alex Certify
ಕನ್ನಡ ದುನಿಯಾ       Mobile App
       

Kannada Duniya

ಈ ಸುಂದರ ಸ್ಥಳಗಳಲ್ಲಿ ಹೊಸ ವರ್ಷವನ್ನು ಸ್ವಾಗತಿಸಿ

goa1_1

ಹಳೆ ವರ್ಷ ಕಳೆಯಲು ಇನ್ನೆರಡೇ ದಿನ ಬಾಕಿ ಇದೆ. ಹೊಸ ವರ್ಷವನ್ನು ಅದ್ಧೂರಿಯಾಗಿ ಸ್ವಾಗತಿಸಲು ಸಾಕಷ್ಟು ತಯಾರಿಗಳು ನಡೆಯುತ್ತಿವೆ. ಅನೇಕರು ಈಗಾಗಲೇ ತಮ್ಮ ನೆಚ್ಚಿನ ಸ್ಥಳಗಳಿಗೆ ಹೊರಟು ನಿಂತಿದ್ದಾರೆ. ಮತ್ತೆ ಕೆಲವರು ಪ್ರಯಾಣ ಬೆಳೆಸುವ ಸಿದ್ಧತೆಯಲ್ಲಿದ್ದಾರೆ.

ಪ್ರತಿ ವರ್ಷ ಟಿವಿಯಲ್ಲಿ ಹೊಸ ವರ್ಷಾಚರಣೆ ಸಂಭ್ರಮ ನೋಡಿದ್ದು ಸಾಕು, ಈ ವರ್ಷ ನಾವು ಯಾವುದಾದ್ರೂ ಸುಂದರ ಸ್ಥಳಗಳಿಗೆ ಹೋಗಿ ಬರೋಣ ಎನ್ನುವ ಯೋಚನೆಯಲ್ಲಿಯೇ ಇನ್ನೂ ನೀವಿದ್ದರೆ ಈ ಸ್ಥಳಗಳಲ್ಲಿ ಯಾವುದನ್ನಾದ್ರೂ ಒಂದನ್ನು ಆಯ್ಕೆ ಮಾಡಿಕೊಳ್ಳಿ.

ಬೆಂಗಳೂರು : ನಮ್ಮ ರಾಜಧಾನಿ ಬಗ್ಗೆ ಹೊಸದಾಗಿ ಹೇಳಬೇಕಾಗಿಲ್ಲ. ಐಟಿ ಸಿಟಿಯ ಎಂ.ಜಿ. ರಸ್ತೆ ಹಾಗೂ ಬ್ರಿಗೇಡ್ ರಸ್ತೆ ಡಿಸೆಂಬರ್ 31ರಂದು ರಂಗು ಬದಲಾಯಿಸಿರುತ್ತದೆ. ಅದ್ಧೂರಿಯಾಗಿ ಹೊಸ ವರ್ಷವನ್ನು ಇಲ್ಲಿ ಆಚರಿಸಲಾಗುತ್ತದೆ. ತಡರಾತ್ರಿವರೆಗೆ ನಡೆಯುವ ಪಾರ್ಟಿಗಳು, ಪಾರ್ಟಿ ಪ್ರಿಯರನ್ನು ಸೆಳೆಯುತ್ತವೆ.

ಗೋವಾ : ಪ್ರವಾಸ, ಮೋಜು, ಮಸ್ತಿ ಎಂದ ತಕ್ಷಣ ನೆನಪಾಗುವ ಹೆಸರು ಗೋವಾ. ಹೊಸ ವರ್ಷಾಚರಣೆಗೆ ಗೋವಾ ಹೇಳಿ ಮಾಡಿಸಿದ ಸ್ಥಳ. ನಿಮ್ಮ ಸ್ನೇಹಿತರ ಜೊತೆ ಗೋವಾಕ್ಕೆ ಹೋಗಿ ಮನಸ್ಸಿಗೆ ಬಂದಷ್ಟು ಕುಣಿದು ಕುಪ್ಪಳಿಸಿ ಬನ್ನಿ.

