alex Certify
ಕನ್ನಡ ದುನಿಯಾ       Mobile App
       

Kannada Duniya

ಮಣ್ಣಿನಲ್ಲಿ ರೋಮ್ಯಾನ್ಸ್ ಮಾಡ್ತಾರೆ ಇಲ್ಲಿನ ಜನ

12_24_398650844mud-festival-enjoy-ll

ಪ್ರತಿಯೊಂದು ದೇಶಕ್ಕೂ ತನ್ನದೇ ಆದ ಸಂಸ್ಕೃತಿಯಿದೆ. ಪ್ರತಿಯೊಂದು ದೇಶವೂ ವಿಭಿನ್ನ ಸಂಪ್ರದಾಯ, ಹಬ್ಬಗಳನ್ನು ಆಚರಿಸುತ್ತದೆ. ದೇಶ ಸುತ್ತುವ ಮಂದಿ ಎಲ್ಲ ದೇಶಗಳ ವಿಭಿನ್ನ ಹಬ್ಬಗಳಲ್ಲಿ ಪಾಲ್ಗೊಂಡು ಎಂಜಾಯ್ ಮಾಡ್ತಾರೆ. ಬೇರೆ ಬೇರೆ ದೇಶಗಳಿಗೆ ಹೋಗಿ ಅಲ್ಲಿನವರ ಜೊತೆ ಒಂದಾಗಿ ಹಬ್ಬ ಆಚರಿಸುವವರಿಗೆ ಬ್ರೆಜಿಲ್ ನ ‘ಮಡ್ ಫೆಸ್ಟಿವಲ್’ ಬಗ್ಗೆ ತಿಳಿದಿರುತ್ತದೆ.

ಬ್ರೆಜಿಲ್ ನಲ್ಲಿ ಮಡ್ ಫೆಸ್ಟ್ ಆಚರಿಸಲಾಗುತ್ತದೆ. ಈ ಹಬ್ಬದ ವಿಶೇಷ ಮಣ್ಣು. ಮಣ್ಣಿನಲ್ಲಿ ಮಿಂದೇಳುವ ಪ್ರತಿಯೊಬ್ಬರೂ ಆ ಕ್ಷಣವನ್ನು ಎಂಜಾಯ್ ಮಾಡ್ತಾರೆ. ದೂರದೂರದಿಂದ ಈ ಹಬ್ಬಕ್ಕಾಗಿ ಬ್ರೆಜಿಲ್ ಗೆ ಬರ್ತಾರೆ ಪ್ರವಾಸಿಗರು. ಪ್ರೇಮಿಗಳಿಗೆ ಹೇಳಿ ಮಾಡಿಸಿದ ಹಬ್ಬ ಇದು. ಹುಡುಗಿಯರು ಬಿಕನಿ ತೊಟ್ಟು ಮಣ್ಣಿಗೆ ಇಳಿದ್ರೆ ಹುಡುಗರು ಅಂಡರ್ವೇರ್ ಧರಿಸಿ ಮಣ್ಣಿಗಿಳಿಯುತ್ತಾರೆ.

ಮಣ್ಣಿನಲ್ಲಿ ಬಿದ್ದು ಹೊರಳಾಡುವ ಮಂದಿ ಫೋಟೋ, ಸೆಲ್ಫಿ ಅಂತಾ ಮಡ್ ಫೆಸ್ಟ್ ಎಂಜಾಯ್ ಮಾಡ್ತಾರೆ. ಮುಖ, ತಲೆಯೆಲ್ಲ ಮಣ್ಣಾಗಿರುವುದರಿಂದ ಆಪ್ತರನ್ನು ಗುರುತು ಹಿಡಿಯುವುದು ಕಷ್ಟ. ಆದ್ರೆ ಮಣ್ಣಿನಲ್ಲಿ ರೋಮ್ಯಾನ್ಸ್ ಮಾಡುವ, ಎಂಜಾಯ್ ಮಾಡುವ ಜೋಡಿಗಳಿಗೆ ಇದ್ರ ಪರಿವೆ ಇರೋದಿಲ್ಲ. ಪ್ರತಿವರ್ಷ ಈ ಮಡ್ ಫೆಸ್ಟ್ ಆಚರಿಸಲಾಗುತ್ತದೆ. ಮಣ್ಣಿನಲ್ಲಿ ಮಿಂದೆದ್ದು, ಮನಸ್ಪೂರ್ತಿ ಕುಣಿದು ಕುಪ್ಪಳಿಸು ಆಸೆ ನಿಮಗೂ ಇದ್ದರೆ ಒಮ್ಮೆ ಮಣ್ಣಿನ ಹಬ್ಬಕ್ಕೆ ಹೋಗಿ ಬನ್ನಿ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...