಂಧ ಮಧುರವಾದದ್ದು. ಒಬ್ಬರ ಸಂತೋಷಕ್ಕೆ, ದುಃಖಕ್ಕೆ ಇನ್ನೊಬ್ಬರು ಜೊತೆಯಾದಾಗ ಬಾಳು ಸುಮಧುರ. ಇದನ್ನು ಅರಿತಿರುವ ಜಪಾನಿನ ವ್ಯಕ್ತಿಯೊಬ್ಬ ತನ್ನ ಅಂಧ ಹೆಂಡತಿಯನ್ನು ಸಂತೋಷಗೊಳಿಸಲು ಅನನ್ಯ ಮಾರ್ಗ ಅನುಸರಿಸಿದ್ದಾನೆ. ಆ ಸ್ಥಳವೀಗ ಪ್ರವಾಸಿಗರ ಆಕರ್ಷಣೀಯ ಕೇಂದ್ರವಾಗಿ ಮಾರ್ಪಟ್ಟಿದೆ.

52 ವರ್ಷದ ಮಿಸ್ ಕುರೋಕಿ ಎಂಬ ಮಹಿಳೆ ಮಧುಮೇಹದಿಂದ ಬಳಲುತ್ತಿದ್ದಾಳೆ. ಇದರಿಂದಾಗಿ ಆಕೆ ದೃಷ್ಟಿ ಕಳೆದುಕೊಂಡಿದ್ದಾಳೆ. ಸದಾ ದುಃಖದಲ್ಲಿರುತ್ತಿದ್ದ ಮಿಸ್ ಕುರೋಕಿಯನ್ನು ಸಂತೋಷಗೊಳಿಸಲು ಆಕೆಯ ಪತಿ ಮುಂದಾಗಿದ್ದಾನೆ. ಮನೆಯ ಮುಂದೆ ಸಾವಿರಾರು ಗುಲಾಬಿ ಗಿಡಗಳನ್ನು ಬೆಳೆಸಿದ್ದಾನೆ. ಅವೆಲ್ಲವುಗಳಲ್ಲಿ ಈಗ ಹೂವು ಅರಳಿ ನಿಂತಿದೆ. ಹೂವು ಬಿಟ್ಟಿರುವುದರಿಂದ ಆ ಸ್ಥಳ ಉದ್ಯಾನವನವಾಗಿ ಮಾರ್ಪಟ್ಟಿದೆ.

ವರ್ಷದ ಆರಂಭದಲ್ಲಿ ಜಪಾನಿನಲ್ಲಿ ಚೆರ್ರಿ ಹೂವುಗಳು ಅರಳುತ್ತವೆ. ಬಣ್ಣ ಬಣ್ಣದ ಹೂಗಳನ್ನು ನೋಡಲು ಜನ ಉದ್ಯಾನವನಗಳಿಗೆ ಬರ್ತಾರೆ. ಆದ್ರೆ ಕುರೋಕಿ ಮನೆಯಂಗಳದಲ್ಲಿ ಅರಳಿರುವ ಹೂಗಳ ಹಿಂದೊಂದು ಕಥೆ ಕೂಡ ಇದೆ. ಇದನ್ನು ನೋಡಲು ಪ್ರತಿದಿನ 4 ಸಾವಿರಕ್ಕೂ ಹೆಚ್ಚು ಜನ ಇಲ್ಲಿಗೆ ಬರ್ತಿದ್ದಾರೆ. ಡೈರಿಯೊಂದರಲ್ಲಿ ಕೆಲಸ ಮಾಡಿ ನಿವೃತ್ತಿ ಹೊಂದಿರುವ ಕುರೋಕಿ, ದೇಶವನ್ನು ಸುತ್ತಿ ಬರ್ತಿದ್ದರು. ಆದ್ರೆ ಪತ್ನಿ ದೃಷ್ಟಿ ಹೋದ ನಂತರ ಅವರು ಹೂ ತೋಟದ ಕೆಲಸದಲ್ಲಿ ನಿರತರಾಗಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...