ಮುಂಬೈ : ಮಾಯಾನಗರಿ ಮುಂಬೈ ಬಾಲಿವುಡ್ ಹಾರ್ಟ್. ಹೊಸ ವರ್ಷದಲ್ಲಿ ಸುತ್ತಾಡುವ ಯೋಚನೆ ಹಾಕಿಕೊಂಡಿದ್ದರೆ ನಿಮಗೆ ಇಲ್ಲಿ ನಿರಾಸೆಯಾಗೋದಿಲ್ಲ. ತಡರಾತ್ರಿಯವರೆಗೂ ಪಾರ್ಟಿ, ಡಾನ್ಸ್, ಸಂಗೀತ ಸೇರಿದಂತೆ ವಿವಿಧ ಕಾರ್ಯಕ್ರಮಗಳು ನಡೆಯುತ್ತಿರುತ್ತವೆ.

ನವದೆಹಲಿ : ಹೊಸ ವರ್ಷದ ಪಾರ್ಟಿಗೆ ದೇಶದ ರಾಜಧಾನಿ ದೆಹಲಿ ಪ್ರಸಿದ್ಧಿ ಪಡೆದಿದೆ. ಬಗೆ ಬಗೆಯ ಪಾರ್ಟಿಗಳು ಇಲ್ಲಿ ನಡೆಯುತ್ತವೆ. ಸಾಕಷ್ಟು ಮೋಜು-ಮಸ್ತಿಯೊಂದಿಗೆ ಹೊಸ ವರ್ಷವನ್ನು ಸ್ವಾಗತಿಸಲಾಗುತ್ತದೆ.

ಮನಾಲಿ : ಹೊಸ ವರ್ಷಾಚರಣೆಗೆ ಮನಾಲಿ ಬೆಸ್ಟ್ ಪ್ಲೇಸ್. ಹೊಸ ವರ್ಷಾಚರಣೆಗೆಂದು ಇಲ್ಲಿಗೆ ಸಾಕಷ್ಟು ಮಂದಿ ಬರ್ತಾರೆ. ವಿದೇಶಿಗರ ಸಂಖ್ಯೆ ಹೆಚ್ಚು. ಹಿಮದಿಂದ ಕೂಡಿರುವ ಈ ಸ್ಥಳವನ್ನು ನೋಡಲು ಎರಡು ಕಣ್ಣು ಸಾಲದು.

ಕಸೋಲ್ : ಹೊಸ ವರ್ಷಾಚರಣೆಯನ್ನು ಕಸೋಲ್ ನಲ್ಲಿ ವೆಲ್ ಕಂ ಮಾಡಿ. ಇದು ಪ್ರೇಮಿಗಳಿಗೆ ಹೇಳಿ ಮಾಡಿಸಿದ ಸ್ಥಳ.

ವರ್ಕಲ : ಕೇರಳದ ತಿರುವನಂತಪುರಂ ಹೊರವಲಯದಲ್ಲಿರುವ ವರ್ಕಲ ಕಡಲತಡಿ ಪ್ರವಾಸಕ್ಕೆ ಅತ್ಯುತ್ತಮ ಸ್ಥಳ. ವರ್ಷಾಚರಣೆ ವೇಳೆ ಇಲ್ಲಿ ಜನರ ಸಂಖ್ಯೆ ಕಡಿಮೆ ಇರುವುದಲ್ಲದೆ ಸ್ವಾದಿಷ್ಟ್ಯಭೋಜನ ನಿಮ್ಮನ್ನು ಸೆಳೆಯುತ್ತದೆ.

Subscribe Newsletter

Email *

Get latest updates on your inbox...

Opinion Poll

  • 500 ಮತ್ತು 1000 ರೂ. ನೋಟುಗಳ ನಿಷೇಧದಿಂದ ಕಪ್ಪು ಹಣಕ್ಕೆ ಕಡಿವಾಣ ಬೀಳಲಿದೆಯಾ..?

    View Results

    Loading ... Loading ...