alex Certify
ಕನ್ನಡ ದುನಿಯಾ       Mobile App
       

Kannada Duniya

ಹಸುಗೂಸಿನೊಂದಿಗೆ ಜಗತ್ತು ಸುತ್ತುತ್ತಿದ್ದಾಳೆ ಬಾಣಂತಿ

ಸಾಮಾನ್ಯವಾಗಿ ಹೆರಿಗೆ ರಜೆಯಲ್ಲಿ ಮಹಿಳೆಯರು ವಿಶ್ರಾಂತಿ ಪಡೀತಾರೆ. ಮಗುವಿನ ಲಾಲನೆಪಾಲನೆಯಲ್ಲಿ ಸಮಯ ಕಳೀತಾರೆ. ಆದ್ರೆ 32 ವರ್ಷದ ಕರೆನ್ ಎಡ್ವರ್ಡ್ಸ್ ಮಾತ್ರ ಇದಕ್ಕೆ ತದ್ವಿರುದ್ಧ. ಲಂಡನ್ ನಲ್ಲಿ ನರ್ಸ್ ಆಗಿ ಕೆಲಸ ಮಾಡ್ತಿರೋ ಕರೆನ್, ಟ್ರಾವೆಲ್ ಬ್ಲಾಗರ್ ಕೂಡ ಹೌದು.

ಹೆರಿಗೆ ರಜೆಯಲ್ಲಿ ಕರೆನ್ ವಿಶ್ರಾಂತಿ ಪಡೆಯೋ ಬದಲು ಜಗತ್ತು ಸುತ್ತುತ್ತಾಳೆ. 2016ರಲ್ಲಿ ಕರೆನ್ ಗೆ ಮೊದಲ ಬಾರಿ ಮಗು ಜನಿಸಿತ್ತು. ಆಗ ಕೂಡ ಹಸುಗೂಸನ್ನು ಕರೆದುಕೊಂಡು ಪತಿಯೊಂದಿಗೆ ಕರೆನ್ ಬೇರೆ ಬೇರೆ ದೇಶಗಳಿಗೆ ಪ್ರವಾಸ ಹೋಗಿದ್ಲು.

ಈಗ ಎರಡನೇ ಬಾರಿ ಅವಳಿಗೆ ಹೆರಿಗೆ ಆಗಿದ್ದು, ಮತ್ತೆ ಅದೇ ರೀತಿ ಪ್ರಪಂಚ ಸುತ್ತುತ್ತಿದ್ದಾಳೆ. ಪತಿ ಶಾನ್ ಬೇಯ್ಸ್ ಕೂಡ ಕರೆನ್ ಗೆ ಸಾಥ್ ನೀಡಿದ್ದಾನೆ. ಫ್ಯಾಮಿಲಿ ಟೂರ್ ಫೋಟೋಗಳನ್ನು ಸಾಮಾಜಿಕ ತಾಣಗಳಲ್ಲಿ ಇಬ್ಬರೂ ಶೇರ್ ಮಾಡಿದ್ದಾರೆ.

ಬ್ರಿಟನ್ ನಲ್ಲಿ ಮಹಿಳೆಯರಿಗೆ 1 ವರ್ಷ ಹೆರಿಗೆ ರಜೆ ಕೊಡಲಾಗುತ್ತಿದೆಯಂತೆ. ಹಾಗಾಗಿ ತಾನು ನಿಜಕ್ಕೂ ಅದೃಷ್ಟವಂತೆ ಎನ್ನುತ್ತಾಳೆ ಕೆರನ್. ಮೂರು ವರ್ಷದ ಮಗಳು ಎಸ್ಮೆ ಹಾಗೂ 9 ವಾರಗಳ ಪುಟ್ಟ ಕಂದನನ್ನು ಕರೆದುಕೊಂಡು ಕರೆನ್ ಸುತ್ತಾಡುತ್ತಿದ್ದಾಳೆ.

Subscribe Newsletter

Get latest updates on your inbox...

Opinion Poll

  • ಗುಜರಾತ್ ಫಲಿತಾಂಶ ಕರ್ನಾಟಕ ವಿಧಾನಸಭಾ ಚುನಾವಣೆ ಮೇಲೆ ಪರಿಣಾಮ ಬೀರಲಿದೆಯೇ...?

    View Results

    Loading ... Loading ...