alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರವಾಸಿಗರಿಗೆ ಸಿಗುತ್ತೆ ಉಚಿತ ವೈಫೈ ಸೌಲಭ್ಯ

evrest-wifi

ಕಠ್ಮಂಡು: ವಿಶ್ವದ ಅತಿ ಎತ್ತರದ ಪರ್ವತ ‘ಮೌಂಟ್ ಎವರೆಸ್ಟ್’ ಚಾರಣಿಗರಿಗೆ ಮತ್ತು ಪ್ರವಾಸಿಗರಿಗೆ ಸಿಹಿ ಸುದ್ದಿ ಇಲ್ಲಿದೆ.

ಎವರೆಸ್ಟ್ ಬೇಸ್ ಕ್ಯಾಂಪ್ ನಲ್ಲಿ ಉಚಿತ ವೈಫೈ ಸೌಲಭ್ಯ ಕಲ್ಪಿಸಲು ನೇಪಾಳ ಸರ್ಕಾರ ಮುಂದಾಗಿದೆ.

ಮೌಂಟ್ ಎವರೆಸ್ಟ್ ನ 5360 ಮೀಟರ್(17,600 ಅಡಿ) ಎತ್ತರದಲ್ಲಿರುವ ಬೇಸ್ ಕ್ಯಾಂಪ್ ನಲ್ಲಿ ವೈಫೈ ಸೌಲಭ್ಯ ಕಲ್ಪಿಸಲಿದ್ದು, ಪರ್ವತದ ತುದಿಯವರೆಗೆ ವೈಫೈ ಸಂಪರ್ಕ ವಿಸ್ತರಿಸಲಾಗುವುದು.

ನೇಪಾಳ ದೂರ ಸಂಪರ್ಕ ಇಲಾಖೆ, ಪ್ರವಾಸೋದ್ಯಮ ಇಲಾಖೆ ಸಹಯೋಗದಲ್ಲಿ ನಿರ್ಮಾಣವಾಗುತ್ತಿರುವ ಈ ‘ಒಕುಮುರಾ ಮಾಡೆಲ್’ ಯೋಜನೆಯಿಂದ ಚಾರಣಿಗರಿಗೆ, ಪ್ರವಾಸಿಗರಿಗೆ ಅನುಕೂಲವಾಗಲಿದೆ. ಸಮೀಪದಲ್ಲಿ ಕೆಲವು ಹೋಟೆಲ್ ಮತ್ತು ರೆಸ್ಟೋರೆಂಟ್ ಗಳು ವೈಫೈ ಸೌಲಭ್ಯ ಕಲ್ಪಿಸಲು ಗಂಟೆಗೆ 5 ಡಾಲರ್ ಶುಲ್ಕ ವಿಧಿಸುತ್ತಿವೆ. ಇದನ್ನು ತಪ್ಪಿಸಿ ಉಚಿತವಾಗಿ ವೈಫೈ ಸೌಲಭ್ಯ ಕಲ್ಪಿಸಲಾಗುತ್ತಿದೆ. ಇದು ವೈಫೈ ಸೌಲಭ್ಯ ಇರುವ ಎತ್ತರದ ಸ್ಥಳವಾಗಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...