alex Certify
ಕನ್ನಡ ದುನಿಯಾ       Mobile App
       

Kannada Duniya

ಹಬ್ಬದ ರಜೆಯಲ್ಲಿ ಪ್ರವಾಸ ಹೊರಟಿದ್ದಾರೆ ಭಾರತೀಯರು

indians-planning-vacation_i

ವೀಕೆಂಡ್ ಜೊತೆಗೆ ನವರಾತ್ರಿ ಸಂಭ್ರಮ. ಒಟ್ಟೊಟ್ಟಿಗೆ ನಾಲ್ಕೈದು ದಿನ ರಜೆ. ಉದ್ಯೋಗಿಗಳು ರಜಾದ ಮಜಾ ಸವಿಯಲು ಸಿದ್ಧತೆ ನಡೆಸಿದ್ದಾರೆ. ಕೆಲವರು ಊರಿನ ಬಸ್ ಹತ್ತಿದ್ರೆ ಅನೇಕರು ಪ್ರವಾಸ ಅಂತ ತಮಗಿಷ್ಟವಾದ ಸ್ಥಳಕ್ಕೆ ಹೊರಡುವ ತಯಾರಿ ನಡೆಸಿದ್ದಾರೆ.

ಹಬ್ಬದ ರಜಾ ಜೊತೆ ಕಡಿಮೆಯಾಗಿರುವ ವಿಮಾನ ದರ ಹಾಗೂ ಹೊಟೇಲ್ ರೇಟ್ ಪ್ರವಾಸಿಗರಿಗೆ ಮತ್ತಷ್ಟು ಖುಷಿ ನೀಡಿದೆ. ದೇಶದ ಜನ ಪ್ರವಾಸಿ ತಾಣ ಸುತ್ತುವ ಮೂಡ್ ನಲ್ಲಿದ್ದಾರೆಂದು ಯಾತ್ರಾ ಡಾಟ್ ಕಾಂ ಸರ್ವೆ ಹೇಳಿದೆ. ನಾಲ್ಕೈದು ದಿನ ರಜೆ ಸಿಗ್ತಾ ಇರೋದ್ರಿಂದ ಶೇಕಡಾ 66 ರಷ್ಟು ಮಂದಿ ಪ್ರವಾಸಕ್ಕೆ ಹೋಗುವ ಪ್ಲಾನ್ ಮಾಡಿದ್ದಾರಂತೆ.

ಸುಮಾರು 5098 ಜನರ ಸರ್ವೆ ಮಾಡಿದ ಯಾತ್ರಾ ಡಾಟ್ ಕಾಂ ಈ ಅಂಕಿ ಅಂಶವನ್ನು ನೀಡಿದೆ.  ಗೋವಾ ಹಾಗೂ ಗಿರಿಧಾಮಗಳಿಗೆ ಹೋಗಲು ಜನರು ಹೆಚ್ಚು ಆಸಕ್ತರಾಗಿದ್ದಾರಂತೆ. ಅಂತರಾಷ್ಟ್ರೀಯ ಪ್ರವಾಸಿ ಸ್ಥಳಗಳಲ್ಲಿ ಯುರೋಪ್ ಹಾಗೂ ಥೈಲ್ಯಾಂಡ್ ಮೊದಲ ಸ್ಥಾನದಲ್ಲಿದೆ. ಐಷಾರಾಮಿ ಪ್ರವಾಸಿ ಪ್ರವೃತ್ತಿ ದೇಶದಲ್ಲಿ ಹೆಚ್ಚಾಗ್ತಿದೆ ಎಂಬುದು ಈ ಸರ್ವೆಯಿಂದ ಹೊರಬಿದ್ದಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...