alex Certify
ಕನ್ನಡ ದುನಿಯಾ       Mobile App
       

Kannada Duniya

ಇದು ವಿಶ್ವದ ಅತ್ಯುತ್ತಮ ಹೊಟೇಲ್ -3 ಸಾವಿರ ಜನರಿಂದ 16 ವರ್ಷಗಳಲ್ಲಿ ಸಿದ್ಧವಾಯ್ತು ಅರಮನೆ

2-umaid-bhawan-palace1

ರಾಜಸ್ಥಾನ ಉಮೇದ್ ಭವನ್ ಅರಮನೆಗೆ ವಿಶ್ವದ ಅತ್ಯುತ್ತಮ ಅರಮನೆ ಎಂಬ ಬಿರುದು ಸಿಕ್ಕಿದೆ. ಕಳೆದ ವರ್ಷ ಸುಮಾರು 840 ಪ್ರವಾಸಿಗರ ಪ್ರತಿಕ್ರಿಯೆಯ ಆಧಾರದ ಮೇಲೆ ಈ ಬಿರುದನ್ನು ನೀಡಲಾಗಿದೆ. ಇದರಲ್ಲಿ 767 ಮಂದಿ ಅತ್ಯುತ್ತಮ ಹೊಟೇಲ್ ಎಂದು ಅಭಿಪ್ರಾಯಪಟ್ಟರೆ, 10 ಮಂದಿ ಇಲ್ಲಿ ಕೆಟ್ಟ ಅನುಭವವಾಗಿದೆ ಎಂದಿದ್ದಾರೆ.

ಈ ಕಟ್ಟಡವನ್ನು ನಿರ್ಮಿಸಿದ ಮಹಾರಾಜ ಉಮೇದ್ ಸಿಂಗ್ ಹೆಸರನ್ನೇ ಈ ಹೊಟೇಲ್ ಗೆ ಇಡಲಾಗಿದೆ. ಮರಳುಗಲ್ಲಿನಲ್ಲಿ ಇದನ್ನು ನಿರ್ಮಿಸಲಾಗಿದೆ. ಕಲ್ಲನ್ನು ಬಿಟ್ಟು ಯಾವುದೇ ಪದಾರ್ಥವನ್ನು ಇದಕ್ಕೆ ಬೆರೆಸಿಲ್ಲ ಎನ್ನುವುದು ಕಟ್ಟಡದ ವಿಶೇಷಗಳಲ್ಲಿ ಒಂದು.3

ಜಗತ್ತಿನ ಅತಿ ದೊಡ್ಡ ಖಾಸಗಿ ನಿವಾಸಗಳಲ್ಲಿ ಇದು ಒಂದಾಗಿದೆ. 1928-1944 ಒಳಗೆ ಉಮೇದ್ ಭವನ್ ಅರಮನೆ ಕಟ್ಟಲಾಗಿದೆ. ಈ ನಿರ್ಮಾಣದ ಹೆಸರಲ್ಲಿ 3 ಸಾವಿರಕ್ಕೂ ಹೆಚ್ಚು ಮಂದಿಗೆ ಕೆಲಸ ಸಿಕ್ಕಿತ್ತು. 20 ಎಕರೆ ಇರುವ ಈ ಅರಮನೆ ಸುಮಾರು 16 ವರ್ಷಗಳಲ್ಲಿ ಸಿದ್ಧವಾಗಿದೆ.

ಭಾರತದ ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿ ತಮ್ಮ ಪತ್ನಿ ನೀತಾ ಅಂಬಾನಿ ಹುಟ್ಟುಹಬ್ಬವನ್ನು ಇಲ್ಲಿ ಆಚರಿಸಿದ್ದರು. ದೇಶದ ಗಣ್ಯಾತಿಗಣ್ಯರು ಈ ವೇಳೆ ಪಾರ್ಟಿಗೆ ಬಂದಿದ್ದರು. ಕೆಲ ಸಿನಿಮಾ ಹಾಗೂ ಧಾರಾವಾಹಿ ಶೂಟಿಂಗ್ ಕೂಡ ಇಲ್ಲಿ ಆಗ್ತಿರುತ್ತೆ.weddings-in-

ಇಲ್ಲಿ ಉಮೇದ್ ಸಿಂಗ್ ರಾಣಿಗಾಗಿ ಮಹಾರಾಣಿ ಕೊಠಡಿ ನಿರ್ಮಿಸಲಾಗಿದೆ. ಅದು ಸಂಪೂರ್ಣ ಅಮೃತಶಿಲೆಯಲ್ಲಿದೆ. ಇನ್ನು ಮಹಾರಾಜನ ಕೊಠಡಿಯಲ್ಲಿ ಸಿಂಹ ಹಾಗೂ ಹುಲಿಯ ಮಾನ್ಯೂಮೆಂಟ್ಸ್ ಇದೆ. ಭೋಜನ ಶಾಲೆ, ಸ್ಪಾ ಸೌಲಭ್ಯ, ಅತ್ಯುನ್ನತವಾದ ಸ್ನಾನಗೃಹವಿದೆ.

ರಾಯಲ್ ಕೊಠಡಿಯೊಂದಿದ್ದು, ಅದು ಆಧುನಿಕ ಸೌಲಭ್ಯಗಳನ್ನು ಹೊಂದಿದೆ. ಭೋಜನ ಶಾಲೆ, ಸ್ಪಾ, ಸ್ನಾನಗೃಹ ಎಲ್ಲವೂ ಅಲ್ಲಿವೆ. ಐತಿಹಾಸಿಕ ಕೊಠಡಿಯಲ್ಲಿ ಹಳೆಯ ವರ್ಣಚಿತ್ರಗಳನ್ನು ಸಂಗ್ರಹಿಸಿಡಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...