alex Certify
ಕನ್ನಡ ದುನಿಯಾ       Mobile App
       

Kannada Duniya

‘ಮುಂಬೈ ದರ್ಶನ್’ ನಲ್ಲಿ ಇನ್ಮುಂದೆ ಇದೂ ಇರಲಿದೆ

Antilla-a33344ಮುಂಬೈಗೆ ಪ್ರವಾಸಕ್ಕೆಂದು ಹೋದ ವೇಳೆ ಪ್ರಮುಖ ಪ್ರೇಕ್ಷಣೀಯ ಸ್ಥಳಗಳನ್ನು ತೋರಿಸಲು ಖಾಸಗಿ ಬಸ್ ನವರು ಪೈಪೋಟಿ ನಡೆಸುತ್ತಾರೆ. ಮಹಾರಾಷ್ಟ್ರ ಪ್ರವಾಸೋದ್ಯಮ ಇಲಾಖೆ, ಮುಂಬೈ ಸಾರಿಗೆ ಸಂಸ್ಥೆ ‘ಬೆಸ್ಟ್’ ಸಹಕಾರದೊಂದಿಗೆ ಖಾಸಗಿಯವರಿಗೆ ಸೆಡ್ಡು ಹೊಡೆಯಲು ಈಗ ಮುಂದಾಗಿದೆ.

ಪ್ರವಾಸಿಗರ ಬಹು ಬೇಡಿಕೆಯಂತೆ ಖ್ಯಾತ ಬಾಲಿವುಡ್ ನಟರ ಹಾಗೂ ಉದ್ಯಮಿಗಳ ಬೃಹತ್ ಬಂಗಲೆಗಳನ್ನು ತನ್ನ ಪ್ರೇಕ್ಷಣೀಯ ಸ್ಥಳಗಳ ಪಟ್ಟಿಯಲ್ಲಿ ‘ಬೆಸ್ಟ್’ ಸೇರ್ಪಡೆ ಮಾಡಿಕೊಂಡಿದ್ದು. ಅದರಂತೆ ನಟ ಸಲ್ಮಾನ್ ಖಾನ್, ಶಾರೂಕ್ ಖಾನ್, ಗಾಯಕಿ ಲತಾ ಮಂಗೇಶ್ಕರ್ ಹಾಗೂ ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಅಂಬಾನಿಯವರ ಬಂಗಲೆಗಳು ಈ ಪಟ್ಟಿಯಲ್ಲಿವೆ.

‘ಮುಂಬೈ ದರ್ಶನ’ ಕ್ಕೆ ‘ಬೆಸ್ಟ್’ ಪ್ರತಿ ಪ್ರವಾಸಿಗರಿಗೆ ತಲಾ 500 ರೂ. ಶುಲ್ಕ ವಿಧಿಸುತಿದ್ದು, ಬಹುದಾಜಿ ಲಾಡ್ ಮ್ಯೂಸಿಯಮ್, ಛತ್ರಪತಿ ಶಿವಾಜಿ ವಸ್ತು ಸಂಗ್ರಹಾಲಯ, ಮಣಿ ಭವನ್, ಹ್ಯಾಂಗಿಂಗ್ ಗಾರ್ಡನ್, ನೆಹರೂ ಸೆಂಟರ್ ಮತ್ತು ಪ್ಲಾನೆಟೋರಿಯಂ, ಬ್ಯಾಂಡ್ ಸ್ಟ್ಯಾಂಡ್, ಮೇಯರ್ ಬಂಗಲೆ ಮೊದಲಾದ ಸ್ಥಳಗಳಿಗೆ ಕರೆದುಕೊಂಡು ಹೋಗಲಾಗುತ್ತದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...