alex Certify
ಕನ್ನಡ ದುನಿಯಾ       Mobile App
       

Kannada Duniya

ಸಾರ್ವಜನಿಕ ಪ್ರವೇಶಕ್ಕೆ ಮುಕ್ತವಾಗಲಿದೆ ಮೊಘಲ್ ಉದ್ಯಾನವನ

bhawan

ರಾಷ್ಟ್ರಪತಿ ಭವನದ ಪ್ರಸಿದ್ಧ ಮೊಘಲ್ ಉದ್ಯಾನವನ ಭಾನುವಾರ ಸಾರ್ವಜನಿಕರ ಪ್ರವೇಶಕ್ಕೆ ಮುಕ್ತವಾಗಲಿದೆ. ಶನಿವಾರ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಇದನ್ನು ಉದ್ಘಾಟಿಸಲಿದ್ದಾರೆ.

ಸಾರ್ವಜನಿಕರಿಗೆ ತುಂಬಾ ಇಷ್ಟವಾಗುವ ಮೊಘಲ್ ಉದ್ಯಾವನ ಫೆಬ್ರವರಿ ಐದರಿಂದ ಮಾರ್ಚ್ 12ರವರೆಗೆ ಸಾರ್ವಜನಿಕ ಮುಕ್ತವಾಗಿರಲಿದೆ. ಬೆಳಿಗ್ಗೆ 9.30ರಿಂದ ಸಂಜೆ 4 ಗಂಟೆಯವರೆಗೆ ಉದ್ಯಾನವನದಲ್ಲಿ ಕಾಲ ಕಳೆಯಬಹುದಾಗಿದೆ. ನಿರ್ವಹಣೆಗಾಗಿ ಭಾನುವಾರ ಉದ್ಯಾನವನದ ಬಾಗಿಲು ಮುಚ್ಚಿರಲಿದೆ.

ಫೆಬ್ರವರಿ 4ರಂದು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಉದ್ಘಾಟನೆ ಮಾಡಲಿದ್ದಾರೆ. ಗೇಟ್ ಸಂಖ್ಯೆ 35 ರಲ್ಲಿ ಸಾರ್ವಜನಿಕರು ಪ್ರವೇಶ ಮಾಡಬಹುದು. ಹಾಗೆ ಅದೇ ಗೇಟ್ ಮೂಲಕ ಹೊರಗೆ ಹೋಗಲು ಅವಕಾಶ ಮಾಡಿಕೊಡಲಾಗಿದೆ ಎಂದು ಉದ್ಯಾನವನದ ಮೂಲಗಳು ಹೇಳಿವೆ.

ಉದ್ಯಾನವನದಲ್ಲಿ ಸುಂದರವಾದ ಹುಲ್ಲು, ಆಧ್ಯಾತ್ಮಿಕ ಉದ್ಯಾನವನ, ಗಿಡಮೂಲಿಕೆಯ ಗಾರ್ಡನ್ ಹಾಗೂ ಸಂಗೀತ ಉದ್ಯಾನವನವಿದೆ. ನೀರಿನ ಬಾಟಲಿ,ಕ್ಯಾಮರಾ, ರೆಡಿಯೋ, ಬ್ಯಾಗ್, ತಿಂಡಿ ಸೇರಿದಂತೆ ಯಾವುದೇ ವಸ್ತುಗಳನ್ನು ಉದ್ಯಾನವನಕ್ಕೆ ತರುವಂತಿಲ್ಲ. ಶೌಚಾಲಯ, ಪ್ರಥಮ ಚಿಕಿತ್ಸೆ, ವೈದ್ಯಕೀಯ ಸೌಲಭ್ಯಗಳನ್ನು ಅಲ್ಲಿಯೇ ಒದಗಿಸಲಾಗುವುದು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...