alex Certify
ಕನ್ನಡ ದುನಿಯಾ       Mobile App
       

Kannada Duniya

ಇದು ವಿಶ್ವದ ಅತ್ಯಂತ ಚಳಿ ಪ್ರದೇಶ….

ವಿಶ್ವದಲ್ಲಿ ಭಿನ್ನ ಭಿನ್ನ ಪ್ರದೇಶವಿದೆ. ಭಿನ್ನ–ವಿಭಿನ್ನ ಜನರಿದ್ದಾರೆ. ಅವರ ಆಹಾರ, ಸಂಸ್ಕೃತಿ, ಆಚಾರ, ವಿಚಾರ ಎಲ್ಲವೂ ಬೇರೆ ಬೇರೆ. ವಿಶ್ವದ ಕೆಲ ಪ್ರದೇಶ ತುಂಬಾ ಉಷ್ಣವಾಗಿದ್ದರೆ ಮತ್ತೆ ಕೆಲ ಪ್ರದೇಶದಲ್ಲಿ ಕೊರೆಯುವ ತಂಪಿರುತ್ತದೆ. ಅದ್ರಲ್ಲಿ ಯುರೋಪಿನ ಸೈಬೀರಿಯಾ ಕೂಡ ಒಂದು. ಇಲ್ಲಿನ ಯಮಾಲ್-ನೆನೆಟ್ಸ್ ತಾಪಮಾನ -50 ಡಿಗ್ರಿಯಿರುತ್ತದೆ.

ಇಲ್ಲಿನ ಜನರಿಗೆ ಉಸಿರಾಡೋದು ಒಮ್ಮೆಮ್ಮೆ ಕಷ್ಟವಾಗುತ್ತದೆ. ಅತಿಯಾದ ತಂಪನೆ ವಾತಾವರಣದಿಂದಾಗಿಯೇ ಈ ಊರಿನ ಜನರು ವಿಶ್ವಕ್ಕೆ ಅಪರಿಚಿತರಾಗಿದ್ದಾರೆ. ಚಳಿಯಿಂದ ರಕ್ಷಿಸಿಕೊಳ್ಳಲು ಇಲ್ಲಿನ ಜನರು ಪ್ರಾಣಿಯೊಂದರ ರಕ್ತವನ್ನು ಕುಡಿಯುತ್ತಾರೆ. ಇದೇ ಅಲ್ಲಿನವರು ಜೀವಂತವಾಗಿರಲು ಕಾರಣ.

ಇನ್ನು ವಿಶ್ವದಲ್ಲಿ ಅತ್ಯಂತ ಚಳಿಯಾಗುವ, ತಂಪಾದ ಸ್ಥಳವೆಂದ್ರೆ ಓಮಿಕಾನ್. ಇಲ್ಲಿ ತಾಪಮಾನ -71 ಡಿಗ್ರಿಯಿರುತ್ತದೆ. ಸೈಬಿರಿಯಾದ ಈ ಓಮಿಕಾನ್ ರಷ್ಯಾ ರಾಜಧಾನಿ ಮಾಸ್ಕೋದಿಂದ 4900 ಕಿಲೋಮೀಟರ್ ದೂರದಲ್ಲಿದೆ. 1930ರ ವೇಳೆಗೆ ಇಲ್ಲಿ ಯಾರೂ ವಾಸವಾಗಿರಲಿಲ್ಲ. ನಂತ್ರ ರಷ್ಯಾ ಜನತೆ ಇಲ್ಲಿ ವಾಸ ಶುರುಮಾಡಿದ್ದಾರೆ.

1933ರಲ್ಲಿ ತಾಪಮಾನ -67.7 ಡಿಗ್ರಿ ಸೆಲ್ಸಿಯಸ್ ಇತ್ತಂತೆ. ಸಾಮಾನ್ಯವಾಗಿ ಜನವರಿ ತಿಂಗಳಿನಲ್ಲಿ ಇಲ್ಲಿನ ತಾಪಮಾನ -50 ಡಿಗ್ರಿ ದಾಖಲಾಗುತ್ತದೆ. ಆದ್ರೆ 2013 ರಲ್ಲಿ ಅತಿ ಹೆಚ್ಚು ಅಂದ್ರೆ -93 ಡಿಗ್ರಿ ತಾಪಮಾನ ದಾಖಲಾಗಿತ್ತು. ಸೂರ್ಯನ ಬೆಳಕು ಕಾಣುವುದು ಇಲ್ಲಿನ ಜನರಿಗೆ ಹಬ್ಬವಿದ್ದಂತೆ.

ಇಲ್ಲಿ ಕೇವಲ 500 ಮಂದಿ ಮಾತ್ರ ವಾಸವಾಗಿದ್ದಾರೆ. ಇದನ್ನು ಪ್ರವಾಸಿ ತಾಣ ಮಾಡುವ ಚಿಂತನೆಯಲ್ಲಿ ಸರ್ಕಾರವಿದೆ.

 

Subscribe Newsletter

Get latest updates on your inbox...

Opinion Poll

  • ಅತಂತ್ರ ವಿಧಾನಸಭೆ ಸೃಷ್ಟಿಯಾದ ಬಳಿಕ ರಾಜ್ಯದಲ್ಲಿ ಆರಂಭವಾಗಿದೆಯಾ ಶಾಸಕರ ಕುದುರೆ ವ್ಯಾಪಾರ?

    View Results

    Loading ... Loading ...