alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರವಾಸಿಗರ ಮೆಚ್ಚಿನ ತಾಣ ನಾಗರಹೊಳೆ ರಾಷ್ಟ್ರೀಯ ಉದ್ಯಾನ

nagara hole

ಮಡಿಕೇರಿ ಮತ್ತು ಮೈಸೂರು ಜಿಲ್ಲೆಯ ವ್ಯಾಪ್ತಿಯಲ್ಲಿರುವ ನಾಗರಹೊಳೆ ರಾಷ್ಟ್ರೀಯ ಉದ್ಯಾನ ಮೈಸೂರಿನಿಂದ ಸುಮಾರು 90 ಕಿಲೋ ಮೀಟರ್ ದೂರದಲ್ಲಿದೆ. ಪ್ರವಾಸಿ ವಾಹನ ಇಲ್ಲವೇ ಬಸ್ ಗಳಲ್ಲಿ ಬೆಳಿಗ್ಗೆ ಹೊರಟು ರಾತ್ರಿ ಹಿಂತಿರುಗಬಹುದಾಗಿದೆ. ಹಿಂದೆ ಮೈಸೂರು ಅರಸರು ಹಾಗೂ ಬ್ರಿಟೀಷರ ಕಾಲದಲ್ಲಿ ಇದು ಬೇಟೆಯಾಡುವ ಪ್ರದೇಶವಾಗಿತ್ತು. ಬಳಿಕ ಮೀಸಲು ಅರಣ್ಯ, ರಾಷ್ಟ್ರೀಯ ಉದ್ಯಾನವಾಗಿ ಘೋಷಿಸಲಾಗಿದೆ.

ದಟ್ಟವಾದ ಅರಣ್ಯದಿಂದ ಕೂಡಿದ ನಾಗರಹೊಳೆ ಜೀವವೈವಿಧ್ಯತೆಯ ತಾಣ. ಶ್ರೀಗಂಧ, ತೇಗ, ಹೊನ್ನೆ ಮೊದಲಾದ ಮರಗಳು, ಸುವಾಸನೆ ಬೀರುವ ಹೂಗಳು, ಹಸಿರು ನಿಸರ್ಗದ ನಡುವೆ ಪ್ರಾಣಿ ಪಕ್ಷಿಗಳು ನಲಿದಾಡುತ್ತವೆ. ಕ್ರೂರ ಮೃಗಗಳು ಸೇರಿದಂತೆ ಹಲವು ರೀತಿಯ ಪ್ರಾಣಿ, ಪಕ್ಷಿಗಳು ಇಲ್ಲಿವೆ. ಅಲ್ಲದೇ, ಅಲ್ಲಲ್ಲಿ ಕೆಲವು ಬುಡಕಟ್ಟು ಜನಾಂಗದವರೂ ವಾಸವಾಗಿದ್ದಾರೆ. ಮೇ ತಿಂಗಳಿನಿಂದ ಸೆಪ್ಟಂಬರ್ ಒಳಗೆ ನಾಗರ ಹೊಳೆಗೆ ಹೋಗಿಬರಬಹುದಾಗಿದೆ. ಉಳಿಯಲು ಸೂಕ್ತ ವಸತಿ ವ್ಯವಸ್ಥೆ ಇದೆ.

ನಾಗರಹೊಳೆ ಭಾಗವಾಗಿರುವ ಕಾರಾಪುರ ಅರಣ್ಯ ಪ್ರದೇಶ ಮೈಸೂರಿನಿಂದ 80 ಕಿಲೋ ಮೀಟರ್ ದೂರದಲ್ಲಿದೆ. ಕಬಿನಿ ನದಿ ಹರಿಯುವ ಪ್ರದೇಶ ಮನಮೋಹಕವಾಗಿದೆ. ಇಳಿಜಾರಿನ ಕಣಿವೆ, ಕಡಿದಾದ ಗಿರಿಶಿಖರ ಇಲ್ಲಿದ್ದು, ನೋಡುವುದೇ ಕಣ್ಣಿಗೆ ಹಬ್ಬ. ವಸತಿ ಗೃಹ, ಟೆಂಟ್ ಗಳು ಕೂಡ ಇವೆ. ಮಾಹಿತಿಗೆ ಅರಣ್ಯ ಇಲಾಖೆ ಕಚೇರಿಯನ್ನು ಸಂಪರ್ಕಿಸಿದರೆ ಅನುಕೂಲವಾಗುತ್ತದೆ. ಮೈಸೂರಿನಿಂದ ಪ್ರವಾಸಿ ವಾಹನಗಳು ಸಿಗುತ್ತವೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...