alex Certify
ಕನ್ನಡ ದುನಿಯಾ       Mobile App
       

Kannada Duniya

ವಾರಾಂತ್ಯದ ಬಿಡುವಿಗೆ ಇಲ್ಲಿದೆ ಸ್ವರ್ಗ

ವಾರವಿಡಿ ದುಡಿದು ದಣಿದ ದೇಹ, ಮನಸಿಗೆ ವಿಶ್ರಾಂತಿ ಸಿಕ್ಕರೆ ಮತ್ತೆ ಹೊಸ ಹುಮ್ಮಸ್ಸು ಮೂಡುತ್ತದೆ. ಈ ದಿನಗಳಲ್ಲಿ ವಾರಾಂತ್ಯದ ಬಿಡುವಿಗೆ ಪ್ರಶಸ್ತವಾದ ಸ್ಥಳ ಯಾವುದು ಎಂದು ಯೋಚಿಸುತ್ತಿರುವವರಿಗೆ ಮಾಹಿತಿ ಇಲ್ಲಿದೆ.

ಪ್ರತಿ 20 ನಿಮಿಷಕ್ಕೊಮ್ಮೆ ಇಲ್ಲಿ ಬದಲಾಗುವ ವಾತಾವರಣ ನಿಮ್ಮನ್ನು ಹೊಸತೊಂದು ಲೋಕಕ್ಕೆ ಕರೆದೊಯ್ಯುತ್ತವೆ. ಸುತ್ತಲೂ ಹಸಿರಿನ ಗುಡ್ಡ, ಬೆಟ್ಟಗಳು, ಕಾಫಿ ತೋಟಗಳು ಮಂಜು, ತುಂತುರು ಮಳೆ ನಿಮಗೆ ಸ್ವರ್ಗವೇ ಧರೆಗಿಳಿದ ಅನುಭವ ನೀಡುತ್ತವೆ.

ಹೌದು ಇಂತಹುದೊಂದು ದೃಶ್ಯ ವೈಭವ ಕಾಣಸಿಗುವುದು ಪ್ರವಾಸಿಗರ ಹಾಟ್ ಸ್ಪಾಟ್, ಕರ್ನಾಟಕದ ಊಟಿ ಎಂದೇ ಕರೆಯಲ್ಪಡುವ ಮುಳ್ಳಯ್ಯನಗಿರಿಯಲ್ಲಿ. ಮುಳ್ಳಯ್ಯನಗಿರಿಗೆ ಪ್ರಸ್ತುತ ಹೆಚ್ಚಿನ ಪ್ರವಾಸಿಗರು ಭೇಟಿ ನೀಡಿ ಇಲ್ಲಿನ ಸೌಂದರ್ಯಕ್ಕೆ ಮಾರುಹೋಗುತ್ತಿದ್ದಾರೆ. ಮಾತ್ರವಲ್ಲ, ಹೊಸ ಉಲ್ಲಾಸ -ಚೈತನ್ಯವನ್ನು ಪಡೆಯುತ್ತಿದ್ದಾರೆ.

ಹಸಿರು ಗಿರಿಯ ಕಾನನ, ಹಸಿರನ್ನೇ ಹೊದ್ದುಕೊಂಡ ಬೆಟ್ಟಗಳ ಸಾಲು, ಮುಂಜಾನೆಯ ಮಂಜು, ತುಂತುರು ಹನಿಗಳು, ನಿಮ್ಮ ಮನಸ್ಸು ರಿಲ್ಯಾಕ್ಸ್ ಆಗಲು ಇನ್ನೇನು ಬೇಕು. ಅಂಕುಡೊಂಕಿನ ರಸ್ತೆಯಲ್ಲಿ ಸಾಗುವುದೇ ಚೆಂದ. ಅದರಲ್ಲಿಯೂ ಬೆಟ್ಟದ ಮೇಲಿನ ಅನುಭವ, ದೃಶ್ಯ ವೈಭವವನ್ನು ವರ್ಣಿಸಲು ಅಸಾಧ್ಯ.

ಚಿಕ್ಕಮಗಳೂರಿನಿಂದ ಸುಮಾರು 30 ಕಿಲೋ ಮೀಟರ್ ದೂರದಲ್ಲಿ ಮುಳ್ಳಯ್ಯನಗಿರಿ ಇದೆ. ಹಿಮಾಲಯ ಮತ್ತು ನೀಲಗಿರಿ ಪರ್ವತಶ್ರೇಣಿಯ ಮಧ್ಯೆ ಇರುವ ಅತಿ ಎತ್ತರದ ಪ್ರದೇಶ ಇದೆಂದು ಹೇಳಲಾಗಿದೆ. ವಾರಾಂತ್ಯದ ಪ್ರವಾಸಕ್ಕೆ ಹೇಳಿ ಮಾಡಿಸಿದ ಸ್ಥಳವಾಗಿದೆ. ನೀವೂ ಒಮ್ಮೆ ಹೋಗಿ ಬನ್ನಿ. ಚಳಿಗಾಲದ ವಿಭಿನ್ನ ಅನುಭವ ಪಡೆದು, ದೃಶ್ಯ ವೈಭವ ಕಣ್ತುಂಬಿಕೊಳ್ಳಿ.

Subscribe Newsletter

Get latest updates on your inbox...

Opinion Poll

  • ಗುಜರಾತ್ ಫಲಿತಾಂಶ ಕರ್ನಾಟಕ ವಿಧಾನಸಭಾ ಚುನಾವಣೆ ಮೇಲೆ ಪರಿಣಾಮ ಬೀರಲಿದೆಯೇ...?

    View Results

    Loading ... Loading ...