alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರವಾಸಿಗರ ಸೆಳೆಯುವ ಮಣ್ಣುಪಳ್ಳ ಕೆರೆ

ಉಡುಪಿ ಜಿಲ್ಲೆಯಲ್ಲಿ ಹಲವಾರು ಪ್ರವಾಸಿ, ಧಾರ್ಮಿಕ ಕೇಂದ್ರಗಳಿದ್ದು, ಅಪಾರ ಸಂಖ್ಯೆಯ ಪ್ರವಾಸಿಗರು ಭೇಟಿ ನೀಡುತ್ತಾರೆ. ಅವುಗಳಲ್ಲಿ ಪ್ರವಾಸಿಗರನ್ನು ಹೆಚ್ಚಾಗಿ ಸೆಳೆಯುವ ಮತ್ತೊಂದು ವಿಶೇಷ ತಾಣವೊಂದಿದೆ. ಅದೇ ಮಣ್ಣುಪಳ್ಳ ಕೆರೆ.

ಹೌದು, ಮಣ್ಣುಪಳ್ಳ ಕೆರೆ ಪ್ರಮುಖ ಪ್ರವಾಸಿ ತಾಣವಾಗಿ ಗುರುತಿಸಿಕೊಂಡಿದೆ. ಬೋಟಿಂಗ್, ವಾಯುವಿಹಾರಕ್ಕಾಗಿ ಇಲ್ಲಿಗೆ ಹೆಚ್ಚಿನ ಸಂಖ್ಯೆಯ ಜನ ಆಗಮಿಸುತ್ತಾರೆ.

ಮಣಿಪಾಲ ಸಮೀಪದಲ್ಲಿರುವ ಮಣ್ಣುಪಳ್ಳ ಕೆರೆಯಲ್ಲಿ ಖಾಸಗಿ ಸಂಸ್ಥೆಯೊಂದು ಬೋಟಿಂಗ್ ವ್ಯವಸ್ಥೆ ಮಾಡಿದೆ. ಈ ಕೆರೆಯನ್ನು ತನ್ನ ಸುಪರ್ದಿಗೆ ಪಡೆದ ಸಂಸ್ಥೆ ಕೆರೆಯನ್ನು ಅಭಿವೃದ್ಧಿಪಡಿಸಿ ಬೋಟಿಂಗ್ ವ್ಯವಸ್ಥೆ ಮಾಡಿದೆ. 16 ವಿವಿಧ ಬಗೆಯ ಬೋಟ್ ಗಳು ಇಲ್ಲಿದೆ. ಇದರಲ್ಲಿ ಪ್ರವಾಸಿಗರು ವಿಹರಿಸಬಹುದಾಗಿದೆ. ವಾಕಿಂಗ್ ಪಾತ್ ನಲ್ಲಿ ನಡೆದರೆ ಮನಸಿಗೆ ಉಲ್ಲಾಸವಾಗುತ್ತದೆ.

55 ಎಕರೆ ಪ್ರದೇಶದಲ್ಲಿ ನೀರು ಆವರಿಸಿದ್ದು, ನಡುವೆ ಕೃತಕ ದ್ವೀಪ ಗಮನ ಸೆಳೆಯುತ್ತದೆ. ವಾರಾಂತ್ಯದ ಬಿಡುವಿನಲ್ಲಿ ಇಲ್ಲಿಗೆ ಭೇಟಿ ನೀಡಿ ಪೆಡಲ್ ದೋಣಿ, ವಾಟರ್ ಸ್ಕೂಟರ್ ಸೇರಿದಂತೆ ವಿವಿಧ ಬೋಟ್ ಗಳಲ್ಲಿ ಎಂಜಾಯ್ ಮಾಡಬಹುದಾಗಿದೆ.

ಸುತ್ತಮುತ್ತಲಿನ ಜನ, ಕಾಲೇಜು ವಿದ್ಯಾರ್ಥಿಗಳು ಮಣ್ಣುಪಳ್ಳ ಕೆರೆಗೆ ಆಗಾಗ ಭೇಟಿ ನೀಡಿ ಖುಷಿ ಪಡುತ್ತಾರೆ. ಇಂತಹ ಸ್ಥಳದಲ್ಲಿ ನೀವು ಕೆಲ ಸಮಯವನ್ನು ಕಳೆದು ಬಂದಲ್ಲಿ ಉತ್ಸಾಹ ಹೆಚ್ಚಾಗುತ್ತದೆ. ಸುತ್ತಮುತ್ತ ಅನೇಕ ಪ್ರವಾಸಿ ಸ್ಥಳ ಮತ್ತು ಧಾರ್ಮಿಕ ಕ್ಷೇತ್ರಗಳಿದ್ದು, ಮೊದಲೇ ಮಾಹಿತಿ ಪಡೆದುಕೊಂಡು ಹೋದಲ್ಲಿ ಅನುಕೂಲವಾಗುತ್ತದೆ.

Subscribe Newsletter

Get latest updates on your inbox...

Opinion Poll

  • ಗುಜರಾತ್ ಫಲಿತಾಂಶ ಕರ್ನಾಟಕ ವಿಧಾನಸಭಾ ಚುನಾವಣೆ ಮೇಲೆ ಪರಿಣಾಮ ಬೀರಲಿದೆಯೇ...?

    View Results

    Loading ... Loading ...