alex Certify
ಕನ್ನಡ ದುನಿಯಾ       Mobile App
       

Kannada Duniya

OMG! ಮಾಯವಾಗುತ್ತೆ ಈ ರಸ್ತೆಯಲ್ಲಿ ಓಡಾಡುವ ವಾಹನ

highway_iceu6pc

ಜಗತ್ತಿನ ಸಾಕಷ್ಟು ಸ್ಥಳಗಳ ನಿಗೂಢತೆಯನ್ನು ವಿಜ್ಞಾನಿಗಳಿಗೆ ಇನ್ನೂ ಬೇಧಿಸಲು ಸಾಧ್ಯವಾಗಿಲ್ಲ. ಅದ್ರಲ್ಲಿ ಅಮೆರಿಕಾದ 666 ರಸ್ತೆ ಕೂಡ ಒಂದು. ಈ 666 ರಸ್ತೆ ಇತಿಹಾಸ ತುಂಬಾ ಹಳೆಯದು. ನಿಗೂಢವಾಗಿರುವ ಈ ರಸ್ತೆಗೆ ಜನರು ಡೆವಿಲ್ಸ್ ರೋಡ್ ಎಂದೇ ಕರೆಯುತ್ತಾರೆ.

ದಿ ಡೆವಿಲ್ಸ್ ಹೈವೇ ಎಂದೇ ಕರೆಯಲಾಗುವ ಈ ರಸ್ತೆ 193 ಮೈಲಿ ಉದ್ದವಿದೆ. ಈ ರಸ್ತೆಗೆ 666 ಎಂದು 1926ರಲ್ಲಿ ಹೆಸರಿಡಲಾಗಿತ್ತು. ಈ ರಸ್ತೆಗಿಳಿದ ಅನೇಕ ವಾಹನಗಳು ನಾಪತ್ತೆಯಾಗಿವೆ. ಅಪಘಾತದ ಸಂಖ್ಯೆ ಕೂಡ ಹೆಚ್ಚಾಗ್ತಾನೆ ಇದೆ. ನ್ಯೂ ಮೆಕ್ಸಿಕೋ, ಕೊಲೊರಾಡೋ, ಉತಾಹ್ ಮತ್ತು ಅರಿಜೋನಾವನ್ನು ಸಂಪರ್ಕಿಸುವ ಈ ರಸ್ತೆಯಲ್ಲಿ ಇಷ್ಟೆಲ್ಲ ನಡೆಯಲು ಕಾರಣ 666 ಸಂಖ್ಯೆ ಕಾರಣ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದರು. 1992ರಲ್ಲಿ ಅರಿಜೋನಾಕ್ಕೆ ಸಂಪರ್ಕ ಕಲ್ಪಿಸ್ತಾ ಇದ್ದ ಈ ರಸ್ತೆ ಸಂಪರ್ಕವನ್ನು ಬಂದ್ ಮಾಡಲಾಗಿತ್ತು.

ಮೇ 23, 2013ರಂದು ಈ ರಸ್ತೆ ಹೆಸರನ್ನು ಬದಲಾಯಿಸಲಾಗಿದೆ. 666 ಬದಲು ಈ ರಸ್ತೆಗೆ 491 ಎಂದು ಹೆಸರಿಡಲಾಗಿದೆ. ಈ ರಸ್ತೆ ಬಗ್ಗೆ ಒಬ್ಬೊಬ್ಬರು ಒಂದೊಂದು ಕಥೆ ಹೇಳ್ತಾರೆ. ರಸ್ತೆಯಲ್ಲಿ ಓಡಾಡುವ ವಾಹನ ಏಕಾಏಕಿ ಮಾಯವಾಗುತ್ತದೆ. ಕೆಲ ಮೈಲಿ ದೂರದಲ್ಲಿ ವಾಹನ ಕಾಣಸಿಗುತ್ತದೆ. ಆದ್ರೆ ಅದ್ರಲ್ಲಿರುವ ವ್ಯಕ್ತಿಗಳ ಬಗ್ಗೆ ಮಾತ್ರ ಮಾಹಿತಿ ಸಿಗೋದಿಲ್ಲ ಎಂದು ಈ ರಸ್ತೆ ಬಗ್ಗೆ ಅನೇಕರು ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...